Karnataka NewsBangalore News

ಹೊಸ ರೇಷನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್! ಮೇ ತಿಂಗಳ ಹೊಸ ಲಿಸ್ಟ್ ಬಿಡುಗಡೆ

ಸರ್ಕಾರದ ಯೋಜನೆಗಳನ್ನು ಸರಿಯಾದ ರೀತಿಯ ವರ್ಗದ ಜನರಿಗೆ ತಲುಪಿಸಬೇಕು ಎನ್ನುವ ಕಾರಣಕ್ಕಾಗಿ ರೇಷನ್ ಕಾರ್ಡ್ (ration card) ನಲ್ಲಿ ಬೇರೆ ಬೇರೆ ವಿಧಗಳನ್ನು ಸರ್ಕಾರ ಜಾರಿಗೆ ತಂದಿತ್ತು.

ಇನ್ನು ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅನ್ನು ಅತ್ಯಂತ ಆರ್ಥಿಕವಾಗಿ ಹಿಂದುಳಿದಿರುವಂತಹ ಕುಟುಂಬಗಳಿಗೆ ಉಚಿತ ಪಡಿತರವನ್ನು ಹಾಗೂ ಇನ್ನಿತರ ಯೋಜನೆಗಳನ್ನ ತಲುಪಿಸಬೇಕು ಎನ್ನುವ ನಿಟ್ಟಿನಲ್ಲಿ ಜಾರಿಗೆ ತರಲಾಗಿತ್ತು.

Ration Card

ಇನ್ನು ನಮ್ಮ ಕರ್ನಾಟಕ ರಾಜ್ಯದಲ್ಲಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಮೇಲಂತೂ ಬಿಪಿಎಲ್ ರೇಷನ್ ಕಾರ್ಡ್ ಗಳಿಗೆ ಡಿಮ್ಯಾಂಡ್ ಹೆಚ್ಚಿದೆ ಎಂದು ಹೇಳಬಹುದು.

ಇದೇ ಕಾರಣಕ್ಕಾಗಿ ಈಗಾಗಲೇ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರಿಗೆ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡುವುದಕ್ಕೆ ಕೂಡ ಪ್ರಾರಂಭಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಕೃಷಿ ಜಮೀನಿಗೆ ಹೋಗಲು ದಾರಿ ಇಲ್ಲದೆ ಇರುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ! ಹೊಸ ರೂಲ್ಸ್

ಬಿಡುಗಡೆ ಆಯ್ತು ನೋಡಿ ಮೇ ತಿಂಗಳ ಲಿಸ್ಟ್!

ಇನ್ನು ರೇಷನ್ ಕಾರ್ಡ್ ಗಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವಂತಹ ಅರ್ಜಿಗಳನ್ನು ಸರ್ಕಾರ ವಿಲೇವಾರಿ ಮಾಡುವಂತಹ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭ ಮಾಡಿದೆ. ಹೀಗಾಗಿ ಅರ್ಜಿ ಸಲ್ಲಿಸಿರುವಂತಹ ರೇಷನ್ ಕಾರ್ಡ್ ಗಳನ್ನು ಈಗಾಗಲೇ ಅನಾವರಣಗೊಳಿಸಿದ್ದು ಯಾರೆಲ್ಲಾ ರೇಷನ್ ಕಾರ್ಡ್ ಗಳನ್ನು ಪಡೆದುಕೊಳ್ಳಲಿದ್ದಾರೆ ಎನ್ನುವಂತಹ ಮಾಹಿತಿಯನ್ನು ಕೂಡ ಲಿಸ್ಟ್ ಮೂಲಕ ಹೊರಹಾಕಿದೆ.

ಇದಕ್ಕಾಗಿ ನೀವು ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ನಿಮ್ಮ ಊರು ಗ್ರಾಮ ಹಾಗೂ ಇನ್ನಿತರ ವಿವರಗಳನ್ನು ಅಲ್ಲಿ ಕೇಳಿರುವ ರೀತಿಯಲ್ಲಿ ಭರ್ತಿ ಮಾಡುವ ಮೂಲಕ ನಿಮ್ಮ ಹೆಸರು ಕೂಡ ಲಿಸ್ಟಿನಲ್ಲಿ ಇದೆಯೋ ಇಲ್ಲವೋ ಅನ್ನೋದನ್ನ ತಿಳಿದುಕೊಳ್ಳಬಹುದಾಗಿದೆ. ನಿಮ್ಮ ರೇಷನ್ ಕಾರ್ಡ್ ವಿಚಾರದ ಬಗ್ಗೆ ತಹಶೀಲ್ದಾರರ ಕಚೇರಿಗೆ ಹೋಗಿ ಕೂಡ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಅನ್ನಭಾಗ್ಯ ಯೋಜನೆ ಹಣ ಖಾತೆಗೆ ಜಮಾ ಆಗಿದೆ, ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

BPL Ration Cardಹೊಸ ರೇಷನ್ ಕಾರ್ಡ್ ಗೆ ಅಪ್ಲೈ ಮಾಡೋದು!

ಹೊಸದಾಗಿ ಬಿಪಿಎಲ್ ಅಥವಾ ಯಾವುದೇ ರೀತಿಯ ರೇಷನ್ ಕಾರ್ಡ್ ಗಳನ್ನು ಅಪ್ಲೈ ಮಾಡುವುದಕ್ಕೆ ಈಗ ಅವಕಾಶವನ್ನು ಸರ್ಕಾರ ಮಾಡಿಕೊಟ್ಟಿದ್ದು ಮೆಡಿಕಲ್ ಎಮರ್ಜೆನ್ಸಿ ಇರುವವರು ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡುವಂತಹ ಅವಕಾಶ ಪಡೆದುಕೊಂಡಿದ್ದಾರೆ.

ಸದ್ಯಕ್ಕೆ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವ ಕಾರಣದಿಂದಾಗಿ ಈ ಪ್ರಕ್ರಿಯೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿದ್ದು ಮುಂದಿನ ದಿನಗಳಲ್ಲಿ ಮತ್ತೆ ಪ್ರಾರಂಭಿಸುವಂತಹ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಹೊಸದಾಗಿ ರೇಷನ್ ಕಾರ್ಡ್ ಬೇಕಾಗಿರುವವರು ಚುನಾವಣೆ ಮುಗಿದ ನಂತರ ಮತ್ತೆ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಮೂಲಕ ಪಡೆದುಕೊಳ್ಳಬಹುದಾಗಿದೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಟ್ವಿಸ್ಟ್! ಇಂತವರಿಗೆ ಇನ್ಮುಂದೆ ಹಣ ಬರೋಲ್ಲ

ಇನ್ನು ರೇಷನ್ ಕಾರ್ಡ್ ಅನ್ನು ನಿಮ್ಮ ಆರ್ಥಿಕ ಸ್ಥಿತಿಯನ್ನು ಅನುಸರಿಸಿ ನಿಮಗೆ ಯಾವ ಕಾರ್ಡ್ಗಳನ್ನು ನೀಡಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ. ಸದ್ಯದ ಮಟ್ಟಿಗೆ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ ಹೀಗಾಗಿ ಸಾಮಾನ್ಯ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವುದೇ ಉತ್ತಮ ಎಂದು ಹೇಳಬಹುದಾಗಿದೆ.

Big Update on New Ration Card, Release of new list for the month of May

Our Whatsapp Channel is Live Now 👇

Whatsapp Channel

Kannada News Today

Kannada News Today 🌐

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
FacebookX
We value your thoughts!
Send your feedback to us at kannadanewstoday@gmail.com

Related Stories