ಈ ಪಟ್ಟಿಯಲ್ಲಿ ಹೆಸರಿರುವ ಮಹಿಳೆಯರಿಗೆ ಮಾತ್ರ ಸಿಗುತ್ತೆ ಗೃಹಲಕ್ಷ್ಮಿ ಯೋಜನೆ ಹಣ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ (Congress government) ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ ಎಂಬುದಾಗಿ ಹೇಳಿಕೊಂಡಿತ್ತು.
ಅದೇ ರೀತಿಯಲ್ಲಿ ಈಗಾಗಲೇ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆ (Gruha lakshmi scheme) ಅಡಿಯಲ್ಲಿ 2000 ಹಣವನ್ನು ಕೂಡ ಮಹಿಳೆಯರಿಗೆ ನೀಡಲಾಗುತ್ತಿದೆ.
ಹೊಸ ರೇಷನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್! ಮೇ ತಿಂಗಳ ಹೊಸ ಲಿಸ್ಟ್ ಬಿಡುಗಡೆ
ಸಾವಿರಾರು ಅರ್ಜಿಗಳನ್ನು ತಿರಸ್ಕರಿಸಲಾಗಿದೆ (Gruha lakshmi application rejected)
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ತಮ್ಮನ್ನು ತಾವು ರಿಜಿಸ್ಟರ್ ಮಾಡಿಕೊಂಡಿರುವಂತಹ 80000ಕ್ಕೂ ಅಧಿಕ ಮಹಿಳೆಯರ ಹೆಸರನ್ನು ಲಿಸ್ಟ್ನಿಂದ ತೆಗೆದುಹಾಕಲಾಗಿದೆ ಎಂಬುದಾಗಿ ತಿಳಿದು ಬಂದಿದೆ.
ಇವರು ಇನ್ಕಮ್ ಟ್ಯಾಕ್ಸ್ ಅನ್ನು ನೀಡುವಂತಹ ಕುಟುಂಬದ ಪಾಲುದಾರರಾಗಿದ್ದರು ಎಂಬುದಾಗಿ ತಿಳಿದು ಬಂದಿದ್ದು ಇನ್ಮುಂದೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಇವರು ಯಾವುದೇ ಕಾರಣಕ್ಕೂ ಪ್ರತಿ ತಿಂಗಳು 2000 ಹಣವನ್ನು ಪಡೆಯುವುದಕ್ಕೆ ಅರ್ಹರಾಗಿರುವುದಿಲ್ಲ.
ಇನ್ಕಮ್ ಟ್ಯಾಕ್ಸ್ ಕಟ್ತಾ ಇದ್ರು ಕೂಡ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಹಣದ ಲಾಭವನ್ನು ಪ್ರತಿ ತಿಂಗಳು ಪಡೆದುಕೊಳ್ಳುತ್ತಿದ್ದರು ಎನ್ನುವ ಕಾರಣಕ್ಕಾಗಿ ಇವರ ಅರ್ಹತೆಯನ್ನು ರದ್ದುಗೊಳಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ.
ಕೃಷಿ ಜಮೀನಿಗೆ ಹೋಗಲು ದಾರಿ ಇಲ್ಲದೆ ಇರುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ! ಹೊಸ ರೂಲ್ಸ್
ಹೀಗಿದ್ರೆ ಮಾತ್ರ ಪ್ರತಿ ತಿಂಗಳು 2000 ಸಿಗುತ್ತೆ!
ಸರ್ಕಾರಕ್ಕೆ ತೆರಿಗೆ ಹಣವನ್ನು ಕಟ್ಟುತ್ತಾ ಇದ್ದರೂ ಕೂಡ ಹೇಳಿರುವಂತಹ ನಿಯಮಗಳ ಅನುಸಾರವಾಗಿ ಇಲ್ಲದೆ ಇದ್ದರೂ ಕೂಡ ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳ 2000 ಹಣವನ್ನು ಪಡೆದುಕೊಳ್ಳುತ್ತಿದ್ದ ಮಹಿಳೆಯರನ್ನು ಗುರುತುಹಚ್ಚಲಾಗಿದೆ.
ಹೀಗಾಗಿ ಇದೇ ಕಾರಣಕ್ಕಾಗಿ ಅವರ ಹೆಸರನ್ನು ಲಿಸ್ಟಿನಲ್ಲಿ ಅಪ್ಲೋಡ್ ಮಾಡಲಾಗಿದ್ದು ಇನ್ನು ಮುಂದೆ ಅವರು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2000 ಪಡೆದುಕೊಳ್ಳುವ ಹಾಗಿಲ್ಲ. ಮುಂದಿನ ದಿನಗಳಲ್ಲಿ ಹೊಸದಾಗಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಸೇರಿಕೊಳ್ಳುವಂತಹ ಮಹಿಳೆಯರಿಗೆ ಅವರ ಪ್ರತಿಯೊಂದು ಡಾಕ್ಯುಮೆಂಟ್ಗಳನ್ನು ಕೂಡ ಸರಿಯಾದ ರೀತಿಯಲ್ಲಿ ಪರೀಕ್ಷಿಸಿದ ನಂತರವಷ್ಟೇ ಅವರಿಗೆ 2000 ಹಣವನ್ನು ನೀಡಬೇಕೋ ಇಲ್ವೋ ಅನ್ನೋದನ್ನ ತೀರ್ಮಾನ ಮಾಡಲಾಗುತ್ತದೆ.
ಅನ್ನಭಾಗ್ಯ ಯೋಜನೆ ಹಣ ಖಾತೆಗೆ ಜಮಾ ಆಗಿದೆ, ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ
ಗೃಹಲಕ್ಷ್ಮಿ ಹಣ ಬಾರದೆ ಇರುವವರು ಹೀಗೆ ಮಾಡಿ
ಒಂದು ವೇಳೆ ಒಂದು ತಿಂಗಳಿಂದ ಅಥವಾ ಕೆಲವು ಸಮಯಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬರ್ತಾ ಇಲ್ಲ ಅಂತ ಅಂದ್ರೆ ಅದಕ್ಕಾಗಿ ನೀವು ಮಾಡಬೇಕಾಗಿರುವ ಪ್ರಮುಖ ಕೆಲಸ ಅಂದ್ರೆ ನಿಮ್ಮ ಹಣ ಬರುವಂತಹ ಬ್ಯಾಂಕಿನ ಖಾತೆಯ (Bank Account) ಬ್ರಾಂಚ್ ಗೆ ಹೋಗಿ ಅಲ್ಲಿ ಇದರ ಬಗ್ಗೆ ಅವರಿಗೆ ದೂರನ್ನು ನೀಡಬೇಕಾಗಿರುತ್ತದೆ.
ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಟ್ವಿಸ್ಟ್! ಇಂತವರಿಗೆ ಇನ್ಮುಂದೆ ಹಣ ಬರೋಲ್ಲ
ಅಲ್ಲಿ ನಿಮಗೆ ಇದಕ್ಕೆ ಪರಿಹಾರವನ್ನು ನೀಡಬಹುದಾಗಿದೆ, ಇಲ್ಲವೇ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಆಶಾ ಕಾರ್ಯಕರ್ತೆಯ ಬಳಿ ಹೋಗಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಯಾವ ರೀತಿಯಲ್ಲಿ ಗೃಹಲಕ್ಷ್ಮಿ ಯೋಜನೆ ಹಣವನ್ನು ಮತ್ತೊಮ್ಮೆ ಪಡೆದುಕೊಳ್ಳಬಹುದು ಅನ್ನೋದನ್ನ ಸಂಪೂರ್ಣ ಮಾಹಿತಿಯನ್ನು ಅವರ ಬಳಿ ತಿಳಿದುಕೊಳ್ಳಬಹುದಾಗಿದೆ.
Only women named in this list will get money for Gruha Lakshmi Yojana