Karnataka News

ದನದ ಕೊಟ್ಟಿಗೆಗೆ ಬೆಂಕಿ ಹೊತ್ತಿಕೊಂಡು 6 ಹಸು, 2 ಕರು ಸಜೀವ ದಹನ

ಕಡೂರು ಗ್ರಾಮದಲ್ಲಿ ಭೀಕರ ಅವಘಡ, ದನದ ಕೊಟ್ಟಿಗೆಗೆ ಬೆಂಕಿ ಹೊತ್ತಿಕೊಂಡು ದುರ್ಘಟನೆ. ಕಟ್ಟಿದ್ದ ಜಾಗದಲ್ಲೇ 6 ಹಸು, 2 ಕರು ಸಜೀವ ದಹನವಾದ ಭೀಕರ ಘಟನೆ

  • ರಟ್ಟಿಹಳ್ಳಿ ತಾಲೂಕಿನ ಕಡೂರು ಗ್ರಾಮದಲ್ಲಿ ದನದ ಕೊಟ್ಟಿಗೆಗೆ ಬೆಂಕಿ
  • 6 ಹಸು, 2 ಕರು ಬೆಂಕಿಗೆ ಆಹುತಿಯಾಗಿ ಸಜೀವ ದಹನ
  • ಸ್ಥಳೀಯ ಪೊಲೀಸರು ಪರಿಶೀಲನೆ, ಬೆಂಕಿ ಹೊತ್ತಿಕೊಂಡ ಕಾರಣ ಇನ್ನೂ ಸ್ಪಷ್ಟವಿಲ್ಲ

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಡೂರು ಗ್ರಾಮದಲ್ಲಿ ಭೀಕರ ದುರಂತ ಸಂಭವಿಸಿದ್ದು, ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, 6 ಹಸು ಮತ್ತು 2 ಕರುಗಳು ಸಜೀವ ದಹನವಾಗಿರುವ ದುರ್ಘಟನೆ ಶನಿವಾರ ರಾತ್ರಿ ನಡೆದಿದೆ.

ಈ ದುರ್ಘಟನೆ ನಾಗಪ್ಪ ಅಸುಂಡಿ ಹಾಗೂ ಹನುಮಂತಪ್ಪ ಅಸುಂಡಿ ಅವರಿಗೆ ಸೇರಿದ ದನದ ಕೊಟ್ಟಿಗೆಯಲ್ಲಿ ಸಂಭವಿಸಿದ್ದು, ಬೆಂಕಿಯ ರಭಸಕ್ಕೆ ಪೂರ್ತಿ ಕೊಟ್ಟಿಗೆ ಸುಟ್ಟು ಕರಕಲಾಗಿದೆ. ಒಟ್ಟು ಹಾನಿಯ ಅಂದಾಜು ಸುಮಾರು 6 ಲಕ್ಷ ರೂಪಾಯಿಗೂ ಅಧಿಕ ಎಂದು ವರದಿಯಾಗಿದೆ.

ದನದ ಕೊಟ್ಟಿಗೆಗೆ ಬೆಂಕಿ ಹೊತ್ತಿಕೊಂಡು 6 ಹಸು, 2 ಕರು ಸಜೀವ ದಹನ

ರೈತರಿಗೆ ಬಂಪರ್ ಕೊಡುಗೆ, ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಶೇ 90% ಸಹಾಯಧನ

ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಹೊತ್ತಿ ಉರಿದ ಬೆಂಕಿಯ ಪ್ರಭಾವದಿಂದ ಎಲ್ಲಾ ಹಸುಗಳು ಮತ್ತು ಕರುಗಳು ಸ್ಥಳದಲ್ಲಿಯೇ ಸಜೀವ ದಹನವಾಗಿವೆ. ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರೂ, ಹೆಚ್ಚಿನ ಹಾನಿ ತಪ್ಪಿಸಲು ಸಾಧ್ಯವಾಗಲಿಲ್ಲ.

ಸ್ಥಳೀಯರ ಪ್ರಕಾರ, ಕೊಟ್ಟಿಗೆಯಲ್ಲಿ ಕೇವಲ ಜಾನುವಾರುಗಳಷ್ಟೇ ಇರಲಿಲ್ಲ, ಮೇವಿನ ಬಂಡಲಗಳು, ಗೋದಾಮಿನ ಸಾಮಾನುಗಳೂ ಸಹ ಬೆಂಕಿಗೆ ಆಹುತಿಯಾದವು. ಇದರಿಂದ ಹಾನಿಯ ಪ್ರಮಾಣ ಹೆಚ್ಚಾಗಿರುವುದು ಸ್ಪಷ್ಟವಾಗಿದೆ.

ರೇಷನ್ ಕಾರ್ಡ್ ತಿದ್ದುಪಡಿಗೆ ಆನ್ಲೈನ್ ಮೂಲಕ ಸುಲಭ ಅರ್ಜಿ ಪ್ರಕ್ರಿಯೆ ಅವಕಾಶ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರಟ್ಟಿಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ತಗುಲಲು ನಿಖರ ಕಾರಣ ಏನೂ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Cattle Shed Fire: 6 Cows, 2 Calves Burnt Alive

English Summary

Our Whatsapp Channel is Live Now 👇

Whatsapp Channel

Related Stories