ರೈತರಿಗೆ ಬಂಪರ್ ಕೊಡುಗೆ, ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಶೇ 90% ಸಹಾಯಧನ
ಕರ್ನಾಟಕ ಸರ್ಕಾರದಿಂದ ರೈತರಿಗೆ ಬಂಪರ್ ಕೊಡುಗೆ! ಕೃಷಿ ಹೊಂಡ ನಿರ್ಮಾಣಕ್ಕೆ ಶೇ 80% - 90% ವರೆಗೂ ಸಬ್ಸಿಡಿ. ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಅಗತ್ಯ ದಾಖಲೆಗಳು ಮತ್ತು ಅರ್ಹತಾ ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
- ಶೇ 80% – 90% ಸಹಾಯಧನದಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಅವಕಾಶ
- ಕೃಷಿ ಹೊಂಡ ನಿರ್ಮಾಣಕ್ಕೆ ಸಬ್ಸಿಡಿ ಲಭ್ಯ
- ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ಸಹಾಯಧನ
ಬೆಂಗಳೂರು (Bengaluru): ರಾಜ್ಯದ ಮಳೆಯಾಶ್ರಿತ ಪ್ರದೇಶಗಳ ರೈತರು ಕೃಷಿ ನೀರಾವರಿಗೆ ನೀರಿನ ಕೊರತೆಯನ್ನು ನಿವಾರಿಸಲು ಸರ್ಕಾರದಿಂದ ಶೇ 80% – 90% ಸಬ್ಸಿಡಿಯಲ್ಲಿ ಕೃಷಿ ಹೊಂಡ ನಿರ್ಮಾಣದ ಅವಕಾಶ (Krishi Bhagya scheme) ನೀಡಲಾಗಿದೆ. ಈ ಯೋಜನೆಯಡಿ, ಆಯ್ಕೆಯಾದ ರೈತರು ತಮ್ಮ ಹೋಬಳಿ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ಯೋಜನೆಯಡಿ ಕೃಷಿ ಹೊಂಡದ ಅಳತೆ, ತಂತ್ರಜ್ಞಾನ ಅನುಷ್ಠಾನ, ಡೀಸೆಲ್ ಪಂಪ್ ಸೆಟ್, ತಂತಿ ಬೇಲಿ, ನೀರಾವರಿ ವ್ಯವಸ್ಥೆ ಹಾಗೂ ಪಾಲಿಥೀನ್ ಹೊದಿಕೆ ಸೇರಿದಂತೆ 6 ಪ್ರಮುಖ ಘಟಕಗಳಿಗೆ ಸಹಾಯಧನ ನೀಡಲಾಗುತ್ತದೆ.
ಅರ್ಹ ಫಲಾನುಭವಿಗಳನ್ನು K-KISAN ತಂತ್ರಾಂಶದ ಮೂಲಕ ಆಯ್ಕೆ ಮಾಡಲಾಗುತ್ತಿದ್ದು, ಅನುಷ್ಠಾನಗೊಂಡ ಘಟಕಗಳ ಖಾತೆ ಪರಿಶೀಲನೆಗೊಂಡ ಬಳಿಕ ವೆಚ್ಚ ಭರಿಸಲಾಗುತ್ತದೆ.
ರೇಷನ್ ಕಾರ್ಡ್ ತಿದ್ದುಪಡಿಗೆ ಆನ್ಲೈನ್ ಮೂಲಕ ಸುಲಭ ಅರ್ಜಿ ಪ್ರಕ್ರಿಯೆ ಅವಕಾಶ
ಯಾರು ಅರ್ಜಿ ಸಲ್ಲಿಸಬಹುದು?
✔ ಅರ್ಜಿದಾರರ ಹೆಸರಿನಲ್ಲಿ ಕೃಷಿ ಜಮೀನು (Agriculture Land) ಇರುವವರು
✔ ಕರ್ನಾಟಕದ ಮೂಲ ನಿವಾಸಿಗಳು
✔ ಸಣ್ಣ ಮತ್ತು ಅತೀ ಸಣ್ಣ ರೈತರ ವರ್ಗಕ್ಕೆ ಸೇರಿದವರು
✔ ಕೃಷಿ ಭಾಗ್ಯ ಯೋಜನೆಯಡಿ ಹಿಂದಿನ ವರ್ಷದಲ್ಲಿ ಸಬ್ಸಿಡಿ ಪಡೆದಿರಬಾರದು
ಅಗತ್ಯ ದಾಖಲೆಗಳು
ರೈತರ ಆಧಾರ್ ಕಾರ್ಡ್ ಪ್ರತಿಗೆ
ಭೂಮಿಯ ಪಹಣಿ / RTC
ಬ್ಯಾಂಕ್ ಪಾಸ್ ಬುಕ್ ಪ್ರತಿ
ಜಾತಿ ಮತ್ತು ಆದಾಯ ಪ್ರಮಾಣಪತ್ರ (ಅನ್ವಯಿಸಿದರೆ)
ಮೊಬೈಲ್ ಸಂಖ್ಯೆ
ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ವಾ? ಚಿಂತೆಬೇಡ, 4 ಸಾವಿರ ಒಟ್ಟಿಗೆ ಜಮಾ ಆಗುತ್ತೆ
ಅರ್ಜಿ ಸ್ಥಿತಿ ಪರಿಶೀಲನೆ ಪ್ರಕ್ರಿಯೆ
ಅರ್ಜಿದಾರರು ತಮ್ಮ ಅರ್ಜಿಯ ಸ್ಥಿತಿಯನ್ನು ಆಹಾರ ಇಲಾಖೆ ವೆಬ್‌ಸೈಟ್ ಅಥವಾ K-KISAN ತಂತ್ರಾಂಶದ ಮೂಲಕ ನೇರವಾಗಿ ತಮ್ಮ ಮೊಬೈಲ್‌ನಲ್ಲಿಯೇ ತಪಾಸಣೆ ಮಾಡಬಹುದು. ಅನುದಾನ ಮಂಜೂರಾದ ನಂತರ, ಪ್ರತಿ ಹಂತದ ಕಾರ್ಯವನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು.
ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ https://raitamitra.karnataka.gov.in/ ಸರ್ಕಾರಿ ವೆಬ್ ತಾಣಕ್ಕೆ ಭೇಟಿ ನೀಡಿ ಪಡೆಯಬಹುದು
Farm Pond Subsidy By Krishi Bhagya scheme
Our Whatsapp Channel is Live Now 👇