Karnataka NewsBangalore News

ಆನ್‌ಲೈನ್‌ನಲ್ಲೇ ಬಿಪಿಎಲ್ ರೇಷನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಿ! ಇಲ್ಲಿದೆ ವಿಧಾನ

ಸರ್ಕಾರದ ಯೋಜನೆಗಳನ್ನು ಹಾಗೂ ಪಡಿತರವನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ (Ration Card) ಅನ್ನು ಜಾರಿಗೆ ತರಲಾಗಿದೆ. ಅದರಲ್ಲಿ ವಿಶೇಷವಾಗಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಹೆಚ್ಚಿನ ಸೌಲಭ್ಯಗಳು ದೊರಕಲಿ ಎನ್ನುವ ಕಾರಣಕ್ಕಾಗಿ ಬಿಪಿಎಲ್ ರೇಷನ್ ಕಾರ್ಡ್ ಅನ್ನು ನೀಡಲಾಗಿದೆ.

ಈ ಹಿಂದೆ ಹಾರ್ಡ್ ಕಾಪಿಗಳನ್ನು ಇರಿಸಲಾಗುತ್ತಿತ್ತು, ಇದು ಆಗಾಗ ಹಾಳಾಗುತ್ತಿತ್ತು ಹೀಗಾಗಿ ಜನರು ಸಾಕಷ್ಟು ಕಷ್ಟಪಡಬೇಕಾಗುತ್ತಿತ್ತು. ಇನ್ಮುಂದೆ ಈ ರೀತಿ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ.

Ration Card

ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹೊರಬಿತ್ತು ಹೊಸ ಅಪ್ಡೇಟ್! ಜಮಾ ಆಗಲಿದೆ ಪೆಂಡಿಂಗ್ ಹಣ

ರೇಷನ್ ಕಾರ್ಡ್ ಬಗ್ಗೆ ತಲೆ ಬಿಸಿ ಬೇಡ!

ಇನ್ಮುಂದೆ ನೀವು ರೇಷನ್ ಕಾರ್ಡ್ ಕಳೆದು ಹೋಗುತ್ತದೆ ಅನ್ನುವುದರ ಬಗ್ಗೆ ತಲೆ ಬಿಸಿ ಮಾಡೋದು ಬೇಡ. ರಾಜ್ಯ ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ಗೆ ಹೋಗಿ ನೀವು e-ration card ಅನ್ನು ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಸುಲಭವಾಗಿ ನಿಮ್ಮ ರೇಷನ್ ಕಾರ್ಡ್ ಅನ್ನು ನೀವು ಡೌನ್ಲೋಡ್ (Download) ಮಾಡಿಕೊಳ್ಳಬಹುದಾಗಿದೆ. ಇದನ್ನು ಡಿಜಿ ಲಾಕರ್ ನಲ್ಲಿ ಕೂಡ ಇಟ್ಟುಕೊಳ್ಳಬಹುದು.

ಬಿಪಿಎಲ್ ರೇಷನ್ ಕಾರ್ಡನ್ನು ಸುಲಭವಾಗಿ ಡೌನ್ಲೋಡ್ ಮಾಡುವುದು ಹೀಗೆ!

* www.nfsa.gov.in ಇದು ಅಧಿಕೃತ ವೆಬ್ಸೈಟ್ ಆಗಿದ್ದು ಇಲ್ಲಿ ಹೋಗಿ ನಿಮ್ಮ ರೇಷನ್ ಕಾರ್ಡ್ ಅನ್ನು ಡೌನ್ಲೋಡ್ (Download Ration Card) ಮಾಡಿಕೊಳ್ಳಬಹುದಾಗಿದೆ.

* ಮೊದಲಿಗೆ ರೇಷನ್ ಕಾರ್ಡ್ ವಿಭಾಗಕ್ಕೆ ಹೋಗಿ ನಿಮ್ಮ ರಾಜ್ಯದ ಆಯ್ಕೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ರಾಜ್ಯ ಸೇರಿದಂತೆ ಎಲ್ಲಾ ಕೇಂದ್ರಗಳಿದ್ದ ಪ್ರದೇಶದ ವಿವರಗಳು ಕೂಡ ನಿಮಗೆ ಕಾಣುತ್ತದೆ. ಅಲ್ಲಿ ನಿಮ್ಮ ರಾಜ್ಯದ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.

* ಇದಾದ ನಂತರ ನಿಮ್ಮ ಜಿಲ್ಲೆ ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶದ ಉಪವಿಭಾಗಗಳನ್ನು ಕೂಡ ಆಯ್ಕೆ ಮಾಡುತ್ತಲೇ ಹೋಗಬೇಕು.

* ನಂತರ ನಿಮ್ಮ ತಹಸಿಲ್ದಾರ್ ಕಚೇರಿ ಹಾಗೂ ಕೊನೆಯಲ್ಲಿ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಬೇಕಾಗಿರುತ್ತದೆ. ಇಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸುವ ಮೂಲಕ ನಿಮ್ಮ ರೇಷನ್ ಕಾರ್ಡ್ ಅನ್ನು ಹುಡುಕಿ ನಂತರ ಅದನ್ನು ಡೌನ್ಲೋಡ್ ಗೆ ನೀಡಿ ರೇಷನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಇಂಥವರ ಬಿಪಿಎಲ್ ಕಾರ್ಡ್ ರದ್ದು; ಏಪ್ರಿಲ್ ತಿಂಗಳ ರದ್ದುಪಡಿ ಲಿಸ್ಟ್ ಚೆಕ್ ಮಾಡಿ!

BPL Ration Cardಒಂದು ವೇಳೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಹಾಳು ಮಾಡಿಕೊಂಡಿದ್ದಲ್ಲಿ ಅಥವಾ ಬೇರೆ ಯಾವುದೇ ರೀತಿ ವಿರೂಪ ಗೊಳಿಸಿದ್ದಲ್ಲಿ ಈ ರೀತಿ ಮಾಡುವ ಮೂಲಕ ನೀವು ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಡೌನ್ಲೋಡ್ ಕೊಟ್ಟು ಪ್ರಿಂಟ್ ಔಟ್ ತೆಗೆದು ಲ್ಯಾಮಿನೇಷನ್ ಹಾಕಿ ಹೊಸದರಂತೆ ಇಟ್ಟುಕೊಳ್ಳಬಹುದಾಗಿದೆ.

ಅನ್ನಭಾಗ್ಯ ಹಣ ಜಮಾ ಆಗಿದ್ಯಾ ಎಂದು ಚೆಕ್ ಮಾಡುವುದಕ್ಕೆ ಇಲ್ಲಿದೆ ಡೈರೆಕ್ಟ್ ಲಿಂಕ್!

ಈ ಸಮಯದಲ್ಲಿ ಖಂಡಿತವಾಗಿ ಇದು ನಿಮಗೆ ರೇಷನ್ ಕಾರ್ಡ್ ಅನ್ನು ಹೊಂದಿಲ್ಲದೆ ಇರುವುದಕ್ಕಿಂತ ಈ ಮೂಲಕ ಹೊಸದರಂತೆ ಪಡೆದುಕೊಳ್ಳುವುದು ಸಾಕಷ್ಟು ನೆಮ್ಮದಿಯನ್ನು ನೀಡಲಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

Download BPL Ration Card Online! Here’s the method

Our Whatsapp Channel is Live Now 👇

Whatsapp Channel

Related Stories