ಮನೆಯ ಹಿತ್ತಲಿನಲ್ಲಿ ಮಗನ ಅಸ್ಥಿಪಂಜರ ಪತ್ತೆ, ತಂದೆಯೇ ಕೊಲೆಗಾರ - Hassan Incident

ಕರ್ನಾಟಕ ಹಾಸನ ಜಿಲ್ಲೆಯ ಸಂತೆಬಸವನಹಳ್ಳಿ ಗ್ರಾಮದಲ್ಲಿ 2 ವರ್ಷಗಳಿಂದ ಕಾಣೆಯಾಗಿದ್ದ ಯುವಕನ ಅಸ್ಥಿಪಂಜರ ಪತ್ತೆ. ಆರ್ಥಿಕ ಕಲಹದಲ್ಲಿ ತಂದೆಯೇ ಮಗನ ಹತ್ಯೆ ಮಾಡಿ ಮನೆಯ ಅಂಗಳದಲ್ಲೇ ಹೂತುಹಾಕಿರುವ ಘಟನೆ.

  • ಹಾಸನದಲ್ಲಿ ಅಸ್ಥಿಪಂಜರ ಪತ್ತೆ, 2 ವರ್ಷಗಳ ರಹಸ್ಯ ಭೇದ
  • ತಂದೆಯೇ ಮಗನ ಹತ್ಯೆ, ಆರ್ಥಿಕ ಕಲಹ ಕಾರಣ
  • ಮನೆಯ ಅಂಗಳದಲ್ಲಿ ಎಲುಬು ಪತ್ತೆ, ಗ್ರಾಮದಲ್ಲಿ ಆತಂಕ

ಹಾಸನ ಜಿಲ್ಲೆಯ ಸಂತೆಬಸವನಹಳ್ಳಿ ಗ್ರಾಮದಲ್ಲಿ ಎರಡು ವರ್ಷಗಳಿಂದ ಕಾಣೆಯಾಗಿದ್ದ 32 ವರ್ಷದ ರಘು ಎಂಬ ಯುವಕನ ರಹಸ್ಯ ಅಂತ್ಯಕ್ಕೆ ಬಂದಿದೆ. ಪೊಲೀಸರು ನಡೆಸಿದ ತನಿಖೆಯಲ್ಲಿ, ರಘುವನ್ನು ಅವನ ತಂದೆಯೇ ಹತ್ಯೆ ಮಾಡಿ ಮನೆಯ ಅಂಗಳದಲ್ಲಿ ಹೂತುಬಿಟ್ಟಿದ್ದಾನೆಂಬ ಮಾಹಿತಿ ಬಹಿರಂಗವಾಗಿದೆ.

ಮಾಹಿತಿಯ ಪ್ರಕಾರ, 2022ರಲ್ಲಿ ಆರ್ಥಿಕ ಕಲಹದ ನಡುವೆ ಗಂಗಾಧರ್ ಎಂಬಾತ ತನ್ನ ಮಗ ರಘುವಿನ ಮೇಲೆ ಚೂಪಾದ ಆಯುಧದಿಂದ ದಾಳಿ ಮಾಡಿ ಕೊಲೆಮಾಡಿದ್ದ. ನಂತರ ಯಾರಿಗೂ ಅನುಮಾನ ಬರದಂತೆ ಮೃತದೇಹವನ್ನು ಮನೆಯ ಅಂಗಳದಲ್ಲೇ ಹೂತುಬಿಟ್ಟಿದ್ದ. ಹತ್ಯೆಯ ನಂತರದಿಂದಲೇ ರಘು ಎಲ್ಲರಿಗೂ ಕಾಣೆಯಾಗಿದ್ದಾನೆ ಎಂದು ಬಿಂಬಿಸಿದ್ದ.

ಇದನ್ನೂ ಓದಿ: ಸರ್ಕಾರದ ಭಾರೀ ಗಿಫ್ಟ್! 50,000 ಉಚಿತ ನೆರವು, ತಳ್ಳುಗಾಡಿ, ಸಣ್ಣ ವ್ಯಾಪಾರಿಗಳಿಗೆ ಸುವರ್ಣಾವಕಾಶ

ಈ ನಡುವೆ, ಗಂಗಾಧರ್ ಈ ತಿಂಗಳ 1ರಂದು ಮೃತಪಟ್ಟಿದ್ದ. ತಂದೆಯ ಅಂತ್ಯಕ್ರಿಯೆಗೂ, ನಂತರದ ಕರ್ಮಕಾಂಡಕ್ಕೂ ರಘು ಹಾಜರಾಗದ ಹಿನ್ನೆಲೆಯಲ್ಲಿ ನೆಂಟರಲ್ಲಿ ಅನುಮಾನ ಹುಟ್ಟಿತು. ತೀವ್ರ ಪ್ರಶ್ನೆಗಳ ಮಧ್ಯೆ, ರಘುವಿನ ತಮ್ಮ ರೂಪೇಶ್ ಸತ್ಯ ಬಾಯ್ಬಿಟ್ಟಿದ್ದು, ತಂದೆಯೇ ಹತ್ಯೆ ಮಾಡಿ ದೇಹವನ್ನು ಹೂತುಬಿಟ್ಟಿದ್ದಾನೆ ಎಂದು ಒಪ್ಪಿಕೊಂಡಿದ್ದಾನೆ.

ರೂಪೇಶ್ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಹಾಗೂ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಬಂದು ತವಕ ಕಾರ್ಯ ನಡೆಸಿ, ರಘುವಿನ ಎಲುಬುಗಳನ್ನು ಪತ್ತೆಹಚ್ಚಿದ್ದಾರೆ. ಅವುಗಳನ್ನು ವೈದ್ಯಕೀಯ ಪರಿಶೀಲನೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ಗ್ರಾಮ ಒನ್ ಸೆಂಟರ್ ಪ್ರಾಂಚೈಸಿ ಪಡೆಯಿರಿ! ಕೈತುಂಬಾ ದುಡ್ಡು, ಒಳ್ಳೆಯ ಆದಾಯ

ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ರಘು ಈ ಹಿಂದೆ BMTC ಉದ್ಯೋಗಿ ಎಂದು ತಿಳಿದುಬಂದಿದೆ. ಆತ ಕ್ರಿಕೆಟ್ ಬೆಟ್ಟಿಂಗ್ ಮತ್ತು ಜೂಜಾಟದಲ್ಲಿ ಹೆಚ್ಚಿನ ಹಣ ಕಳೆದುಕೊಂಡು, ಬಳಿಕ ಸ್ವಗ್ರಾಮಕ್ಕೆ ವಾಪಾಸು ಬಂದಿದ್ದ. ತಂದೆಯಿಂದ ಹಣಕ್ಕಾಗಿ ಒತ್ತಾಯ ಮಾಡುತ್ತಿದ್ದು, ಇದರಿಂದ ತೀವ್ರ ವಾಗ್ವಾದ ಉಂಟಾಗಿ ಹತ್ಯೆಗೆ ಕಾರಣವಾಯಿತು ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಕರಣ ಸ್ಥಳೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರು ಹತ್ಯೆಯ ಎಲ್ಲಾ ವಿವರಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರೆಸಿದ್ದಾರೆ.

Father kills son over money dispute

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories