ಕಲಬುರಗಿಯಲ್ಲಿ ಬೀದಿ ನಾಯಿ ದಾಳಿ, ನಾಲ್ಕು ವರ್ಷದ ಬಾಲಕ ಸಾವು
Stray Dog Attack: ಕಲಬುರಗಿ ನಗರದ ದರಿಯಾಪುರ ಕೋಟನೂರು ಬಡಾವಣೆಯಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

Stray Dog Attack: ಮನೆಯವರ ಕಣ್ಣೆದುರೇ ಆಟವಾಡುತ್ತಾ ಖುಷಿಯಿಂದ ಕಾಲ ಕಳೆಯುತ್ತಿದ್ದ ಪುಟ್ಟ ಬಾಲಕನ ಬದುಕು ಬೀದಿ ನಾಯಿಯ ದಾಳಿಯಿಂದ ದುರಂತ ಅಂತ್ಯ ಕಂಡಿದೆ. ಕಲಬುರಗಿ (Kalaburagi) ನಗರದ ದರಿಯಾಪುರ ಕೋಟನೂರು ಬಡಾವಣೆಯಲ್ಲಿ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮೃತ ಬಾಲಕನನ್ನು ಮನೋಜ್ ಪೂಕಾರಿ (4) ಎಂದು ಗುರುತಿಸಲಾಗಿದೆ. ಕಲಬುರಗಿ ತಾಲೂಕಿನ ಜಂಬಗಾ ಗ್ರಾಮದ ಶರಣಬಸಪ್ಪ ಪೂಜಾರಿ ಅವರ ಪುತ್ರನಾಗಿದ್ದ ಮನೋಜ್, ತಂದೆಯ ಉದ್ಯೋಗದ ಕಾರಣ ಕುಟುಂಬದೊಂದಿಗೆ ಕಲಬುರಗಿಯಲ್ಲಿ ವಾಸವಾಗಿದ್ದನು. ಶರಣಬಸಪ್ಪ ಅವರು ನಗರದಲ್ಲಿ ವಾಚ್‌ಮನ್ ಕೆಲಸ ಮಾಡಿಕೊಂಡಿದ್ದರು.
ಇದನ್ನೂ ಓದಿ: ಮನೆಯ ಮುಂದೆ ಆಟವಾಡುತ್ತಿದ್ದ 7 ವರ್ಷದ ಬಾಲಕನಿಗೆ ಹಾವು ಕಚ್ಚಿ ಸಾವು
ಗಾಣದೇವತೆ ದೇವಸ್ಥಾನದ ರಸ್ತೆಯಲ್ಲಿ ಬಾಲಕ ಆಟವಾಡುತ್ತಿದ್ದ ಸಂದರ್ಭದಲ್ಲಿ ಬೀದಿ ನಾಯಿಯೊಂದು ಏಕಾಏಕಿ ದಾಳಿ ನಡೆಸಿದೆ. ಅನಿರೀಕ್ಷಿತ ದಾಳಿಯಿಂದ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದವರು ಹಾಗೂ ಕುಟುಂಬಸ್ಥರು ಆತಂಕದಿಂದ ಮಗುವನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ, ಬಾಲಕನ ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕೊನೆಗೆ ಮನೋಜ್ ಮೃತಪಟ್ಟಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ನಗರದ ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಮಕ್ಕಳ ಸುರಕ್ಷತೆ ಕುರಿತು ಈ ಘಟನೆ ಮತ್ತೊಮ್ಮೆ ಆತಂಕ ಹುಟ್ಟಿಸಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.
ನಾಳೆಯ ದಿನ ಭವಿಷ್ಯ; ಈ ರಾಶಿಗಳಿಗೆ ಬ್ರಹ್ಮಾಂಡ ರಾಜಯೋಗ
Read the story
ರಾಜ್ಯದ ಜನತೆಗೆ ಗುಡ್ ನ್ಯೂಸ್; ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ
Read the story
ನವೆಂಬರ್ 2026ರ ಮಾಸಿಕ ಭವಿಷ್ಯ; ನಿಮ್ಮ ರಾಶಿ ಫಲ ಹೇಗಿದೆ?
Read the story
ಹಾಲಿನ ಬೆನ್ನಲ್ಲೇ ಮೊಸರು ದರ ಏರಿಕೆ; ಲೀಟರ್ಗೆ ಬರೋಬ್ಬರಿ ₹14 ರೂಪಾಯಿ ಹೆಚ್ಚಳ
Read the story
ಮೂರು ದಿನ ಭಾರೀ ಮಳೆ ಮುನ್ಸೂಚನೆ! ಗುಡುಗು, ಮಿಂಚು ಸಾಧ್ಯತೆ
Read the story



