Karnataka NewsBangalore News

ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಉಚಿತ ಲ್ಯಾಪ್ ಟಾಪ್! ಈ ರೀತಿ ಅರ್ಜಿ ಸಲ್ಲಿಸಿ

ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನರಿಗಾಗಿ ಸಾಕಷ್ಟು ಯೋಜನೆಗಳನ್ನು (Govt Schemes) ಜಾರಿಗೆ ತರಲಾಗುತ್ತಿದೆ. ಈಗಾಗಲೇ ರಾಜ್ಯದ ಜನತೆಗೆ ಸಹಾಯ ಆಗುವ ಹಾಗೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಹೆಂಗಸರಿಗೆ, ಮನೆಯ ಎಲ್ಲಾ ಜನರಿಗೆ ಸಹಾಯ ಅಗುವಂಥ ಯೋಜನೆಗಳನ್ನು ಜಾರಿಗೆ ತಂದಿದ್ದು, ಸರ್ಕಾರದಿಂದ ಇನ್ನಷ್ಟು ಸಾಕಷ್ಟು ಹೊಸ ಸುದ್ದಿಗಳು ಬರುತ್ತಲೇ ಇದೆ. ಜನರು ಕೂಡ ಈ ಯೋಜನೆಗಳ ಸೌಲಭ್ಯ ಪಡೆಯುತ್ತಿದ್ದಾರೆ.

Such students will get a free laptop from the government

ಜನರಿಗೆ ಮಾತ್ರವಲ್ಲದೆ, ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಕೂಡ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳು ಸಿಗುತ್ತಿದೆ. ಶಿಕ್ಷಣಕ್ಕೆ (Education) ಸಂಬಂಧಿಸಿದ ಹಾಗೆ ಬಹಳಷ್ಟು ನಿಯಮಗಳ ಬದಲಾವಣೆ ಕೂಡ ಮಾಡಲಾಗುತ್ತಿದೆ.

ರೇಷನ್ ಕಾರ್ಡ್ ಅಪ್ಲೈ ಮಾಡುವುದಕ್ಕೆ ಇನ್ಮೇಲೆ ಈ ಹೊಸ ರೂಲ್ಸ್ ಪಾಲಿಸಲೇಬೇಕು ಎಂದ ಸರ್ಕಾರ! ಏನದು ಹೊಸ ನಿಯಮಗಳು?

ಈ ಹಿಂದಿನ ಸರ್ಕಾರವು ನಮ್ಮ ರಾಜ್ಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿತ್ತು, ಇದರಲ್ಲಿ ಡಿಗ್ರಿ ಕೋರ್ಸ್ ಅನ್ನು 4 ವರ್ಷಗಳ ಕೋರ್ಸ್ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ನೀತಿಯನ್ನು ಕ್ಯಾನ್ಸಲ್ ಮಾಡಿದೆ.

ಇದು ವಿದ್ಯಾರರ್ಥಿಗಳಿಗೂ ಸಂತೋಷ ತಂದಿತ್ತು, ಇದರ ಜೊತೆಗೆ ಈಗ ಮತ್ತೊಂದು ಹೊಸ ಸೌಲಭ್ಯವನ್ನು ಕೂಡ ವಿದ್ಯಾರ್ಥಿಗಳಿಗೆ ತರಲಾಗುತ್ತಿದೆ. ರಾಜ್ಯದ SC/ST ಅಭ್ಯರ್ಥಿಗಳಿಗೆ ಸಹಾಯ ಆಗಬೇಕು ಎಂದು ರಾಜ್ಯ ಸರ್ಕಾರ ಈಗ ಒಂದು ಹೊಸ ಗುಡ್ ನ್ಯೂಸ್ ನೀಡಿದೆ.

Free Laptop Scheme for Studentsಪದವಿ ವ್ಯಾಸಂಗ ಮಾಡುತ್ತಿರುವ ಎಲ್ಲಾ SC/ST ಅಭ್ಯರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ (Free Laptop) ನೀಡಲು ಮುಂದಾಗಿದೆ. ಈ ಬಗ್ಗೆ ಖುದ್ದು ಮುಖ್ಯಮಂತ್ರಿಗಳೇ ಟ್ವೀಟ್ ಮಾಡುವ ಮೂಲಕ ಅಧಿಕೃತ ಮಾಹಿತಿ ನೀಡಿದ್ದಾರೆ..

“ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ (Laptop) ಅನ್ನು ಎಸ್‌.ಸಿ.ಎಸ್.ಪಿ / ಟಿ.ಎಸ್.ಪಿ ಯೋಜನೆಯಡಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಲ್ಯಾಪ್ ಟಾಪ್ ವಿತರಿಸುವ ಸಂಬಂಧ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯೋಜನೆ ಅಡಿ 230 ಕೋಟಿ ರೂ. ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚಿಸಲಾಗಿದೆ.” ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ..

ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಅಕೌಂಟ್ ಗೆ ಬರುವುದಕ್ಕಿಂತ ಮೊದಲೇ ಹೊಸ ನಿಯಮ ತಂದ ಡಿಸಿಎಂ ಡಿಕೆಶಿ

“ವಿ.ವಿ ಗಳಲ್ಲಿರುವ ಎಲ್ಲಾ ಸಮುದಾಯಗಳ ಪ್ರತಿ ವಿದ್ಯಾರ್ಥಿಗೂ ಲ್ಯಾಪ್ ಟಾಪ್ ವಿತರಿಸಬೇಕಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿಯು ಕೈಗಾರಿಕೋದ್ಯಮಿಗಳ ಬೇಡಿಕೆಗೆ ಅನುಗುಣವಾದ ಪಠ್ಯಕ್ರಮ ರೂಪಿಸಿ, ಎಂಜಿನಿಯರಿಂಗ್‌ ಪದವೀಧರರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸಲು ಅನುವಾಗುವಂತಹ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಇಂದಿನ ಸಭೆಯಲ್ಲಿ ಸೂಚನೆ ನೀಡಲಾಗಿದೆ..” ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್ ಟಾಪ್ (Free Laptop) ಕೊಡುವ ಭರವಸೆಯನ್ನು ಸಹ ನೀಡಿದ್ದು, ಇದರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಸಂತೋಷದ ಜೊತೆಗೆ ಅನುಕೂಲ ಕೂಡ ಆಗಲಿದೆ. ಸರ್ಕಾರದ ಈ ನಿರ್ಧಾರ ಹಲವು ವಿದ್ಯಾರ್ಥಿಗಳ ಶಿಕ್ಷಣ ಮತ್ತು ಕೆರಿಯರ್ ಗೆ ಸಹಾಯ ಮಾಡುತ್ತದೆ.

Free laptop from state govt for students

Our Whatsapp Channel is Live Now 👇

Whatsapp Channel

Related Stories