ಇಂದಿನಿಂದ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ, ಈ ದಾಖಲೆಗಳು ಕಡ್ಡಾಯ
ಯುವಕ ಯುವತಿಯರಿಗೆ ಆರ್ಥಿಕ ನೆರವು (financial help) ನೀಡುವ ಸಲುವಾಗಿ ಯುವ ನಿಧಿ ಯೋಜನೆ (Yuva Nidhi Yojana) ಯನ್ನು ರಾಜ್ಯ ಸರ್ಕಾರ (state government) ಜಾರಿಗೆ ತಂದಿದೆ
ಪದವಿ (Degree ) ಹಾಗೂ ಡಿಪ್ಲೋಮಾ ಕೋರ್ಸ್ (diploma courses) ಮುಗಿಸಿ ಕಳೆದ 180 ದಿನಗಳಿಂದ ಯಾವುದೇ ಕೆಲಸ ಸಿಗದೇ ಕಷ್ಟ ಪಡುತ್ತಿರುವ ಯುವಕ ಯುವತಿಯರಿಗೆ ಆರ್ಥಿಕ ನೆರವು (financial help) ನೀಡುವ ಸಲುವಾಗಿ ಯುವ ನಿಧಿ ಯೋಜನೆ (Yuva Nidhi Yojana) ಯನ್ನು ರಾಜ್ಯ ಸರ್ಕಾರ (state government) ಜಾರಿಗೆ ತಂದಿದೆ
ತನ್ನ ಪ್ರಣಾಳಿಕೆಯಲ್ಲಿ ತಿಳಿಸಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದು ಯೋಜನೆ ಯುವ ನಿಧಿ ಯೋಜನೆಯಾಗಿದೆ. ನಾಲ್ಕು ಯೋಜನೆಗಳು ಈಗಾಗಲೇ ಜಾರಿಗೆ ಬಂದಿದ್ದು ಈಗ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೂಡ ಆರಂಭವಾಗಲಿದೆ.
ಗೃಹಲಕ್ಷ್ಮಿ ಹಣ ಒಂದೇ ದಿನದಲ್ಲಿ ಜಮಾ! ಈ ಖಾತೆ ತೆರೆದವರಿಗೆ ತಕ್ಷಣ ಹಣ ಬಂದಿದೆ
ಯುವ ನಿಧಿ ಯೋಜನೆ ಅರ್ಜಿ ಸಲ್ಲಿಕೆ ಆರಂಭ! (Apply Yuva Nidhi Yojana)
ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ, ಈ ಯೋಜನೆಯ ಅಡಿಯಲ್ಲಿ ಪದವಿ ಹಾಗೂ ಡಿಪ್ಲೋಮೋ ಮುಗಿಸಿರುವ ಲಕ್ಷಾಂತರ ಯುವಕ ಯುವತಿಯರು ಪ್ರತಿ ತಿಂಗಳು 1500 ರಿಂದ 3000 ಗಳ ವರೆಗೆ ನಿರುದ್ಯೋಗ ಭತ್ಯೆ (unemployed allowance) ಪಡೆದುಕೊಳ್ಳಬಹುದು.
ಯುವ ನಿಧಿ ಯೋಜನೆಯ ಬಗ್ಗೆ ಮಾಹಿತಿ (Information about Yuva Nidhi Yojana)
*2022 23ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೋಮೋ ಮುಗಿಸಿರುವ ನಿರುದ್ಯೋಗಿ ಯುವಕ ಯುವತಿಯರಿಗೆ ನಿರುದ್ಯೋಗ ಭತ್ಯೆ ನೀಡುವ ಯೋಜನೆ.
*ಕೇವಲ ಈ ವರ್ಷ ಪದವಿ ಹಾಗೂ ಡಿಪ್ಲೋಮೋ ಪಾಸ್ ಆದವರು ಮಾತ್ರ ಅರ್ಜಿ ಸಲ್ಲಿಸಬಹುದು.
*ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶಿಕ್ಷಣ ಮುಗಿಸಿ 180 ದಿನಗಳು ಅಂದರೆ ಆರು ತಿಂಗಳು ಕಳೆದರೂ ಕೆಲಸ ಸಿಗದೇ ಇದ್ದರೆ ಮಾತ್ರ ಯುವ ನಿಧಿ ಯೋಜನೆಯ ಹಣ ಪಡೆಯಲು ಅರ್ಹರಾಗಿರುತ್ತಾರೆ.
*ಯುವ ನಿಧಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿರುವ ಯಾವುದೇ ಯುವಕ ಯುವತಿಯರು ತಮಗೆ ಕೆಲಸ ಸಿಕ್ಕ ತಕ್ಷಣ ಸರ್ಕಾರದ ಗಮನಕ್ಕೆ ತರಬೇಕು, ಒಂದು ವೇಳೆ ಕೆಲಸ ಸಿಕ್ಕಿರುವ ವಿಚಾರ ತಿಳಿಸದೆ ಗೌಪ್ಯವಾಗಿಟ್ಟು ಸರ್ಕಾರದಿಂದ ನಿರುದ್ಯೋಗ ಭತ್ಯೆ ಪಡೆದುಕೊಳ್ಳುತ್ತಿದ್ದಾರೆ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
*ನಿರುದ್ಯೋಗ ಭತ್ಯೆ ಮುಂದಿನ ಎರಡು ವರ್ಷಗಳ ಅವಧಿಯವರೆಗೆ ಮಾತ್ರ ಲಭ್ಯವಿದೆ, ಎರಡು ವರ್ಷದ ಒಳಗೆ ಯುವಕ ಯುವತಿಯರು ಕೆಲಸ ಪಡೆದುಕೊಳ್ಳಬೇಕು.
ಯುವ ನಿಧಿ ಯೋಜನೆಯಲ್ಲಿ ಎರಡು ವರ್ಷಗಳ ಅವಧಿಗೆ ಪದವಿಕೋರ್ಸ್ ಮುಗಿಸಿದವರಿಗೆ 3000 ಹಾಗೂ ಡಿಪ್ಲೋಮೋ ಮುಗಿಸಿದವರಿಗೆ 1500 ಖಾತೆಗೆ ನೇರವಾಗಿ ಜಮಾ ಮಾಡಲಿದೆ.
ಉಚಿತ ಅಕ್ಕಿ, ಗೃಹಲಕ್ಷ್ಮಿ ಹಣ ಪಡೆಯೋಕೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಿ!
ಯಾರಿಗೆ ಯುವನಿಧಿ ನಿರುದ್ಯೋಗ ಭತ್ಯೆ ಸಿಗಲಿದೆ? (Who can apply for your Nidhi Yojana)
*ಪದವಿ ಶಿಕ್ಷಣ ಅಥವಾ ಡಿಪ್ಲೋಮೋ ಕೋರ್ಸ್ ಗಳನ್ನು ಮುಗಿಸಿರಬೇಕು
*2022_23ನೇ ಸಾಲಿನಲ್ಲಿ ಪಾಸಾದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
*ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕಳೆದ 180 ದಿನಗಳಿಂದ ಯಾವುದೇ ಕೆಲಸ ಸಿಕ್ಕಿರಬಾರದು.
*ಪದವಿ ಮುಗಿಸಿ ಉನ್ನತ ವಿದ್ಯಾಭ್ಯಾಸ ಮಾಡುವವರಿಗೆ ಈ ಯೋಜನೆ ಅನ್ಯಾಯವಾಗುವುದಿಲ್ಲ.
*ಅಪ್ರೆಂಟಿಸ್ಗಳಿಗೆ ಅಥವಾ ಉದ್ಯೋಗ ಹೊಂದಿರುವವರಿಗೆ ಈ ಯೋಜನೆ ಪ್ರಯೋಜನ ಸಿಗುವುದಿಲ್ಲ.
ಫ್ರೀ ಬಸ್, ಶಕ್ತಿ ಯೋಜನೆಯಲ್ಲಿ ಬದಲಾವಣೆ; ಈ ತಪ್ಪು ಮಾಡಿದ್ರೆ 500 ರೂ. ದಂಡ
ಅರ್ಜಿ ಸಲ್ಲಿಸಲು ಈ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ! (Get ready with this documents)
ಅರ್ಜಿದಾರರ ಆದಾಯ ಪ್ರಮಾಣ ಪತ್ರ ಬೇಕು (income certificate)
ರೇಷನ್ ಕಾರ್ಡ್ ಪ್ರತಿ (ration card)
ಆಧಾರ್ ಕಾರ್ಡ್ (Aadhaar card)
ಬ್ಯಾಂಕ್ ಖಾತೆಯ ವಿವರ (ಕಳೆದ ಆರು ತಿಂಗಳ ಬ್ಯಾಂಕ್ ವ್ಯವಹಾರಗಳ ಸ್ಟೇಟ್ಮೆಂಟ್ ನೀಡಬೇಕು)
ಗುರುತಿನ ಪುರಾವೆ
ಅರ್ಜಿ ಸಲ್ಲಿಸುವ ವಿಧಾನ! (How to apply)
ಯುವನಿಧಿ ಯೋಜನೆಯ ನಿರುದ್ಯೋಗ ಭತ್ಯೆ ಪಡೆದುಕೊಳ್ಳಲು ಅಪ್ಲಿಕೇಶನ್ ಹಾಕಲು ಪೋರ್ಟಲ್ ತೆರೆದುಕೊಳ್ಳಲಿದೆ, ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಸೇವಾ ಸಿಂಧು (seva Sindhu website) ವೆಬ್ಸೈಟ್ನಲ್ಲಿ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಗ್ರಾಮೀಣ ಮಟ್ಟದಲ್ಲಿ ಸೇವಾಕೇಂದ್ರಗಳಲ್ಲಿಯೂ ಕೂಡ ಅರ್ಜಿ ಸಲ್ಲಿಸಬಹುದು ಎಂದು ಹೇಳಲಾಗಿದೆ.
ಜಮೀನು, ಆಸ್ತಿ ಖರೀದಿ ಮಾಡುವವರಿಗೆ ಹೊಸ ನಿಯಮ! ನೋಂದಣಿಗೆ ಹೊಸ ರೂಲ್ಸ್
ಜನವರಿ 12 2024ಕ್ಕೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವಮೊಗ್ಗದಲ್ಲಿ ನಡೆಯುವ ಸಮಾರಂಭ ಒಂದರಲ್ಲಿ ನಿರುದ್ಯೋಗ ಭತ್ಯೆ ಬಿಡುಗಡೆ ಮಾಡುವ ಮೂಲಕ ಯುವ ನಿಧಿ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಯುವ ನಿಧಿ ಯೋಜನೆಯ ಅಡಿಯಲ್ಲಿ ನಿರುದ್ಯೋಗ ಭತ್ಯೆ ಪಡೆದುಕೊಳ್ಳಲು ಇಚ್ಚಿಸುವ ಅಭ್ಯರ್ಥಿಗಳು ಅರ್ಜಿ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಿ ಮುಂದಿನ ತಿಂಗಳಿನಿಂದ ನಿಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು.
From today to apply for Yuva Nidhi Yojana, these documents are mandatory