ಬಿಪಿಎಲ್ ಕಾರ್ಡ್ ಇರೋರಿಗೆ ಸಿಹಿ ಸುದ್ದಿ; ಇನ್ಮುಂದೆ ನಿಮ್ಮ ಮನೆಗೆ ಡೆಲಿವರಿ ಆಗಲಿದೆ ರೇಷನ್

ಶಕ್ತಿ ಯೋಜನೆ, (Shakti Yojana) ಗೃಹಲಕ್ಷ್ಮಿ ಯೋಜನೆ (Gruha Lakshmi Yojane), ಅನ್ನಭಾಗ್ಯ ಯೋಜನೆ (Annabhagya Scheme) ಹಾಗೂ ಗೃಹಜ್ಯೋತಿ ಯೋಜನೆಯಿಂದಾಗಿ (Gruha Jyothi Scheme) ಜನರಿಗೆ ಹೆಚ್ಚು ಅನುಕೂಲವಾಗುತ್ತಿದೆ.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ, (Shakti Yojana) ಗೃಹಲಕ್ಷ್ಮಿ ಯೋಜನೆ (Gruha Lakshmi Yojane), ಅನ್ನಭಾಗ್ಯ ಯೋಜನೆ (Annabhagya Scheme) ಹಾಗೂ ಗೃಹಜ್ಯೋತಿ ಯೋಜನೆಯಿಂದಾಗಿ (Gruha Jyothi Scheme) ಜನರಿಗೆ ಹೆಚ್ಚು ಅನುಕೂಲವಾಗುತ್ತಿದೆ.

ಇಂದು ರಾಜ್ಯದಲ್ಲಿ ಕೋಟ್ಯಂತರ ಜನರು ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ, ಅದರಲ್ಲೂ ಜನರಿಗೆ ಹೆಚ್ಚು ಬೆನಿಫಿಟ್ ಆಗಿರುವ ಅನ್ನಭಾಗ್ಯ ಯೋಜನೆಯ ವಿಚಾರದಲ್ಲಿ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

10 ಲಕ್ಷ ಗೃಹಿಣಿಯರಿಗೆ ಇಲ್ಲ ಗೃಹಲಕ್ಷ್ಮಿ ಭಾಗ್ಯ! ಇಲ್ಲಿದೆ ಹಣ ಬಿಡುಗಡೆ ಆಗದಿರಲು ಸ್ಪಷ್ಟ ಕಾರಣ

ಬಿಪಿಎಲ್ ಕಾರ್ಡ್ ಇರೋರಿಗೆ ಸಿಹಿ ಸುದ್ದಿ; ಇನ್ಮುಂದೆ ನಿಮ್ಮ ಮನೆಗೆ ಡೆಲಿವರಿ ಆಗಲಿದೆ ರೇಷನ್ - Kannada News

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹೆಚ್ಚುವರಿ ಅಕ್ಕಿ!

ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಿಂದಲೂ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ (Free rice) ದೇಶದ ಬಿಪಿಎಲ್ ಕಾರ್ಡ್ ಹೊಂದಿರುವ ಬಡವರ್ಗದ ಜನರಿಗೆ ನೀಡುತ್ತಿದೆ. ಇದರ ಜೊತೆಗೆ ರಾಜ್ಯ ಸರ್ಕಾರ ಚುನಾವಣೆಗೂ (election) ಮೊದಲು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ 5 ಕೆಜಿ ಅಕ್ಕಿಯನ್ನು ಹೊಂದಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ಕಳೆದು ಮೂರು ತಿಂಗಳಿನಿಂದ ಅನ್ನಭಾಗ್ಯ ಯೋಜನೆಯಡಿಯಲ್ಲಿ ನೇರವಾಗಿ ಫಲಾನುಭವಿಗಳ ಖಾತೆಗೆ (Bank Account) ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ.

ಈಗ ಅನ್ನ ಭಾಗ್ಯ ಯೋಜನೆಯಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಸರ್ಕಾರ, ಹಿರಿಯ ನಾಗರಿಕರಿಗೆ ವಿಶೇಷ ಸೌಲತ್ತೊಂದನ್ನು ಮಾಡಿಕೊಡಲಿದೆ.

ಮನೆ ಬಾಗಿಲಿಗೆ ಪಡಿತರ ವಸ್ತುಗಳು ಬರಲಿವೆ!

Annabhagya Yojana 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮನೆಯಲ್ಲಿ ಒಬ್ಬರೇ ಇದ್ದರೆ ಅಂತವರಿಗೆ ಪಡಿತರ ವಸ್ತುಗಳನ್ನು ನೇರವಾಗಿ ಅವರ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಲಿದೆ. ಈ ಬಗ್ಗೆ ಸರ್ಕಾರದೊಂದಿಗೆ ಆಹಾರ ಇಲಾಖೆ (Food department) ಚರ್ಚೆ ನಡೆಸಿದ್ದು ರಾಜ್ಯ ಆರ್ಥಿಕ ಇಲಾಖೆ ಒಪ್ಪಿಗೆ ನೀಡುವುದು ಬಾಕಿ ಇದೆ.

ಯಾವಾಗಿನಿಂದ ಈ ಹೋಮ್ ಡೆಲಿವರಿ ಸರ್ವಿಸ್ ? (Home delivery service) ಆರಂಭವಾಗುವುದು ಎನ್ನುವುದರ ಬಗ್ಗೆ ಸ್ಪಷ್ಟನೆ ಇಲ್ಲ, ಆದರೆ ಶೀರ್ಘದಲ್ಲಿಯೇ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತಹ ಈ ಒಂದು ಹೊಸ ಸೌಲಭ್ಯವನ್ನು ರಾಜ್ಯ ಸರ್ಕಾರ ನೀಡಲಿದೆ ಎನ್ನಬಹುದು.

ಗೃಹಜ್ಯೋತಿ ಫ್ರೀ ವಿದ್ಯುತ್ ಜೊತೆಗೆ ಮತ್ತೊಂದು ಸೌಲಭ್ಯ ನೀಡಲು ಮುಂದಾದ ರಾಜ್ಯ ಸರ್ಕಾರ

ಶುರುವಾಗಲಿದೆ ಸುವಿಧಾ ಅಪ್ಲಿಕೇಶನ್! (Suvidha application)

ಆಹಾರ ಇಲಾಖೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಡಿತರ ವಸ್ತುಗಳನ್ನ ಮನೆ ಬಾಗಿಲಿಗೆ ತಲುಪಿಸುವ ಸಲುವಾಗಿ ಸುವಿಧಾ ಅಪ್ಲಿಕೇಶನ್ ಕೂಡ ಡೆವಲಪ್ ಮಾಡಲಿದೆ. ಪಡಿತರ ಅಂಗಡಿಯಲ್ಲಿ ಯಾರಿಗೆ ಮನೆ ಬಾಗಿಲಿಗೆ ಪಡಿತರ ವಸ್ತುಗಳನ್ನು ಕಳುಹಿಸಬೇಕು ಅವರ ವಸ್ತುಗಳನ್ನು ತಾವೇ ಸ್ವತಃ ಪ್ಯಾಕ್ ಮಾಡಬೇಕು ಹಾಗೂ ಆಯಾ ಮನೆಗಳಿಗೆ ಡೆಲಿವರಿ (home delivery) ಮಾಡಿದ ನಂತರ ಅದನ್ನು ಸುವಿಧ ಅಪ್ಲಿಕೇಶನ್ ನಲ್ಲಿ ಅಪ್ಲೋಡ್ (upload) ಮಾಡಬೇಕು.

ಇನ್ನು ಈ ಸಂದರ್ಭದಲ್ಲಿ ಡೆಲಿವರಿ ಚಾರ್ಜ್ (delivery charge) ಎಂದು 50 ರೂಪಾಯಿಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ ರಾಜ್ಯದಲ್ಲಿ ವಾಸಿಸುವ 60 ವರ್ಷ ಮೇಲ್ಪಟ್ಟ ಹಿರಿಯ ಬಡ ನಾಗರಿಕರಿಗೆ ಅನುಕೂಲವಾಗುವ ಸರ್ಕಾರ ತೆಗೆದುಕೊಂಡಿರುವ ಈ ತೀರ್ಮಾನದಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ ಎನ್ನಬಹುದು.

Good News For BPL Ration Card Holders, Ration will be delivered to your home

Follow us On

FaceBook Google News

Good News For BPL Ration Card Holders, Ration will be delivered to your home