ಎಲ್ಲರಿಗೂ ಗೊತ್ತಿರುವ ಹಾಗೆ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಕಾವು ಜೋರಾಗಿದೆ ಎನ್ನಬಹುದು. ಈಗಾಗಲೇ ಈ ಯೋಜನೆ ಆರಂಭವಾದ ನಂತರ ಮಹಿಳೆಯರಿಗೆ ಸಿಕ್ಕಾಪಟ್ಟೆ ಖುಷಿ ಆಗಿದ್ದು ಇದೇ ಕಾರಣಕ್ಕೆ ಕೋಟ್ಯಾಂತರ ಜನ ಮಹಿಳೆಯರು ಮುಗಿಬಿದ್ದು ಅರ್ಜಿ ಕೂಡ ಸಲ್ಲಿಸಿದರು

ಆದರೆ ಈಗ ಬಂದಿರುವ ಮಾಹಿತಿಯ ಪ್ರಕಾರ ಸುಮಾರು 10 ಲಕ್ಷದಷ್ಟು ಮಹಿಳೆಯರ ಖಾತೆಗೆ (Bank Account) ಇದುವರೆಗೆ ಒಂದೇ ಒಂದು ಕಂತಿನ ಹಣವು ಕೂಡ ಬಿಡುಗಡೆ ಆಗಿಲ್ಲ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವರಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಸ್ಪಷ್ಟನೆಯನ್ನು ನೀಡಿದ್ದಾರೆ.

Gruha Lakshmi 3 installments Deposited together, Check your Bank account

ಗೃಹಜ್ಯೋತಿ ಫ್ರೀ ವಿದ್ಯುತ್ ಜೊತೆಗೆ ಮತ್ತೊಂದು ಸೌಲಭ್ಯ ನೀಡಲು ಮುಂದಾದ ರಾಜ್ಯ ಸರ್ಕಾರ

ಯಾರಿಗೆ ಹಣ ಬಿಡುಗಡೆ ಆಗಿಲ್ಲ ಎನ್ನುವ ಬಗ್ಗೆ ಇಲ್ಲಿದೆ ಅಂಕಿ ಅಂಶಗಳು!

*ಒಟ್ಟು ಅರ್ಜಿ ಸಲ್ಲಿಕೆ – 1.14 ಕೋಟಿ
*ಅರ್ಜಿ ಸಲ್ಲಿಸಿ ಮೃತರಾದವರ ಸಂಖ್ಯೆ – 3082
*ಆಧಾರ್ ಮತ್ತು ಬ್ಯಾಂಕಿನಲ್ಲಿ ನೀಡಿರುವ ಖಾತೆಯ ಹೆಸರುಗಳಲ್ಲಿ ವ್ಯತ್ಯಾಸ ಆಗಿರುವ ಅರ್ಜಿಗಳ ಸಂಖ್ಯೆ – 1,59,356
*ಆಧಾರ್ ಲಿಂಕ್ ಮಾಡಿಕೊಳ್ಳದೆ ಇರುವ ಗ್ರಹಿಣಿಯರ ಸಂಖ್ಯೆ – 5,96,268
*ವಿಳಾಸ ಮತ್ತು ಹೆಸರು ವಿಭಿನ್ನವಾಗಿರುವ ಮಹಿಳೆಯರ ಸಂಖ್ಯೆ – 1,75,683
*ಒಟ್ಟು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆದುಕೊಳ್ಳಲು ಸಾಧ್ಯವಾಗದೇ ಇರುವ ಗೃಹಿಣಿಯರ ಸಂಖ್ಯೆ – 9,44,155.

ಹೌದು, ಸುಮಾರು 10 ಲಕ್ಷದಷ್ಟು ಮಹಿಳೆಯರ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ. ತಮ್ಮ ಎಲ್ಲಾ ದಾಖಲೆಗಳು (documents) ಸರಿಯಾಗಿವೆ ಎಂದು ಮಹಿಳೆಯರು ಹೇಳಿಕೊಳ್ಳುತ್ತಿದ್ದರು ಕೂಡ ಸರ್ಕಾರ ಈಗ ನೀಡಿರುವ ಅಂಕಿ ಅಂಶಗಳ ಪ್ರಕಾರ 10 ಲಕ್ಷ ಗೃಹಿಣಿಯರ ಖಾತೆಗಳಲ್ಲಿ ಎಲ್ಲಾ ದಾಖಲೆಗಳು ಸರಿಯಾಗಿ ಇಲ್ಲ.

ಸಾಕಷ್ಟು ಮಹಿಳೆಯರು ಪೋಸ್ಟ್ ಆಫೀಸ್ (post office) ನಲ್ಲಿ ಖಾತೆ ಹೊಂದಿದ್ದಾರೆ ಆದರೆ ಅದಕ್ಕೆ ಇ- ಕೆವೈಸಿ (KYC) ಮಾಡಿಸಿಕೊಂಡಿಲ್ಲ. ಅದೇ ರೀತಿಯಾಗಿ ಇನ್ನೂ ಒಂದಿಷ್ಟು ಮಹಿಳೆಯರು ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರು ಅದಕ್ಕೆ ಆಧಾರ್ ಸೀಡಿಂಗ್ (Aadhaar seeding) ಮಾಡಿಕೊಂಡಿಲ್ಲ ಹಾಗೂ ಕೆವೈಸಿ ಮಾಡಿಸಿಲ್ಲ.

ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತ ತಲೆ ಕೆಡಿಸಿಕೊಳ್ಳಬೇಡಿ! ದೀಪಾವಳಿಗೆ ಬಂಪರ್ ಗಿಫ್ಟ್ ಕೊಟ್ಟ ಸರ್ಕಾರ

ಅಷ್ಟೇ ಅಲ್ಲದೆ ರೇಷನ್ ಕಾರ್ಡ್ ಗೂ ಕೂಡ ಕೆವೈಸಿ ಮಾಡಿಸಿಕೊಳ್ಳಬೇಕು ಅದನ್ನು ಹಲವು ಗೃಹಿಣಿಯರು ಮಾಡಿಕೊಂಡಿಲ್ಲ.

Gruha Lakshmi Yojaneಅಷ್ಟು ಮಾತ್ರವಲ್ಲದೆ ರೇಷನ್ ಕಾರ್ಡ್ ತಿದ್ದುಪಡಿಗೆ (ration card update) ಸರ್ಕಾರ ಈಗಾಗಲೇ ಹಲವು ಬಾರಿ ಅವಕಾಶ ಮಾಡಿಕೊಟ್ಟಿದೆ ಆದರೂ ಕೂಡ ಇನ್ನೂ ಕೆಲವು ಮಹಿಳೆಯರ ರೇಷನ್ ಕಾರ್ಡ್ ತಿದ್ದುಪಡಿ ಅಪ್ ಡೇಟ್ ಆಗಿಲ್ಲ.

ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಇದಿಯಾ? ಚೆಕ್ ಮಾಡಿಕೊಳ್ಳಿ! ಯಾಕಂದ್ರೆ ಸಾಕಷ್ಟು ಕಾರ್ಡುಗಳು ರದ್ದಾಗಿವೆ

ಈ ಎಲ್ಲಾ ಕಾರಣಗಳಿಂದ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲ. ಆದರೆ ಈ ಸಮಸ್ಯೆಗಳಿಗೂ ಕೂಡ ಪರಿಹಾರ ಸೂಚಿಸಿರುವ ಸರ್ಕಾರ ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರ ಮುಖಾಂತರ ಯಾರ ಖಾತೆಯಲ್ಲಿ ಸಮಸ್ಯೆ ಇದೆಯೋ ಅವರಿಗೆ ಬೇಕಾಗಿರುವ ಸಹಾಯವನ್ನು ಮಾಡಿ ಅವರ ಸಮಸ್ಯೆಗೆ ಪರಿಹಾರ ನೀಡುವಂತೆ ಸೂಚಿಸಿದೆ.

ಎಲ್ಲಾ ಸಮಸ್ಯೆಗಳು ಪರಿಹಾರ ಆದ್ರೆ ಅಂಥವರ ಖಾತೆಗೂ ಕೂಡ ಅರ್ಜಿ ಸಲ್ಲಿಕೆ ಆಗಿದ್ದರೆ ಹಣ ಜಮಾ ಆಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Reason for the non-release of Gruha Lakshmi Yojana Money to 10 lakh People