ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ (women empowerment) ಅವರ ಖಾತೆಗೆ (Bank Account) ಪ್ರತಿ ತಿಂಗಳು 2000 ರೂ.ಗಳನ್ನು ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಮೂಲಕ ಸರ್ಕಾರ ಜಮಾ ಮಾಡುತ್ತಿದೆ.

ಈಗಾಗಲೇ ಎರಡು ಕಂತಿನ ಹಣ ಬಿಡುಗಡೆ ಆಗಿದೆ. ಕೆಲವರಿಗೆ ಎರಡು ಕಂತಿನ ಹಣ (Two installment) ಸೇರಿ 4000 ಗಳು ಬಂದಿದ್ದರೆ ಇನ್ನೂ ಕೆಲವರು ಮೊದಲ ಕಂತಿನ ಹಣವೇ ಇನ್ನೂ ನಮ್ಮ ಕೈ ಸೇರಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Gruha Lakshmi Yojana

ಈ ನಡುವೆ ಮಹತ್ವದ ಅಪ್ಡೇಟ್ (update) ಒಂದನ್ನು ಸರ್ಕಾರ ನೀಡಿದೆ. 2000 ರೂ. ಎನ್ನುವುದು ಸಣ್ಣ ಮೊತ್ತವಲ್ಲ ಕೆಲವರಿಗೆ ಅದು ಬಹಳ ದೊಡ್ಡ ವಿಷಯವಾಗಿರುತ್ತದೆ, ಹಬ್ಬವನ್ನು ಕೂಡ ಸಂಭ್ರಮದಿಂದ ಆಚರಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಬಡವರಿಗೆ ಅನುಕೂಲವಾಗುವಂತಹ ಎರಡು ಸಾವಿರ ರೂಪಾಯಿ ನೀಡುವ ಯೋಜನೆ, ನಿಜಕ್ಕೂ ಮಹಿಳೆಯರಿಗೆ ವರದಾನವಾಗಿದೆ.

ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಇದಿಯಾ? ಚೆಕ್ ಮಾಡಿಕೊಳ್ಳಿ! ಯಾಕಂದ್ರೆ ಸಾಕಷ್ಟು ಕಾರ್ಡುಗಳು ರದ್ದಾಗಿವೆ

ಆದರೆ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಯಶಸ್ವಿಗೊಳಿಸುವಲ್ಲಿ ಸ್ವಲ್ಪ ಹಿಂದೆ ಬಿದ್ದಿದೆ ಎನ್ನುವ ಮಾತುಕುಡಾ ಕೇಳಿ ಬರುತ್ತಿದೆ. ಯಾಕೆಂದರೆ ಸರಕಾರದವರು ಇನ್ನೂ 18 ಲಕ್ಷಕ್ಕೂ ಹೆಚ್ಚಿನ ಮಹಿಳೆಯರ ಖಾತೆಗೆ ಹಣ (DBT) ವರ್ಗಾವಣೆ ಆಗಿಲ್ಲ, ವರ್ಗಾವಣೆ ಆದರೆ ಎರಡನೇ ಕಂತಿನ ಹಣವು ಕೂಡ ಶೀಘ್ರದಲ್ಲಿಯೇ ವರ್ಗಾವಣೆ ಆಗುತ್ತದೆ. ಆಗಸ್ಟ್ 30ಕ್ಕೆ ಮೊದಲ ಕಂತಿನ ಹಣ ಬಿಡುಗಡೆ ಆಗಿದ್ದರೆ ಅಕ್ಟೋಬರ್ 17ರಿಂದ ಎರಡನೇ ಕಂತಿನ ಹಣವು ಕೂಡ ಜಮಾ ಆಗುತ್ತಿದೆ.

ಹಂತ ಹಂತವಾಗಿ ಹಣ ಬಿಡುಗಡೆ!

Karnataka Gruha Lakshmi Schemeಬ್ಯಾಂಕ್ ಗಳು ಒಂದೇ ದಿನಕ್ಕೆ ಎಲ್ಲಾ ಮೊತ್ತವನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ, ಒಂದು ದಿನಕ್ಕೆ ಇಷ್ಟು ಹಣವನ್ನು ಮಾತ್ರ ಬಿಡುಗಡೆ ಮಾಡಬೇಕು ಎನ್ನುವ ಮಿತಿಯನ್ನು ಆರ್‌ಬಿಐ (RBI) ಬ್ಯಾಂಕ್ ಗಳ (Bank) ಮೇಲೆ ಹೇರಿದೆ.

ಪ್ರತಿದಿನ ಕೆಲವು ಜಿಲ್ಲೆಗಳಿಗೆ (district) 2,000ಗಳನ್ನು ಜಮಾ ಮಾಡಲಾಗುತ್ತಿದೆ. ಕೆಲವರಿಗೆ ದಸರಾ ಗಿಫ್ಟ್ ಸಿಕ್ಕಿದ್ದರೆ ಇನ್ನೂ ಯಾರ ಖಾತೆಗೆ ಜಮಾ ಆಗಿಲ್ವೋ ಅವರಿಗೆ ದೀಪಾವಳಿ ಉಡುಗೊರೆ ಸಿಗುತ್ತೆ ಎಂದು ಭಾವಿಸಬಹುದು ಯಾಕೆಂದರೆ ದೀಪಾವಳಿ (Deepavali) ಹೊತ್ತಿಗೆ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಯೋಜನೆಯ ಹಣ ವರ್ಗಾವಣೆ ಆಗಬೇಕು ಎನ್ನುವುದು ಸರ್ಕಾರದ ಉದ್ದೇಶ.

ಮೆಸೇಜ್ ಬಂದಿದ್ರೂ ಗೃಹಲಕ್ಷ್ಮಿ ಯೋಜನೆ ಹಣ ಬಾರದೇ ಇರುವುದಕ್ಕೆ ಇದೇ ಕಾರಣ! ಹೊಸ ಅಪ್ಡೇಟ್

ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ ನಿಮ್ಮ ಖಾತೆಗೆ ಆಧಾರ್ ಸೀಡಿಂಗ್ (Aadhaar seeding);ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಇನ್ನು ಬ್ಯಾಂಕಿನಲ್ಲಿ ನಿಮ್ಮ ಲೋನ್ ಅಕೌಂಟ್ (loan account) ಅನ್ನು ಗೃಹಲಕ್ಷ್ಮಿ ಯೋಜನೆಗೂ ಕೊಟ್ಟಿದ್ದರೆ, ಹಣ ನಿಮ್ಮ ಸಾಲಕ್ಕೆ ಜಮಾ ಆಗಲು ಬಹುದು.

ನೀವು ಖಾತೆಯನ್ನು ದಾಖಲೆಯಾಗಿ ನೀಡುವಾಗಲು ಎಚ್ಚರಿಕೆವಹಿಸಿ, ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ (ration card correction) ಆಗಿರುವುದು ಆನ್ಲೈನ್ ನಲ್ಲಿ ಅಪ್ ಡೇಟ್ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ.

ಅಕ್ಟೋಬರ್ ತಿಂಗಳ ಕೊನೆಯಲ್ಲಿ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಎರಡು ಕಂತಿನ ಹಣ ಜಮಾ ಆಗೋದ್ರಲ್ಲಿ ಸಂಶಯವಿಲ್ಲ. ಅದೇ ರೀತಿ ಸಚಿವರು ಹೇಳಿರುವಂತೆ ಯಾರು ತಡವಾಗಿ ಅರ್ಜಿ ಸಲ್ಲಿಸಿದ್ದಾರೋ ಅಂತವರಿಗೆ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಮಾಡಲಾಗುವುದು.

ಗೃಹಲಕ್ಷ್ಮಿ ಯೋಜನೆ ಬೆನ್ನಲ್ಲೇ ಮಹಿಳೆಯರಿಗೆ ಮತ್ತೊಂದು ಬಂಪರ್ ಗಿಫ್ಟ್; ಹೊಸ ಯೋಜನೆ ಘೋಷಣೆ

Don’t worry if you haven’t received Gruha Lakshmi Yojana money, Government gave bumper gift for Diwali