ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಇದಿಯಾ? ಚೆಕ್ ಮಾಡಿಕೊಳ್ಳಿ! ಯಾಕಂದ್ರೆ ಸಾಕಷ್ಟು ಕಾರ್ಡುಗಳು ರದ್ದಾಗಿವೆ

Story Highlights

ಸುಮಾರು 2.96 ಲಕ್ಷ ಹೊಸದಾಗಿ ಬಿಪಿಎಲ್/ (BPL card) ಎಪಿಎಲ್ ಕಾರ್ಡ್ (APL card) ಪಡೆದುಕೊಳ್ಳಲು ಅರ್ಜಿಗಳು ಸಲ್ಲಿಕೆಯಾಗಿದೆ. ಇದರಲ್ಲಿ ಸಾಕಷ್ಟು ಅನರ್ಹರು ಕೂಡ ಅರ್ಜಿ ಸಲ್ಲಿಸಿದ್ದಾರೆ ಎಂಬುದನ್ನು ಸರ್ಕಾರ ಕಂಡುಕೊಂಡಿದೆ

ಕೇಂದ್ರ ಸರ್ಕಾರ (Central government) ರಾಜ್ಯದ ಜನತೆಗೆ ಹಲವು ಯೋಜನೆಗಳನ್ನು ಪರಿಚಯಿಸಿದ್ದು ಅವುಗಳಲ್ಲಿ ರೇಷನ್ ಕಾರ್ಡ್ (Ration Card) ವಿತರಣೆ ಮಾಡಿರುವುದು ಮಾತ್ರ ಕೋಟ್ಯಾಂತರ ಜನರಿಗೆ ನೇರವಾಗಿ ಪ್ರಯೋಜನವಾಗುತ್ತಿದೆ.

ಅದರಲ್ಲೂ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಘೋಷಣೆ ಮಾಡಲಾಗಿರುವ ಗ್ಯಾರಂಟಿ ಯೋಜನೆಗಳ (guarantee schemes) ಪ್ರಯೋಜನ ಕೂಡ ರೇಷನ್ ಕಾರ್ಡ್ ಇರುವವರು ಪಡೆದುಕೊಳ್ಳಬಹುದು.

ಹಾಗಾಗಿ ರಾಜ್ಯದ ಜನತೆಗೆ ರೇಷನ್ ಕಾರ್ಡ್ ಸಾಕಷ್ಟು ಪ್ರಯೋಜನ ನೀಡುತ್ತಿದೆ. ಆದರೆ ಇಲ್ಲೊಂದು ಬೇಸರದ ಸಂಗತಿ ಅಂದ್ರೆ ರಾಜ್ಯ ಸರ್ಕಾರ ಆಹಾರ ಇಲಾಖೆಯೊಂದಿಗೆ ಚರ್ಚೆ ನಡೆಸಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಲಕ್ಷಾಂತರ ಕುಟುಂಬಗಳಿಗೆ ಸರ್ಕಾರದ ಯೋಜನೆಯ ಫಲ ಸಿಗದೇ ಇರುವ ಎಲ್ಲಾ ಸಾಧ್ಯತೆಗಳು ಇವೆ.

ಮೆಸೇಜ್ ಬಂದಿದ್ರೂ ಗೃಹಲಕ್ಷ್ಮಿ ಯೋಜನೆ ಹಣ ಬಾರದೇ ಇರುವುದಕ್ಕೆ ಇದೇ ಕಾರಣ! ಹೊಸ ಅಪ್ಡೇಟ್

ರೇಷನ್ ಕಾರ್ಡ್ ರದ್ದತಿ

ಸುಮಾರು 2.96 ಲಕ್ಷ ಹೊಸದಾಗಿ ಬಿಪಿಎಲ್/ (BPL card) ಎಪಿಎಲ್ ಕಾರ್ಡ್ (APL card) ಪಡೆದುಕೊಳ್ಳಲು ಅರ್ಜಿಗಳು ಸಲ್ಲಿಕೆಯಾಗಿದೆ. ಇದರಲ್ಲಿ ಸಾಕಷ್ಟು ಅನರ್ಹರು ಕೂಡ ಅರ್ಜಿ ಸಲ್ಲಿಸಿದ್ದಾರೆ ಎಂಬುದನ್ನು ಸರ್ಕಾರ ಕಂಡುಕೊಂಡಿದೆ

ಪರಿಶೀಲನೆ ಕೂಡ ಬಹುತೇಕ ಕೊನೆಯ ಹಂತಕ್ಕೆ ತಲುಪಿದ್ದು ಸದ್ಯದಲ್ಲಿಯೇ ಅರ್ಹರಿಗೆ ಹೊಸದಾಗಿ ಪಡಿತರ ಚೀಟಿ ವಿತರಣೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಯಾರಿಗೆ ನಿಜವಾಗಿ ಪಡಿತರ ಚೀಟಿಯ ಅಗತ್ಯ ಇಲ್ಲವೋ ಅಂತವರು ಕೂಡ ಅರ್ಜಿ ಸಲ್ಲಿಸುತ್ತಾರೆ ಅಂತವರ ಅರ್ಜಿಯನ್ನು ನೇರವಾಗಿ ಸರ್ಕಾರ ತಿರಸ್ಕರಿಸುತ್ತಿದೆ. ಅಷ್ಟೇ ಅಲ್ಲದೆ ಈಗಾಗಲೇ ಸಾಕಷ್ಟು ಜನ ಪಡೆದುಕೊಂಡಿರುವ ರೇಷನ್ ಕಾರ್ಡ್ ರದ್ದತಿ ಆಗುವ ಸಾಧ್ಯತೆ ಕೂಡ ಇದೆ.

ಗೃಹಲಕ್ಷ್ಮಿ ಯೋಜನೆ ಬೆನ್ನಲ್ಲೇ ಮಹಿಳೆಯರಿಗೆ ಮತ್ತೊಂದು ಬಂಪರ್ ಗಿಫ್ಟ್; ಹೊಸ ಯೋಜನೆ ಘೋಷಣೆ

ಸರ್ಕಾರದಿಂದ ಹೊಸ ಅಪ್ಡೇಟ್

BPL Ration Cardಸರ್ಕಾರ ಈಗಾಗಲೇ ಮಹತ್ವದ ಮಾಹಿತಿ ಒಂದನ್ನು ನೀಡಿದ್ದು ಆಹಾರ ಇಲಾಖೆಯ ಪರಿಶೀಲನೆಯ ಆಧಾರದ ಮೇಲೆ ಸುಮಾರು ಮೂರುವರೆ ಲಕ್ಷ ಜನರ ಪಡಿತರ ಚೀಟಿ ಅಮಾನತ್ತುಗೊಳಿಸಲು (ration card cancellation) ತೀರ್ಮಾನಿಸಲಾಗಿದೆ.

ಅದೆಷ್ಟೋ ಜನ ಬಿಪಿಎಲ್ ಕಾರ್ಡ್ (BPL Card) ಹೊಂದಿರುತ್ತಾರೆ ಆದರೆ ಪಡಿತರ ಪಡೆದುಕೊಳ್ಳುವಲ್ಲಿ ಹಿಂದೇಟು ಹಾಕುತ್ತಾರೆ, ನ್ಯಾಯಬೆಲೆ ಅಂಗಡಿಯತ್ತ ಮುಖವನ್ನು ಮಾಡಿರುವುದಿಲ್ಲ. ಆದರೆ ಈಗ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವ ಸಲುವಾಗಿ ಪಡಿತರ ಚೀಟಿಯ ಅಗತ್ಯ ಎಷ್ಟಿದೆ ಎಂಬುದನ್ನು ತಿಳಿದುಕೊಂಡಿದ್ದಾರೆ.

ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಈಗಾಗಲೇ ಯಾರು ಆರು ತಿಂಗಳಿನಿಂದ ಪಡಿತರ ತೆಗೆದುಕೊಂಡಿಲ್ಲವೋ ಅಂತವರ ಕಾರ್ಡ್ ರದ್ದುಪಡಿಗೆ ಮುಂದಾಗಿದೆ. ಇಲ್ಲಿ ಸರ್ಕಾರದ ಉದ್ದೇಶ ಕ್ಲಿಯರ್ ಆಗಿದೆ, ಯಾರಿಗೆ ನಿಜವಾಗಿ ಅರ್ಹತೆ ಇದೆಯೋ ಯಾರಿಗೆ ನಿಜವಾಗಿ ಅವಶ್ಯಕತೆ ಇದೆಯೋ ಅಂತವರಿಗೆ ಮಾತ್ರ ರೇಷನ್ ಕಾರ್ಡ್ ಲಭ್ಯವಾಗಬೇಕು. ಅವಶ್ಯಕತೆ ಇಲ್ಲದವರು ಕೂಡ ರೇಷನ್ ಕಾರ್ಡ್ ಹೊಂದಿದ್ದರೆ ತಕ್ಷಣವೇ ಅಂಥವರ ರೇಷನ್ ಕಾರ್ಡ್ ರದ್ದು ಪಡಿಸಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.

ಗೃಹಜ್ಯೋತಿ ಯೋಜನೆ ಫ್ರೀ ಕರೆಂಟ್ ದೇವಾಲಯಗಳಿಗೂ ವಿಸ್ತರಣೆ! ದೇವರಿಗೂ ಉಚಿತ ವಿದ್ಯುತ್

ರೇಷನ್ ಕಾರ್ಡ್ ರದ್ದಾದರೆ ಸಿಗುವುದಿಲ್ಲ ಈ ಸೌಲಭ್ಯಗಳು!

ರಾಜ್ಯ ಸರ್ಕಾರ ಅನರ್ಹರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅಂತವರಿಗೆ ಬಿಸಿ ಮುಟ್ಟಿಸಿದೆ ಎನ್ನಬಹುದು. ಮೂರುವರೆ ಲಕ್ಷದಷ್ಟು ಬಿಪಿಎಲ್ ಕಾರ್ಡ್ ಅನ್ನು ರದ್ದುಪಡಿಸಿ ಈಗಾಗಲೇ ಅರ್ಜಿ ಸಲ್ಲಿಕೆ ಆಗಿರುವ 2.96 ಲಕ್ಷ ಜನರಿಗೆ ರೇಷನ್ ಕಾರ್ಡ್ ಅನ್ನು ವಿತರಣೆ ಮಾಡಲು ಚಿಂತನೆ ನಡೆಸಿದೆ. ರೇಷನ್ ಕಾರ್ಡ್ ರದ್ದಾಗುವುದರಿಂದ, ಹಲವು ಪ್ರಯೋಜನಗಳು ಕೂಡ ಸಿಗುವುದಿಲ್ಲ.

*ರೇಷನ್ ಕಾರ್ಡ್ ರದ್ದಾದರೆ ಪಡಿತರ ವಸ್ತುಗಳು ಸಿಗುವುದಿಲ್ಲ.
*ರೇಷನ್ ಕಾರ್ಡ್ ರದ್ದಾದರೆ ಅನ್ನಭಾಗ್ಯ ಯೋಜನೆಯ (Annabhagya scheme) ಹಣ ಅಥವಾ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣ ಸಿಗುವುದಿಲ್ಲ.
*ರೇಷನ್ ಕಾರ್ಡ್ ರದ್ದಾದರೆ ಗ್ರಾಮೀಣ ಭಾಗದಲ್ಲಿ ಜನರಿಗೆ ಸಿಗುವ ಯಾವ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ
*ರೇಷನ್ ಕಾರ್ಡ್ ರದ್ದಾದರೆ ಕೇಂದ್ರ ಸರ್ಕಾರದ ಯೋಜನೆಗಳು ಕೈ ಸೇರುವುದಿಲ್ಲ.

Check your ration card active or Not, Because many cards are cancelled