ಮೆಸೇಜ್ ಬಂದಿದ್ರೂ ಗೃಹಲಕ್ಷ್ಮಿ ಯೋಜನೆ ಹಣ ಬಾರದೇ ಇರುವುದಕ್ಕೆ ಇದೇ ಕಾರಣ! ಹೊಸ ಅಪ್ಡೇಟ್
ಯಾರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು (bank account) ಹೊಂದಿದ್ದಾರೋ ಅಂತವರ ಖಾತೆಗೆ 2 ಸಾವಿರ ರೂಪಾಯಿ ಜಮಾ ಆಗಿಲ್ಲ, ಅಷ್ಟೇ ಅಲ್ಲದೆ ಬ್ಯಾಂಕ್ ಖಾತೆ ಆಕ್ಟಿವ್ ಆಗಿಲ್ಲದೆ ಇರುವವರಿಗೂ ಕೂಡ ಹಣ ಜಮಾ ಆಗಿಲ್ಲ.
ನಾವು ಅರ್ಜಿ ಸಲ್ಲಿಸಿದ್ದು (application) ಯಶಸ್ವಿಯಾಗಿದೆ ಎಂದು ಸರ್ಕಾರದ ಕಡೆಯಿಂದ ಎಸ್ ಎಂ ಎಸ್ (SMS) ಬಂದಿದೆ. ಎಲ್ಲಾ ದಾಖಲೆಗಳು ಸರಿಯಾಗಿಯೇ ಇವೆ. ಆದರೂ ನಮ್ಮ ಖಾತೆಗೆ ಮಾತ್ರ ಒಂದು ಕಂತಿನ (not even one installment received) ಹಣವು ಜಮಾ ಆಗಿಲ್ಲ ಎಂದು ಸುಮಾರು 10 ಲಕ್ಷ ಮಹಿಳೆಯರು ಇಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಎಲ್ಲವೂ ಸರಿಯಾಗಿ ಇಲ್ಲದೆ ಇದ್ದಿದ್ರೆ ನಮಗೆ ದೃಢೀಕರಣ ಸಂಖ್ಯೆ ಹಾಗೂ ಅರ್ಜಿ ಸಲ್ಲಿಕೆ ಆಗಿದ್ದು ಯಶಸ್ವಿಯಾಗಿದೆ ಎನ್ನುವ ಎಸ್ಎಂಎಸ್ (Mobile SMS) ಏಕೆ ಬರುತ್ತಿತ್ತು ಎಂದು ಗೃಹಲಕ್ಷ್ಮಿ ಯೋಜನೆಯ ಹಣ (Gruha Lakshmi Yojana Money) ಪಡೆದುಕೊಳ್ಳದೆ ಇರುವ ಗೃಹಿಣಿಯರು ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಇವರಿಗೆ ಸುಮಾರು 10 ಲಕ್ಷ ಮಹಿಳೆಯರ ಖಾತೆಗೆ (Bank Account) ಇನ್ನೂ ಕೇವಲ ಒಂದು ಕಂತಿನ ಹಣವು ಕೂಡ ಜನ ಆಗಿಲ್ಲ. ಇದಕ್ಕಾಗಿ ಹಣವನ್ನೇ ಹಾಕದೆ ಸರ್ಕಾರ ದಾಖಲೆ ಸರಿಯಾಗಿ ಇಲ್ಲ ಎಂದು ವಂಚನೆ ಮಾಡುತ್ತಿದೆ ಎಂಬುದು ಹಲವು ಮಹಿಳೆಯರ ಮಾತು.
ಹಾಗಾದ್ರೆ ನಿಜಕ್ಕೂ ಮಹಿಳೆಯರ ಖಾತೆಗೆ ಯಾಕೆ ಹಣ ಬಂದಿಲ್ಲ ಎಂಬುದರ ಬಗ್ಗೆ ಸರ್ಕಾರ (state government) ಕೆಲವೊಂದು ಸ್ಪಷ್ಟನೆಗಳನ್ನು ಕೂಡ ನೀಡಿದೆ.
ಗೃಹಲಕ್ಷ್ಮಿ ಯೋಜನೆ ಬೆನ್ನಲ್ಲೇ ಮಹಿಳೆಯರಿಗೆ ಮತ್ತೊಂದು ಬಂಪರ್ ಗಿಫ್ಟ್; ಹೊಸ ಯೋಜನೆ ಘೋಷಣೆ
ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದಿಯಾ?
ಯಾರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು (bank account) ಹೊಂದಿದ್ದಾರೋ ಅಂತವರ ಖಾತೆಗೆ 2 ಸಾವಿರ ರೂಪಾಯಿ ಜಮಾ ಆಗಿಲ್ಲ, ಅಷ್ಟೇ ಅಲ್ಲದೆ ಕಳೆದ ಎರಡು ವರ್ಷಗಳಿಂದ ನಿರ್ವಹಣೆ ಮಾಡದೇ ಇರುವವರಿಗೆ ಅಂದರೆ ಬ್ಯಾಂಕ್ ಖಾತೆ ಆಕ್ಟಿವ್ ಆಗಿಲ್ಲದೆ ಇರುವವರಿಗೂ ಕೂಡ ಹಣ ಜಮಾ ಆಗಿಲ್ಲ.
ಆಧಾರ್ ಲಿಂಕ್ ಆಗಿದ್ಯಾ?
ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಈ ಸಮಸ್ಯೆ ಆಗುತ್ತಿದೆ, ಅದೆಷ್ಟೋ ಜನ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರು ಅದನ್ನು ನಿರ್ವಹಣೆ (active) ಮಾಡಿಲ್ಲ.. ಅಷ್ಟೇ ಅಲ್ಲದೆ ಬ್ಯಾಂಕ್ ಖಾತೆ ಇದ್ದರೂ ಅದಕ್ಕೆ ಆಧಾರ್ ಕಾರ್ಡ್ ಲಿಂಕ್ (Aadhar Card link) ಕೂಡ ಮಾಡಿಸಿಕೊಂಡಿಲ್ಲ. ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಯ (ration card update) ಆಧಾರದ ಮೇಲೆ ಗೃಹಲಕ್ಷ್ಮಿಯ ಫಲಾನುಭವಿಗಳನ್ನು ಸರ್ಕಾರ ಆಯ್ಕೆ ಮಾಡುತ್ತದೆ.
ಇದೆಲ್ಲಾ ಆಗದೆ ಇರುವ ಸಮಸ್ಯೆಗಳನ್ನು ಇದುವರೆಗೆ ಮಹಿಳೆಯರಿಗೆ ಪರಿಹರಿಸಿಕೊಳ್ಳಲು ಸಾಧ್ಯವಾಗಿಲ್ಲ, ಈ ಕಾರಣದಿಂದಲೂ ಕೂಡ ಗೃಹಲಕ್ಷ್ಮಿಯ 2000 ರೂ. ಫಲಾನುಭವಿಗಳ ಖಾತೆಗೆ ಬಂದಿಲ್ಲ ಎನ್ನುವುದು ಸರ್ಕಾರದ ವಾದ.
ಗೃಹಜ್ಯೋತಿ ಯೋಜನೆ ಫ್ರೀ ಕರೆಂಟ್ ದೇವಾಲಯಗಳಿಗೂ ವಿಸ್ತರಣೆ! ದೇವರಿಗೂ ಉಚಿತ ವಿದ್ಯುತ್
ಉತ್ಸಾಹ ಕಳೆದುಕೊಂಡಿದ್ಯಾ ಸರ್ಕಾರ?
ಪ್ರಶ್ನೆ ಮೂಡುವುದು ಸಹಜ. ಯಾಕಂದ್ರೆ ಗೃಹಲಕ್ಷ್ಮಿ ಯೋಚನೆಯನ್ನು ಆರಂಭಿಸುವಾಗ ಇರುವಂತಹ ಉತ್ಸಾಹ ಅಥವಾ ಹಣ ಬಿಡುಗಡೆ ಮಾಡುವ ಬಗ್ಗೆ ಇದ್ದ ಕಾಳಜಿ ಸರ್ಕಾರಕ್ಕೆ ಬರ್ತಾ ಬರ್ತಾ ಕಡಿಮೆ ಆಗುತ್ತಿದೆ ಎಂದು ಅನಿಸುತ್ತದೆ. ಗೃಹಿಣಿಯರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ. ಎಲ್ಲ ದಾಖಲೆಗಳು ಸರಿಯಾಗಿವೆ. ಒಂದಲ್ಲ ಮೂರ್ನಾಲ್ಕು ಬಾರಿ ಚೆಕ್ ಮಾಡಿಸಿದ್ದೇವೆ ಎಲ್ಲವೂ ಸರಿಯಾಗಿದೆ ಆದ್ರೂ ನಮ್ಮ ಖಾತೆಗೆ ಹಣ ಬಂದಿಲ್ಲ ಅಂತ ಹತ್ತು ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇದಕ್ಕೆ ಸರ್ಕಾರ ಸ್ಪಷ್ಟವಾದ ಮಾಹಿತಿಯನ್ನು ನೀಡುತ್ತಿಲ್ಲ. ಯಾವಾಗ ಇಂಥವರ ಖಾತೆಗೆ ಹಣ ಬರುತ್ತದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ ಪ್ರಯೋಜನವನ್ನು ಸಾಕಷ್ಟು ಫಲಾನುಭವಿಗಳು ಪಡೆದುಕೊಳ್ಳದೆ ವಂಚಿತರಾಗಿದ್ದಾರೆ.
This is the reason why Gruha Lakshmi Yojana money is not coming even though the message is received