ಈಗಲೇ ಈ ಕೆಲಸ ಮಾಡಿ, ಇಲ್ಲದೆ ಹೋದರೆ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್! ದಿಢೀರ್ ಹೊಸ ನಿಯಮ ತಂದ ಸರ್ಕಾರ
Ration Card ekyc : ರೇಷನ್ ಕಾರ್ಡ್ ಈಗ ನಮ್ಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಡವರಿಗೆ ಬಹಳ ಮುಖ್ಯವಾಗಿ ಮತ್ತು ಅಗತ್ಯವಾಗಿ ಬೇಕಾಗಿರುವ ದಾಖಲೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ರಾಜ್ಯ ಸರ್ಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳ (Govt Schemes) ಸೌಲಭ್ಯ ಪಡೆಯಬೇಕು ಎಂದರೆ ಮತ್ತು ಕೇಂದ್ರ ಸಾಕಷ್ಟು ಯೋಜನಗೆಳ ಸೌಕರ್ಯ ಸಿಗಬೇಕು ಎಂದರೆ ರೇಷನ್ ಕಾರ್ಡ್ (Ration Card) ಕಡ್ಡಾಯವಾಗಿ ಇರಲೇಬೇಕು.
ರೇಷನ್ ಕಾರ್ಡ್ ನ ವಿಷಯಕ್ಕೆ ಸಂಬಂಧಿಸಿದ ಹಾಗೆ ಸರ್ಕಾರ ಆಗಾಗ ಹೊಸ ಅಪ್ಡೇಟ್ ಗಳನ್ನು ನೀಡುತ್ತಲೇ ಇರುತ್ತದೆ. ರೇಷನ್ ಕಾರ್ಡ್ ರೀತಿಯಲ್ಲೇ ಪ್ರಮುಖವಾಗಿ ಬೇಕಾಗುವ ಮತ್ತೊಂದು ದಾಖಲೆ ಆಧಾರ್ ಕಾರ್ಡ್ (Aadhaar Card) ಆಗಿದೆ.
ಇದು ನಮ್ಮ ದೇಶದ ಎಲ್ಲಾ ನಾಗರೀಕರ ವಿಶೇಷವಾದ ಗುರುತು ಎಂದರೆ ತಪ್ಪಾಗುವುದಿಲ್ಲ. ಹಾಗಾಗಿ ಆಧಾರ್ ಕಾರ್ಡ್ ಜೊತೆಗೆ ರೇಷನ್ ಕಾರ್ಡ್ ಹಾಗೂ ಇನ್ನಿತರ ಪ್ರಮುಖ ದಾಖಲೆಗಳನ್ನು ಲಿಂಕ್ ಮಾಡಿಸಬೇಕು ಎಂದು ಸರ್ಕಾರ ಸಾಕಷ್ಟು ಹೊಸ ಅಪ್ಡೇಟ್ ಗಳನ್ನು ಜಾರಿಗೆ ತರುತ್ತಲೇ ಇರುತ್ತದೆ.
ಇನ್ಮುಂದೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಹೊಸ ನಿಯಮ
ಆಧಾರ್ ಕಾರ್ಡ್ ಜೊತೆಗೆ ರೇಷನ್ ಕಾರ್ಡ್ ಲಿಂಕ್ ಮಾಡುವ ವಿಚಾರಕ್ಕೆ ಸೇರಿದ ಹಾಗೆ ಒಂದಷ್ಟು ಹೊಸ ಮಾಹಿತಿಗಳು ಈಗ ಜಾರಿಗೆ ಬಂದಿದೆ.
ನಮ್ಮ ರಾಜ್ಯದಲ್ಲಿ ಈಗ ಜಾರಿಗೆ ಬಂದಿರುವ ಅನ್ನಭಾಗ್ಯ ಯೋಜನೆಯ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಈ ಯೋಜನೆಯಲ್ಲಿ ರೇಶನ್ ಕಾರ್ಡ್ ಹೊಂದಿರುವ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರ ಕಾರ್ಡ್ ನಲ್ಲಿ ಇರುವ ಪ್ರತಿ ಸದದ್ಯರಿಗೆ 10 ಕೆಜಿ ಅಕ್ಕಿ ಕೊಡಲಾಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿತ್ತು.
ಆದರೆ ಪ್ರತಿ ವ್ಯಕ್ತಿಗೆ 10 ಹೊಂದಿಸಲು ಸಾಧ್ಯವಾಗದೆ, 5ಕೆಜಿ ಅಕ್ಕಿ ಕೊಟ್ಟು ಇನ್ನು 5 ಕೆಜಿಯ ಹಣವನ್ನು ಮನೆಯ ಮುಖ್ಯಸ್ಥರ ಖಾತೆಗೆ (Bank Account) ವರ್ಗಾವಣೆ ಮಾಡಲಾಗುತ್ತದೆ.
ಈ ವಿಚಾರವನ್ನು ಸರ್ಕಾರ ತಿಳಿಸುತ್ತಿದ್ದ ಹಾಗೆಯೇ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವವರ ಸಂಖ್ಯೆ, ಮತ್ತು ಹೊಸದಾಗಿ ರೇಷನ್ ಕಾರ್ಡ್ ಮಾಡಿಸುವವರ ಸಂಖ್ಯೆ ಜಾಸ್ತಿಯಾಗುತ್ತಿದೆ.
ಸಣ್ಣ ಬಿಸಿನೆಸ್ ಮಾಡೋಕೆ ಸರ್ಕಾರವೇ ಕೊಡುತ್ತಿದೆ ₹50 ಸಾವಿರಕ್ಕೂ ಹೆಚ್ಚು ಸಾಲ! ಇಂದೇ ಅರ್ಜಿ ಹಾಕಿ
ಇದರಲ್ಲಿ ಅರ್ಹತೆ ಇಲ್ಲದ ಕೆಲವು ವ್ಯಕ್ತಿಗಳು ಕೂಡ ರೇಶನ್ ಕಾರ್ಡ್ ಪಡೆಯುವುದಕ್ಕಾಗಿ ಸುಳ್ಳು ಮಾಹಿತಿ ನೀಡುತ್ತಿದ್ದು, ಇಂಥ ವಿಚಾರವನ್ನು ತಡೆಗಟ್ಟಲು ಈಗ ಸರ್ಕಾರ ಹೊಸ ಕ್ರಮ ತೆಗೆದುಕೊಂಡಿದ್ದು, ಆಧಾರ್ ಕಾರ್ಡ್ ಗೆ ರೇಷನ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ.
ಇದರ ಜೊತೆಗೆ ಸರ್ಕಾರದಿಂದ ರೇಶನ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಮತ್ತೊಂದು ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಅದೇನು ಎಂದರೆ, ರೇಷನ್ ಕಾರ್ಡ್ ಗೆ ekyc ಮಾಡಿಸುವುದನ್ನು ಈಗ ಸರ್ಕಾರ ಕಡ್ಡಾಯಗೊಳಿಸಿದ್ದು, ಒಂದು ವೇಳೆ ನೀವು ಇನ್ನು ekyc ಮಾಡಿಸಿಲ್ಲ ಎಂದರೆ ಇಂದೇ ಮಾಡಿಸಿ,
ಇಲ್ಲದೆ ಹೋದರೆ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಬಹುದು, ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ರದ್ದಾಗಬಹುದು. ರೇಶನ್ ಕಾರ್ಡ್ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ.
ರಾಜ್ಯ ಸರ್ಕಾರ ನೀಡಿರುವ ಆದೇಶ ಏನು ಎಂದರೆ, ನಿಮ್ಮ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡಿದ್ದರೆ ನಿಮಗೆ ಸರ್ಕಾರದಿಂದ ಸಿಗುವ ಅನ್ನಭಾಗ್ಯ ಯೋಜನೆಯ (Annabhagya Scheme) ಹಣ, ಉಚಿತ ಅಕ್ಕಿ ಮತ್ತು ಇನ್ನಿತರ ಯೋಜನೆಗಳ ಸೌಲಭ್ಯ ಕೂಡ ಸಿಗುತ್ತದೆ.
ಹಾಗೆಯೇ ಸರ್ಕಾರದ 5 ಯೋಜನೆಗಳ ಸೌಲಭ್ಯ ಪಡೆಯುವುದಕ್ಕೆ ekyc ಮಾಡಿಸುವುದು ಈಗ ಕಡ್ಡಾಯವಾಗಿದ್ದು, ಒಂದು ವೇಳೆ ನೀವು ಇನ್ನು ekyc ಮಾಡಿಸಿಲ್ಲ ಎಂದರೆ ಈಗಲೇ ekyc ಮಾಡಿಸಿ.
Government has instructed For ration card ekyc