ಬಿಪಿಎಲ್ ಕಾರ್ಡ್ ನಿಯಮ ಬದಲಿಸಿದ ಸರ್ಕಾರ, ಇಂತವರ ಕಾರ್ಡ್ ರದ್ದು! ಅಕ್ಕಿ ಬದಲಿಗೆ ನೀಡುತ್ತಿದ್ದ ಹಣ ಕೂಡ ಕ್ಯಾನ್ಸಲ್
ಸ್ವಂತ ಕಾರ್ ಇಟ್ಟುಕೊಂಡಿರುವವರಿಗೆ ಬಿಪಿಎಲ್ ರೇಶನ್ ಕಾರ್ಡ್ ಇರುವುದಿಲ್ಲ. ರೇಷನ್ ಕಾರ್ಡ್ ತಿದ್ದುಪಡಿ ಶುರುವಾಗಿದ್ದು, ಅಂಥವರ ರೇಶನ್ ಕಾರ್ಡ್ ರದ್ದಾಗುತ್ತದೆ
ಬಿಪಿಎಲ್ ಕಾರ್ಡ್ (BPL Ration Card) ಇರುವವರಿಗೆ ಸರ್ಕಾರದಿಂದ ಒಂದು ದೊಡ್ಡ ಶಾಕ್ ನೀಡಿತ್ತು, ಅದೇನು ಎಂದರೆ ಕಾರ್ (Own Car) ಹೊಂದಿರುವವರ ಬಿಪಿಎಲ್ ಕಾರ್ಡ್ ಅನ್ನು ಹಿಂಪಡೆಯಲಾಗುತ್ತದೆ ಎಂದು ಹೇಳಲಾಗಿತ್ತು. ಇದರಿಂದಾಗಿ ಕ್ಯಾಬ್ ಡ್ರೈವರ್ ಗಳು (Cab Drivers), ಬಾಡಿಗೆ ಟ್ಯಾಕ್ಸಿ (Rent Taxi) ಹೊಂದಿರುವವರಿಗೆ ಸರ್ಕಾರದ ಕಡೆಯಿಂದ ಒಂದು ಮಹತ್ವದ ಮಾಹಿತಿ ನೀಡಿದೆ. ಆ ಮಾಹಿತಿಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..
ಯೆಲ್ಲೋ ಬೋರ್ಡ್ ಹೊಂದಿರುವ ಕಾರ್ (Yellow Board Car) ಇರುವವರ ಬಿಪಿಎಲ್ ಕಾರ್ಡ್ ಗಳನ್ನು ವಾಪಸ್ ಪಡೆಯುವುದಿಲ್ಲ ಎಂದು ಮಾಹಿತಿ ಸಿಕ್ಕಿದೆ. ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದು, ಜೀವನ ನಡೆಸುವ ಸಲುವಾಗಿ ಬಾಡಿಗೆ ತ್ರಿಚಕ್ರ ವಾಹನ ಮತ್ತು ಯೆಲ್ಲೋ ಬೋರ್ಡ್ ಹೊಂದಿರುವ ಕಾರ್ ಇರುವವರ ರೇಶನ್ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಸಿದ್ಧತೆ! ನಿಮ್ಮ ಖಾತೆಗೆ ಜಮೆ ಆಗಿದಿಯೋ ಇಲ್ಲವೋ ಚೆಕ್ ಮಾಡಿಕೊಳ್ಳೋದು ಹೇಗೆ?
ಆದರೆ ವೈಯಕ್ತಿಕ ಉಪಯೋಗಕ್ಕೆ ಸ್ವಂತ ಕಾರ್ (Own Car) ಇಟ್ಟುಕೊಂಡಿರುವವರಿಗೆ ಬಿಪಿಎಲ್ ರೇಶನ್ ಕಾರ್ಡ್ ಇರುವುದಿಲ್ಲ. ರೇಷನ್ ಕಾರ್ಡ್ ತಿದ್ದುಪಡಿ ಶುರುವಾಗಿದ್ದು, ಅಂಥವರ ರೇಶನ್ ಕಾರ್ಡ್ ರದ್ದಾಗುತ್ತದೆ.. ಎಂದು ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ, ಅನ್ನಭಾಗ್ಯ ಯೋಜನೆಯ (Annabhagya Yojana) ಬಗ್ಗೆ ಕೂಡ ಹಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ, ಕೆ.ಹೆಚ್ ಮುನಿಯಪ್ಪ.. ಸರ್ಕಾರವು ಅನ್ನಭಾಗ್ಯ ಯೋಜನೆಯ ಮೂಲಕ ಬಿಪಿಎಲ್ ಕಾರ್ಡ್ ಹೊಂದಿರುವ ಸದಸ್ಯರ ಕುಟುಂಬದ ಪ್ರತಿಯೊಬ್ಬರಿಗೂ 10ಕೆಜಿ ಅಕ್ಕಿ ಕೊಡುವುದಾಗಿ ಸರ್ಕಾರ ಮಾಹಿತಿ ನೀಡಿತ್ತು, ಆದರೆ ಪ್ರತಿ ವ್ಯಕ್ತಿಗೆ 10ಕೆಜಿ ಅಕ್ಕಿ ಪೂರೈಸಲು ಸಾಧ್ಯವಾಗುವುದಿಲ್ಲ ಎಂದು, 5ಕೆಜಿ ಅಕ್ಕಿ ನೀಡಿ, ಇನ್ನು 5 ಕೆಜಿಯ ಮೊತ್ತವನ್ನು ರೇಷನ್ ಕಾರ್ಡ್ ಬಳಕೆದಾರರ ಖಾತೆಗೆ ಜಮೆ ಮಾಡಲಾಗುವುದು ಎಂದು ತಿಳಿಸಿತ್ತು.
ಗೃಹ ಲಕ್ಷ್ಮಿ ಯೋಜನೆಗೆ WhatsApp ಮೂಲಕವೇ ಸುಲಭವಾಗಿ ಅರ್ಜಿ ಸಲ್ಲಿಸಿ! ಇಲ್ಲಿದೆ ಸಂಪೂರ್ಣ ಪ್ರಕ್ರಿಯೆ
ಆದರೆ ಈಗ ಎಲ್ಲವೂ ಮತ್ತೆ ಶುರುವಾಗಿದೆ. ಜನರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದು ಅಥವಾ ಹೊಸ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಬಹುದು.
ಅರ್ಜಿ ಹಾಕಿದರೂ ಗೃಹಲಕ್ಷ್ಮಿ ಯೋಜನೆಯ ₹2000 ಹಣ ಸಿಗಲ್ಲ! ತಪ್ಪದೆ ಈ ಒಂದು ಕೆಲಸ ಮಾಡಲೇಬೇಕು
ಇನ್ನು ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ತಿಂಗಳು ಹಣ ಕೊಡುವುದು ತಾತ್ಕಾಲಿಕ ಅಷ್ಟೇ ಎಂದು ಮೊದಲೇ ತಿಳಿಸಿತ್ತು, ಅದೇ ರೀತಿ ಈಗ ಸೆಪ್ಟೆಂಬರ್ ತಿಂಗಳಿನಿಂದ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ 10ಕೆಜಿ ಅಕ್ಕಿ ನೀಡುವ ನಿರ್ಧಾರ ಮಾಡಿದೆ.
ಇದಕ್ಕಾಗಿ ಬೇರೆ ರಾಜ್ಯಗಳ ಜೊತೆಗೆ ಮಾತನಾಡಿ ಅಕ್ಕಿಯನ್ನು ಅರೇಂಜ್ ಮಾಡಲಾಗುತ್ತಿದೆ. ಸೆಪ್ಟೆಂಬರ್ ಇಂದಲೇ ಉಚಿತ ಅಕ್ಕಿ ಸಿಗುತ್ತದೆ ಎಂದು ಸರ್ಕಾರ ತಿಳಿಸಿದೆ..
Govt changed BPL Ration card rules, card can be cancelled
Follow us On
Google News |