ಗೃಹ ಲಕ್ಷ್ಮಿ ಯೋಜನೆಯು (Gruha Lakshmi Scheme) ಕರ್ನಾಟಕದ ಸಾವಿರಾರು ಬಡ ಕುಟುಂಬಗಳಿಗೆ ಆರ್ಥಿಕವಾಗಿ ಸಹಕಾರಿಯಾಗಲಿದೆ. ಮಹಿಳೆಯರನ್ನು ಪ್ರೋತ್ಸಾಹಿಸುವ ಮೂಲಕ ಮಹಿಳೆಯರಿಗೆ ಹೆಚ್ಚಿನ ಆರ್ಥಿಕ ಶಕ್ತಿಯನ್ನು ನೀಡಲಿದೆ. ಈ ಯೋಜನೆಯು ಕುಟುಂಬಗಳಿಗೆ ಭದ್ರತೆ ಮತ್ತು ಸ್ಥಿರತೆಯ ಭಾವನೆಯನ್ನು ನೀಡಲಿದೆ.
ಕರ್ನಾಟಕ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯು ಮಹಿಳಾ ಸಬಲೀಕರಣಕ್ಕಾಗಿ ಮತ್ತು ಅವರ ಜೀವನ ಮಟ್ಟವನ್ನು ಸುಧಾರಿಸಲು ಅಗತ್ಯವಾದ ಬೆಂಬಲವನ್ನು ನೀಡುವ ಗುರಿಯನ್ನು ಹೊಂದಿದೆ. ಕರ್ನಾಟಕ ಗೃಹ ಲಕ್ಷ್ಮಿ ಯೋಜನೆಯಡಿ (Gruha Lakshmi Yojana), ಪ್ರತಿ ಅರ್ಹ ಮಹಿಳೆಗೆ ಮಾಸಿಕ ರೂ. 2,000 ರೂ ಅವರ ಖಾತೆಗೆ ಜಮಾ ಆಗಲಿದೆ. ಇನ್ನು ಇದೆ ತಿಂಗಳು ಆಗಸ್ಟ್ 16, 2023 ರಂದು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲು ಸಿದ್ಧತೆ ನಡೆಸಲಾಗಿದೆ.
ಗೃಹ ಲಕ್ಷ್ಮಿ ಯೋಜನೆಗೆ WhatsApp ಮೂಲಕವೇ ಸುಲಭವಾಗಿ ಅರ್ಜಿ ಸಲ್ಲಿಸಿ! ಇಲ್ಲಿದೆ ಸಂಪೂರ್ಣ ಪ್ರಕ್ರಿಯೆ
ಕರ್ನಾಟಕ ಗೃಹ ಲಕ್ಷ್ಮಿ ಯೋಜನೆ 2023 ಅನ್ನು ಕರ್ನಾಟಕ ಸರ್ಕಾರವು ಇತ್ತೀಚೆಗೆ ಪ್ರಾರಂಭಿಸಿದ್ದು, ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಸಹಾಯ ಮಾಡಲು ಮಹಿಳೆಯರು ಪ್ರತಿ ತಿಂಗಳು ಸರ್ಕಾರದಿಂದ ತಮ್ಮ ಬ್ಯಾಂಕ್ ಖಾತೆಯಲ್ಲಿ 2000 ಮೊತ್ತವನ್ನು ಪಡೆಯುತ್ತಾರೆ. ಪ್ರತಿ ತಿಂಗಳು ಫಲಾನುಭವಿಯ ಬ್ಯಾಂಕ್ ಖಾತೆಗೆ 2000 ರೂಪಾಯಿಗಳನ್ನು ವರ್ಗಾಯಿಸಲಾಗುತ್ತದೆ.
ಈ ಯೋಜನೆಗೆ ಇನ್ನೂ ಅರ್ಜಿ ಸಲ್ಲಿಸದವರು ನಿಮ್ಮ ಹತ್ತಿರದ ಸೇವಾ ಕೇಂದ್ರದಿಂದ ಆಫ್‌ಲೈನ್ ಮೋಡ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇನ್ನು ವರದಿಯ ಪ್ರಕಾರ ಕರ್ನಾಟಕ ಸರ್ಕಾರವು ಕರ್ನಾಟಕ ಗೃಹ ಲಕ್ಷ್ಮಿ ಯೋಜನೆ 2023 ರ ಅಡಿಯಲ್ಲಿ 24,166 ಕೋಟಿಗಳನ್ನು ನಿಗದಿಪಡಿಸಿದೆ.
ಅರ್ಜಿ ಹಾಕಿದರೂ ಗೃಹಲಕ್ಷ್ಮಿ ಯೋಜನೆಯ ₹2000 ಹಣ ಸಿಗಲ್ಲ! ತಪ್ಪದೆ ಈ ಒಂದು ಕೆಲಸ ಮಾಡಲೇಬೇಕು
ಗೃಹ ಲಕ್ಷ್ಮಿ ಯೋಜನೆ 2023 ಗೆ ಅರ್ಹತಾ ಮಾನದಂಡಗಳು
ಮಹಿಳೆಯರು ಸರ್ಕಾರಿ ನೌಕರರಾಗಬಾರದು
ಎಪಿಎಲ್, ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಪ್ರಕಾರ ಮಹಿಳೆಯರು ಮನೆಯ ಮುಖ್ಯಸ್ಥರಾಗಿರಬೇಕು
ಕುಟುಂಬದಿಂದ ಒಬ್ಬ ಮಹಿಳೆ ಮಾತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ
ಮಹಿಳೆಯ ಪತಿ ತೆರಿಗೆದಾರನಾಗಿರಬಾರದು
ಗೃಹ ಲಕ್ಷ್ಮಿ ಯೋಜನೆ ಹಣ ಬಿಡುಗಡೆ ಯಾವಾಗ
ಇದೆ ತಿಂಗಳು ಆಗಸ್ಟ್ 16, 2023 ರಂದು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲು (Money Transfer) ಸಿದ್ಧತೆ ನಡೆಸಲಾಗಿದೆ. ಯೋಜನೆಗಾಗಿ ಅರ್ಜಿ ಸಲ್ಲಿಸಿದವರು ಮಾತ್ರ ಯೋಜನೆಯ ಫಲ ಪಡೆಯಬಹುದು. ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರು ನೋಂದಾಯಿಸಲು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಬಹುದು.
ಅನ್ನಭಾಗ್ಯ ಯೋಜನೆ ಬಗ್ಗೆ ಹೊಸ ಅಪ್ಡೇಟ್, ಅಕ್ಕಿ ಬದಲು ಕೊಡುತ್ತಿದ್ದ ₹170 ರೂಪಾಯಿ ಕ್ಯಾನ್ಸಲ್!
ಹಣ ಜಮಾ ಆಗಿರುವ ಬಗ್ಗೆ ತಿಳಿಯುವುದು ಹೇಗೆ
ಗೃಹ ಲಕ್ಷ್ಮಿ ಯೋಜನೆಯ ಹಣ ಖಾತೆಗೆ (Bank Account) ಜಮಾ ಆದ ನಂತರ ಬ್ಯಾಂಕ್ ಖಾತೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಸಂದೇಶವನ್ನು ಪಡೆಯುತ್ತೀರಿ. ಅಕಸ್ಮಾತ್ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರುವ ಸಂಖ್ಯೆ ಇಲ್ಲವಾದಲ್ಲಿ ಮೊದಲು ನಿಮ್ಮ ಬ್ಯಾಂಕ್ ಶಾಖೆಗೆ ತೆರಳಿ ಮೊಬೈಲ್ ನಂಬರ್ ಲಿಂಕ್ ಮಾಡಿಸಿಕೊಳ್ಳಿ.
ಮುಂಬರುವ ಯೋಜನೆಯ ಹಣದ ಮಾಹಿತಿ ಪಡೆಯಲು ಮೊಬೈಲ್ ಸಂಖ್ಯೆ (Mobile Number) ಬಹಳಷ್ಟು ಉಪಯುಕ್ತ. ಜೊತೆಗೆ ಮೊಬೈಲ್ ಸಂಖ್ಯೆ ಇಲ್ಲವೇ ಇಲ್ಲ ಎನ್ನುವವರು ಸರ್ಕಾರದ ಅಧಿಕೃತ ವೆಬ್ ಸೈಟ್ https://sevasindhugs.karnataka.gov.in/ ಗೆ ಭೇಟಿ ನೀಡುವ ಮೂಲಕವೂ ಸಹ ಚೆಕ್ ಮಾಡಿಕೊಳ್ಳಬಹುದು.
ಒಂದು ವೇಳೆ ಮೊಬೈಲ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆದರು ಸಂದೇಶ ಬರದೇ ಹೋದರೆ, ನಿಮ್ಮ ಬ್ಯಾಂಕ್ ನೀಡುವ ಮಿಸ್ಡ್ ಕಾಲ್ ಸೇವೆ ಬಳಸಿ ಖಾತೆಯನ್ನು ಪರಿಶೀಲಿಸಿಕೊಳ್ಳಬಹುದು.
ಉದಾಹರಣೆಗೆ ನಿಮ್ಮ ಖಾತೆ ಕೆನರಾ ಬ್ಯಾಂಕ್ (Canara Bank) ನಲ್ಲಿದ್ದರೆ ನಿಮ್ಮ ಸಂಖ್ಯೆಯಿಂದ 9015483483 ನಂಬರ್ ಗೆ ಮಿಸ್ಡ್ ಕಾಲ್ (Missed Call Service) ನೀಡಿದರೆ ನಿಮ್ಮ ಖಾತೆಯಲ್ಲಿನ ಹಣದ ಮಾಹಿತಿಯನ್ನು ನೀವು ಪಡೆಯುತ್ತೀರಿ.
How to check whether Gruha Lakshmi Yojana Money credited or not
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.