ಅನ್ನಭಾಗ್ಯ ಯೋಜನೆ ಬಗ್ಗೆ ಹೊಸ ಅಪ್ಡೇಟ್, ಅಕ್ಕಿ ಬದಲು ಕೊಡುತ್ತಿದ್ದ ₹170 ರೂಪಾಯಿ ಕ್ಯಾನ್ಸಲ್!

ಅನ್ನಭಾಗ್ಯ ಯೋಜನೆಯ ಫಲ ಪಡೆಯುವ ಎಲ್ಲರಿಗು ಸೆಪ್ಟೆಂಬರ್ 5ರಿಂದ ಅನ್ನಭಾಗ್ಯ ಯೋಜನೆಯ ಅನುಕೂಲ ಮಾಡಿಕೊಡಲು ಸರ್ಕಾರ ನಿರ್ಧಾರ ಮಾಡಿದೆ. ಅನ್ನಭಾಗ್ಯ ಯೋಜನೆಯಲ್ಲಿ 5ಕೆಜಿ ಅಕ್ಕಿ ಜೊತೆಗೆ ಇನ್ನು 5 ಕೆಜಿ ಅಕ್ಕಿಯ ಹಣ ಕೊಡುವುದಾಗಿ ತಿಳಿಸಿತ್ತು

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಇರುವ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ತಿಳಿಸಿ, ನಂತರ 5 ಕೆಜಿ ಅಕ್ಕಿ ಮತ್ತು ಇನ್ನು 5 ಕೆಜಿ ಅಕ್ಕಿ ಬದಲಾಗಿ ಹಣ ಕೊಡುವುದಾಗಿ ತಿಳಿಸಿತ್ತು.

ಆದರೆ ಈಗ ನಿಯಮ ಬದಲಾವಣೆ ಆಗಿದ್ದು, 5ಕೆಜಿ ಅಕ್ಕಿ ಬದಲಾಗಿ ₹170 ರೂಪಾಯಿ ಕೊಡುವುದಿಲ್ಲ ಎನ್ನಲಾಗಿದೆ. ಪ್ರತಿ ಸದಸ್ಯರಿಗೆ 10ಕೆಜಿ ಅಕ್ಕಿಯನ್ನೇ ಕೊಡಲಿದ್ದು, ಈ ದಿನದಿಂದ ಅಕ್ಕಿ ಸಿಗುತ್ತದೆ, ಜೊತೆಗೆ ಇದಕ್ಕಾಗಿ ನೀವು ನಿಮ್ಮ ರೇಷನ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕು. ಈ ಬಗ್ಗೆ ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ.

ಅನ್ನಭಾಗ್ಯ ಯೋಜನೆಯ ಫಲ ಪಡೆಯುವ ಎಲ್ಲರಿಗು ಸೆಪ್ಟೆಂಬರ್ 5ರಿಂದ ಅನ್ನಭಾಗ್ಯ ಯೋಜನೆಯ ಅನುಕೂಲ ಮಾಡಿಕೊಡಲು ಸರ್ಕಾರ ನಿರ್ಧಾರ ಮಾಡಿದೆ. ಅನ್ನಭಾಗ್ಯ ಯೋಜನೆಯಲ್ಲಿ 5ಕೆಜಿ ಅಕ್ಕಿ ಜೊತೆಗೆ ಇನ್ನು 5 ಕೆಜಿ ಅಕ್ಕಿಯ ಹಣ ಕೊಡುವುದಾಗಿ ತಿಳಿಸಿತ್ತು, ಆದರೆ ಹಣ ಕೊಡುವ ಪ್ಲಾನ್ ಹೆಚ್ಚು ದಿನಗಳ ಕಾಲ ಇರುವುದಿಲ್ಲ, ಹಾಗಾಗಿ ಸರ್ಕಾರ ಈಗ 10ಕೆಜಿ ಅಕ್ಕಿಯನ್ನೇ ನೀಡುವ ಪ್ಲಾನ್ ಮಾಡುತ್ತಿದೆ. ಇದರ ಬಗ್ಗೆ ಆಹಾರ ಸಚಿವೆ ಕೆ.ಹೆಚ್ ಮುನಿಯಪ್ಪ ಅವರು ಮಾತನಾಡಿದ್ದಾರೆ..

ಅನ್ನಭಾಗ್ಯ ಯೋಜನೆ ಬಗ್ಗೆ ಹೊಸ ಅಪ್ಡೇಟ್, ಅಕ್ಕಿ ಬದಲು ಕೊಡುತ್ತಿದ್ದ ₹170 ರೂಪಾಯಿ ಕ್ಯಾನ್ಸಲ್! - Kannada News

ಈ ದಾಖಲೆ ಇಲ್ಲ ಅಂದ್ರೇ ಹೊಸ ರೇಷನ್ ಕಾರ್ಡ್ ಮಾಡಿಕೊಡುವುದಿಲ್ಲ, ಸರ್ಕಾರದಿಂದ ಹೊಸ ರೂಲ್ಸ್!

ಆಂದ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಜೊತೆಗೆ ಮಾತುಕತೆ ನಡೆಸಿದ್ದು, ಅವರು ಅಕ್ಕಿ ಕೊಡಲು ಒಪ್ಪಿಗೆ ನೀಡಿದ್ದಾರಂತೆ, ಕೇಂದ್ರ ಆಹಾರ ನಿಗಮದಿಂದ ಖರೀದಿ ಮಾಡುವ ಬೆಲೆ ಒಂದು ಕೆಜಿಗೆ 34 ರೂಪಾಯಿಯ ಹಾಗೆ ಖರೀದಿ ಮಾಡಲು ಸರ್ಕಾರ ಪ್ಲಾನ್ ನಡೆಸಿದೆ ಎಂದು ಕೆ.ಹೆಚ್ ಮುನಿಯಪ್ಪ ಅವರು ತಿಳಿಸಿದ್ದಾರೆ.

Because of this your BPL ration card may get cancelledರಾಜ್ಯ ಸರ್ಕಾರ ಜುಲೈ 10ರಿಂದ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿ, ಮತ್ತೆ ಶುರು ಮಾಡಿದೆ. ಈ ಯೋಜನೆಯಲ್ಲಿ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ಕೊಡುವ ಉದ್ದೇಶ ಆಗಿತ್ತು, ಇದರಲ್ಲಿ 5 ಕೆಜಿ ಅಕ್ಕಿಯನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಕಾಯ್ದೆಯ ಅಡಿವಲ್ಲಿ ಕೇಂದ್ರ ಸರ್ಕಾರ ನೀಡುತ್ತದೆ.

ಆದರೆ ರಾಜ್ಯ ಸರ್ಕಾರಗಳು ಮುಕ್ತ ಮಾರುಕಟ್ಟೆ ಯೋಜನೆಯಲ್ಲಿ ಅಕ್ಕಿ ಖರೀದಿ ಮಾಡುವುದಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ಇಲ್ಲದೆ ಇರುವುರಿಂದ ರಾಜ್ಯ ಸರ್ಕಾರವು 5ಕೆಜಿ ಹಾಗೂ ಇನ್ನು 5ಕೆಜಿ ಅಕ್ಕಿಗೆ ಹಣ ನೀಡುವುದಾಗಿ ತಿಳಿಸಿದೆ.

ರೇಷನ್ ಕಾರ್ಡ್ ಹೊಂದಿರುವವರು ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮಾಡಿ! ಕೇಂದ್ರದಿಂದಲೇ ಬಂತು ಹೊಸ ನಿಯಮ

ಈ 20 ದಿನಗಳಲ್ಲಿ ರಾಜ್ಯ ಸರ್ಕಾರವು 1 ಕೋಟಿ ಜನರಿಗೆ 566 ಕೋಟಿ ಜಮೆ ಮಾಡಿದೆ. ಈ ಯೋಜನೆಯಲ್ಲಿ 1.28 ಕೋಟಿ PHH ಕಾರ್ಡ್ ಗಳು ಕೂಡ ಇದೆ.. ಇದುವರೆಗೂ ಅಕ್ಕಿ ಪಡೆಯದ 28 ಲಕ್ಷ ಕುಟುಂಬಗಳು, ಅಂತ್ಯೋದಯ ಕಾರ್ಡ್ ನಕಲಿ 3ಕ್ಕಿಂತ ಕಡಿಮೆ ಸದಸ್ಯರು ಇರುವವರು, 3.4 ಲಕ್ಷ ಬ್ಯಾಂಕ್ ಅಕೌಂಟ್ ಇನ್ ಆಕ್ಟಿವ್ ಆಗಿರುವವರು ಹಾಗೂ ಆಧಾರ್ ಕಾರ್ಡ್ ಜೊತೆಗೆ ಬ್ಯಾಂಕ್ ಅಕೌಂಟ್ ಲಿಂಕ್ ಮಾಡದೆ ಇರುವವರು 19.27 ಲಕ್ಷ ಕಾರ್ಡ್ ಗಳು.

ಬ್ಯಾಂಕ್ ಅಕೌಂಟ್ ಅನ್ನು ರೇಷನ್ ಕಾರ್ಡ್ ಗೆ ಲಿಂಕ್ ಮಾಡಿಸದೆ ಇರುವವರು ಸಾಕಷ್ಟು ಜನರಿದ್ದಾರೆ. ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ

Karnataka Annabhagya Yojana New Updates

Follow us On

FaceBook Google News

Karnataka Annabhagya Yojana New Updates