ಈ ದಾಖಲೆ ಇಲ್ಲ ಅಂದ್ರೇ ಹೊಸ ರೇಷನ್ ಕಾರ್ಡ್ ಮಾಡಿಕೊಡುವುದಿಲ್ಲ, ಸರ್ಕಾರದಿಂದ ಹೊಸ ರೂಲ್ಸ್!

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನ ಭಾಗ್ಯ ಯೋಜನೆ ಹಾಗೂ ಬೇರೆ ಎಲ್ಲಾ ಯೋಜನೆಗಳ ಅನುಕೂಲ ಪಡೆಯಲು, ಮುಖ್ಯವಾಗಿ ರೇಷನ್ ಕಾರ್ಡ್ ಬೇಕೇ ಬೇಕು. ಈ ವರ್ಷ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಮತ್ತು ಜೋಳವನ್ನು ಕೂಡ ತರಲಾಗಿದೆ.

ರಾಜ್ಯದಲ್ಲಿ ಪಡಿತರ ಚೀಟಿಗಳನ್ನು ಪರಿಷ್ಕರಣೆ ಮಾಡುವ ಮತ್ತು ಹೊಸದಾಗಿ ಪಡಿತರ ಚೀಟಿಗೆ (Apply Ration Card) ಅಪ್ಲೈ ಮಾಡುವ ಪ್ರಕ್ರಿಯೆ ಶುರುವಾಗಿದೆ. ವಿಧಾನಸಭಾ ಚುನಾವಣೆ ಕಾರಣಕ್ಕೆ ಈ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಆದರೆ ಇನ್ನುಮುಂದೆ ರೇಷನ್ ಕಾರ್ಡ್ ಪರಿಷ್ಕರಣೆ ಮತ್ತು ಹೊಸದಾಗಿ ರೇಷನ್ ಕಾರ್ಡ್ ಮಾಡಿಸುವ ಪ್ರಕ್ರಿಯೆ ಶುರುವಾಗಿದೆ. ಗ್ರಾಹಕರು ಈ ಅನುಕೂಲವನ್ನು ಉಪಯೋಗಿಸಿಕೊಳ್ಳಬಹುದು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನ ಭಾಗ್ಯ ಯೋಜನೆ (Annabhagya Yojana) ಹಾಗೂ ಬೇರೆ ಎಲ್ಲಾ ಯೋಜನೆಗಳ (Govt Schemes) ಅನುಕೂಲ ಪಡೆಯಲು, ಮುಖ್ಯವಾಗಿ ರೇಷನ್ ಕಾರ್ಡ್ ಬೇಕೇ ಬೇಕು. ಈ ವರ್ಷ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಮತ್ತು ಜೋಳವನ್ನು ಕೂಡ ತರಲಾಗಿದೆ.

ಇನ್ನು ರೇಷನ್ ಕಾರ್ಡ್ ಗೆ ಆನ್ಲೈನ್ ಅರ್ಜಿ ಸಲ್ಲಿಸಲು ಬೆಂಗಳೂರು ಒನ್, ಕರ್ನಾಟಕ ಒನ್, ಜನಸ್ನೇಹಿ ಕೇಂದ್ರ, ಗ್ರಾಮ ಪಂಚಾಯತ್, ಪಿಓಎಸ್ ಆಫೀಸ್ ಈ ಕಡೆಗಳಲ್ಲಿ ರೇಷನ್ ಕಾರ್ಡ್ (BPL Ration Card) ಪಡೆಯಬೇಕದವರು ತಮ್ಮ ಮನೆಯವರ ಜೊತೆಗೆ ಹೋಗಿ, ಬಯೋಮೆಟ್ರಿಕ್ ಮಾಡಿಸಬೇಕು.. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬಯೋಮೆಟ್ರಿಕ್ ಅಗತ್ಯವಿಲ್ಲ., ಆದರೆ ಇವರ ಹತ್ತಿರ ಆಧಾರ್ ಕಾರ್ಡ್ ಇರಲೇಬೇಕು.

ಈ ದಾಖಲೆ ಇಲ್ಲ ಅಂದ್ರೇ ಹೊಸ ರೇಷನ್ ಕಾರ್ಡ್ ಮಾಡಿಕೊಡುವುದಿಲ್ಲ, ಸರ್ಕಾರದಿಂದ ಹೊಸ ರೂಲ್ಸ್! - Kannada News

ವರ್ಷಗಳಿಂದ ಕೋರ್ಟ್ ನಲ್ಲಿ ಹಳೆಯ ಕೇಸ್ ಬಾಕಿ ಇದ್ದವರಿಗೆ ಗುಡ್ ನ್ಯೂಸ್! ಕೋರ್ಟ್ ಹೊಸ ನಿರ್ಧಾರ

PHH ಕಾರ್ಡ್ ಪಡೆಯಲು ಬಯಸುವವರು, ಆಧಾರ್ ಕಾರ್ಡ್ ಮತ್ತು POH ನ ಇನ್ಕಮ್ ಸರ್ಟಿಫಿಕೇಟ್ ಹೊಂದಿರಬೇಕು. NPHH ಕಾರ್ಡ್ ಗೆ ಆಧಾರ್ ಕಾರ್ಡ್ ಬಿಟ್ಟು ಬೇರೆ ಯಾವುದೇ ದಾಖಲೆಯ ಅವಶ್ಯಕತೆ ಇಲ್ಲ.

ಇಲ್ಲಿ ಬೇಕಾಗುವ ನಿಯಮ ಹೆಸರು, ವಯಸ್ಸು, ವಿಳಾಸ, ಲಿಂಗ, ಮೊಬೈಲ್ ನಂಬರ್ ಬೇಕು. ಅರ್ಜಿ ಹಾಕುವವರು ತಮ್ಮ ಮನೆಯವರು ಮತ್ತು ಅವರ ರೇಷನ್ ಕಾರ್ಡ್ ಜೊತೆಗೆ ಹೋಗಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಹಾಕುವವರ ಮನೆಯಲ್ಲಿ ಒಬ್ಬರಾದರು ಕೂಡ ಈಗಿರುವ ವಿಳಾದಲ್ಲಿ ವಾಸ ಮಾಡುತ್ತಿರಬೇಕು. ಆಧಾರ್ ಕಾರ್ಡ್ ನಲ್ಲಿ (Aadhaar Card) ಅಡ್ರೆಸ್ ಸರಿಯಾಗಿರಬೇಕು. ಒಬ್ಬರಾದರು ಕೂಡ ತಮ್ಮ ಅಡ್ರೆಸ್ ಅನ್ನು ಈಗಿರುವ ಜಾಗಕ್ಕೆ ಅಪ್ಡೇಟ್ ಮಾಡಿಸಿರಬೇಕು.

ಈ ಕಾರಣಕ್ಕೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಬಹುದು, ಸರ್ಕಾರದ ಹೊಸ ರೂಲ್ಸ್!

BPL Ration Cardಇದು ಆಗಿಲ್ಲ ಎಂದರೆ, ಮನೆಯವರಲ್ಲಿ ಒಬ್ಬರಾದರು ಕೂಡ ಮೊಬೈಲ್ ನಂಬರ್ ಲಿಂಕ್ ಮಾಡಿರಬೇಕು. ಅರ್ಜಿ ಹಾಕುವವರು ನಮ್ಮ ಊರಿನ ವಾರ್ಡ್ ನಂಬರ್ ಆಯ್ಕೆಯನ್ನು ಹುಷಾರಾಗಿ ಮಾಡಬೇಕು. ಹಳ್ಳಿಯವರು ಸರಿಯಾದ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಬೇಕು. PHH ಕಾರ್ಡ್ ನವರು ತಮ್ಮೂರಿನಲ್ಲಿ ಸರಿಯಾದ ನ್ಯಾಯಬೆಲೆ ಅಂಗಡಿ ಆಯ್ಕೆ ಮಾಡಿಕೊಳ್ಳಬಹುದು.

ನಿಮ್ಮ ವಿಳಾಸದ ಅನುಸಾರ, ಅಡ್ರೆಸ್ ನಲ್ಲಿರುವ ಪಿನ್ ಕೋಡ್ ಅನುಸಾರ, ನ್ಯಾಯಬೆಲೆ ಅಂಗಡಿಯನ್ನು ಆಟೊಮ್ಯಾಟಿಕ್ ಆಗಿ ಆಯ್ಕೆ ಮಾಡಲಾಗುತ್ತದೆ.. ಹಾಗೆಯೇ 2013ರಲ್ಲಿ ಜಾರಿಗೆ ಬಂದಿರುವ ಕಾಯ್ದೆಯ ಅನುಸಾರ, ಮನೆಯ ಹಿರಿಯ ಮಹಿಳೆಯರನ್ನು ಮನೆಯ ಮುಖ್ಯಸ್ಥೆಯನ್ನಾಗಿ ಆಯ್ಕೆ ಮಾಡಬೇಕು.

ಗೃಹಜ್ಯೋತಿ ಯೋಜನೆ; ಆಗಸ್ಟ್ ತಿಂಗಳ ಕರೆಂಟ್ ಬಿಲ್ ಕುರಿತು ಹೊಸ ಮಾರ್ಗಸೂಚಿ ಹೊರಡಿಸಿದ ಸರ್ಕಾರ

ಈ ಅರ್ಜಿಯನ್ನು ಆಟೊಮ್ಯಾಟಿಕ್ ಆಗಿ, ಗ್ರಾಮ ಪಂಚಾಯಿತಿಗೆ ಕಳಿಸಲಾಗುತ್ತದೆ, ಅಲ್ಲಿನ ಅಧಿಕಾರಿಗಳು ಅರ್ಜಿ ಹಾಕಿರುವವರ ಮನೆಗೆ ಭೇಟಿ ನೀಡಿ, ಅರ್ಜಿಯನ್ನು ಪರಿಶೀಲಿಸುತ್ತಾರೆ.

ಅಧಿಕಾರಿಗಳು ಪರಿಶೀಲನೆಗೆ ಬರುವ ವಿಚಾರ ಮತ್ತು ಇನ್ನಿತರ ವಿಚಾರಗಳನ್ನು ಅರ್ಜಿದಾರರಿಗೆ ಮುಂಚಿತವಾಗಿಯೇ SMS ಮೂಲಕ ತಿಳಿಸಲಾಗುತ್ತದೆ. ಅವರ ಅರ್ಜಿ ರಿಜೆಕ್ಟ್ ಆದರೂ ಅದನ್ನು ತಿಳಿಸಲಾಗುತ್ತದೆ.

ಇನ್ನು ಸ್ಪೀಡ್ ಪೋಸ್ಟ್ ಮೂಲಕ ರೇಷನ್ ಕಾರ್ಡ್ ಅರ್ಜಿದಾರರನ್ನು ತಲುಪುತ್ತದೆ. ಪೋಸ್ಟ್ ಮ್ಯಾನ್ ಗೆ 70 ರೂಪಾಯಿ ಪಾವತಿಸಬೇಕಾಗುತ್ತದೆ. ಹೊಸದಾಗಿ ರೇಷನ್ ಕಾರ್ಡ್ ಅರ್ಜಿ ಹಾಕುವವರಿಗೆ 40 ದಿನಗಳಲ್ಲಿ ಕೆಲಸ ಮುಗಿಯುತ್ತದೆ.

No new ration card will be issued without this document

Follow us On

FaceBook Google News

No new ration card will be issued without this document