ಈ ಕಾರಣಕ್ಕೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಬಹುದು, ಸರ್ಕಾರದ ಹೊಸ ರೂಲ್ಸ್!

ಬಿಪಿಎಲ್ ರೇಷನ್ ಕಾರ್ಡ್ ಇದೆ ಎಂದು ನೀವು ಆರಾಮಾಗಿ ಇರೋದಕ್ಕೆ ಸಾಧ್ಯವಿಲ್ಲ. ನಮ್ಮ ಬಳಿ ಬಿಪಿಎಲ್ ಕಾರ್ಡ್ ಇದೆ, ಗೃಹಜ್ಯೋತಿ (Gruha Jyothi Scheme), ಗೃಹಲಕ್ಷ್ಮಿ (Gruha Lakshmi Scheme), ಅನ್ನಭಾಗ್ಯ ಯೋಜನೆ (Anna Bhagya Yojana) ಸುಲಭವಾಗಿ ಸಿಗುತ್ತೆ ಅಂದು ಕೊಳ್ಳೋರು ಮುಂದೆ ಫಲ ಪಡೆಯದೇ ಇರಬಹುದು. ಇದಕ್ಕೆ ಕಾರಣ ನಿಮ್ಮ ಮನೆಯಲ್ಲಿ ಈ ವಸ್ತುಗಳು ಇದ್ದರೆ, ನಿಮ್ಮ ಬಿಪಿಎಲ್ ಕಾರ್ಡ್ (BPL Ration Card) ಕ್ಯಾನ್ಸಲ್ ಆಗಬಹುದು. ಈ ಬಗ್ಗೆ ಆಹಾರ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಮಾಹಿತಿ ನೀಡಿದ್ದಾರೆ.

ನಿಮ್ಮ ಮನೆಯಲ್ಲಿ ಯಾವೆಲ್ಲಾ ವಸ್ತುಗಳು ಇದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ (Ration Card Cancel) ಎಂದು ತಿಳಿಸುತ್ತೇವೆ ನೋಡಿ..

ಈ ವಿಚಾರದ ಬಗ್ಗೆ ಆಹಾರ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಒಂದು ಸುಳಿವು ನೀಡಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವ ಯಾರ ಮನೆಯಲ್ಲಿ ಸ್ವಂತ ಕಾರ್ ಇರುತ್ತದೆಯೋ, ಅವರ ಕಾರ್ಡ್ ರದ್ದಾಗುತ್ತದೆ ಎಂದಿದ್ದಾರೆ.

ಗೃಹಜ್ಯೋತಿ ಯೋಜನೆ; ಆಗಸ್ಟ್ ತಿಂಗಳ ಕರೆಂಟ್ ಬಿಲ್ ಕುರಿತು ಹೊಸ ಮಾರ್ಗಸೂಚಿ ಹೊರಡಿಸಿದ ಸರ್ಕಾರ

ಆ ಕುಟುಂಬದಲ್ಲಿ ಸ್ವಂತ ಕಾರ್ ಇದೆ ಎಂದರೆ, ಅವರಿಗೆ ಅಂಥ ಸಮಸ್ಯೆ ಏನು ಇರುವುದಿಲ್ಲ, ಅವರೇ ನಿಭಾಯಿಸಿಕೊಳ್ಳುತ್ತಾರೆ.. ಎನ್ನುತ್ತಾರೆ ಕೆ.ಹೆಚ್. ಮುನಿಯಪ್ಪ. ಸರ್ಕಾರದ ಮೇಲೆ ಈಗ ಹೊರೆ ಜಾಸ್ತಿಯೇ ಇದೆ, ಜನರ ಮೇಲೆ ಹೆಚ್ಚು ಹೆಚ್ಚು ಕಂಡೀಷನ್ ಗಳನ್ನು ಹಾಕಲಾಗುತ್ತಿದೆ. ಆದರೆ ಬಿಪಿಎಲ್ ಕಾರ್ಡ್ ದಾರರಿಗೆ ಈ ಕಂಡೀಷನ್ ಗಳನ್ನು ಹಾಕಿರುವುದು ನಿಜಕ್ಕೂ ಒಳ್ಳೆಯದೇ..ಎಂದು ಹೇಳಿದ್ದಾರೆ.

ನಮ್ಮಲ್ಲಿ ಸರ್ಕಾರದಿಂದ ಸಿಗುವ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಳ್ಳುವ ಜನರು ಬಹಳಷ್ಟಿದ್ದಾರೆ, ಬಡವರಿಗೆ ಮಾಡಿರುವ ಯೋಜನೆ ಬಡವರಿಗೆ ಮಾತ್ರವೇ ಸಿಗಬೇಕು. ಬಡವರು ಮಾತ್ರವೇ ಅದನ್ನು ಉಪಯೋಗಿಸಿಕೊಳ್ಳಬೇಕು.

ಇನ್ಮುಂದೆ ನಿಮ್ಮ ಮಕ್ಕಳಿಗೆ ಸರ್ಕಾರಿ ನೌಕರಿ ಬೇಕಾದ್ರೆ ಈ ದಾಖಲೆ ಇರಲೇಬೇಕು, ಈಗಲೇ ಮಾಡಿಸಿಕೊಳ್ಳಿ! ಹೊಸ ರೂಲ್ಸ್ ಜಾರಿ

BPL Ration Card ಸ್ವಂತ ಕಾರ್ (Own Car) ಇದೆ, ಕಾರಲ್ಲಿ ಓಡಾಡುತ್ತಾರೆ ಎಂದರೆ..ಅವರಿಗೆ ಬಿಪಿಎಲ್ ಕಾರ್ಡ್ ಯಾಕೆ ಕೊಡಬೇಕು..ಬದುಕಿಗಾಗಿ ಕಾರ್ ಕೊಂಡುಕೊಂಡಿರುವವರಿಗೆ ಸರ್ಕಾರ ತಾನೇ ಏನು ಮಾಡೋಕೆ ಸಾಧ್ಯ..ಎಂದಿದ್ದಾರೆ..

ಯಾರಿಗೆಲ್ಲಾ ಸಿಗಲಿದೆ ಯುವನಿಧಿ ಯೋಜನೆ ಹಣ? ಅರ್ಜಿ ಸಲ್ಲಿಕೆ ಹೇಗೆ? ಬೇಕಾಗಿರುವ ದಾಖಲೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಮತ್ತೊಂದು ಕಂಡೀಷನ್ ಏನು ಎಂದರೆ, ಬಿಪಿಎಲ್ ಕಾರ್ಡ್ ಇದ್ದು, ಯಾರು ಅದನ್ನು ಉಪಯೋಗಿಸುತ್ತಿಲ್ಲವೋ, ಅಂಥವರ ಕಾರ್ಡ್ ಅನ್ನು ಕೂಡ ಕ್ಯಾನ್ಸಲ್ ಮಾಡಲಿದೆ ಸರ್ಕಾರ. ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಕೆ.ಹೆಚ್.ಮುನಿಯಪ್ಪ ಅವರು ಮಾತನಾಡಿದ್ದು, ಕಾರ್ ಇರುವವರಿಗೆ ಈ ನಿಯಮ ಮುಂದುವರಿಸಬೇಕು ಎಂದು ಕೇಳಿಕೊಂಡಿದ್ದೇವೆ. ವೈಟ್ ಬೋರ್ಡ್ ಕಾರ್ಡ್, ಅಂದರೆ ಸ್ವಂತ ಕಾರ್ (Own Car) ಬಳಸುವವರಿಗೆ ಈ ನಿಯಮ ಅನ್ವಯವಾಗುತ್ತದೆ ಎಂದು ಮುನಿಯಪ್ಪನವರು ತಿಳಿಸಿದ್ದಾರೆ.

Because of this your BPL ration card may get cancelled

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories