ರಾಜ್ಯ ಸರ್ಕಾರ ಈಗ ಜನರಿಗೆ ಅನುಕೂಲ ಆಗುವ ಹಾಗೆ 5 ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಪ್ರಮುಖವಾದ ಯೋಜನೆ ಅನ್ನಭಾಗ್ಯ ಯೋಜನೆ (Annabhagya Yojane) ಸಹ ಆಗಿದೆ.
ಈ ಯೋಜನೆಯ ಮೂಲಕ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ನಲ್ಲಿ (BPL Card) ಹೆಸರು ಇರುವ ಎಲ್ಲರಿಗೂ ತಿಂಗಳಿಗೆ 10 ಕೆಜಿ ಅಕ್ಕಿ ನೀಡುವ ಉದ್ದೇಶ ಹೊಂದಿತ್ತು, ಆದರೆ ಸಮಸ್ಯೆಯ ಕಾರಣ 5 ಕೆಜಿ ಅಕ್ಕಿ ಹಾಗೂ ಇನ್ನು 5 ಕೆಜಿಯ ಹಣವನ್ನು ಕೊಡುತ್ತಿದೆ. ಬಿಪಿಎಲ್ ರೇಶನ್ ಕಾರ್ಡ್ (BPL Ration Card) ಇರುವವರು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ.
ಹಸು ಖರೀದಿಗೆ 50 ರಿಂದ 75% ಸಬ್ಸಿಡಿ ಕೊಡುತ್ತಿದೆ ರಾಜ್ಯ ಸರ್ಕಾರ! ಈ ರೀತಿ ಇಂದೇ ಅಪ್ಲೈ ಮಾಡಿ
ಇನ್ನು ಕೆಲವರು ಹೊಸ ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದಾರೆ, ಮತ್ತು ಕೆಲವರು ರೇಷನ್ ಕಾರ್ಡ್ ತಿದ್ದುಪಡಿಗೆ (Ration Card Update) ಅರ್ಜಿ ಹಾಕಿದ್ದಾರೆ. ಇದೀಗ ಸರ್ಕಾರವು ಜಿಲ್ಲೆಗಳ ಮಟ್ಟದಲ್ಲಿ ರೇಷನ್ ಕಾರ್ಡ್ ಹೊಂದಿರುವವರ ಲಿಸ್ಟ್ ಬಿಡುಗಡೆ ಮಾಡಿದ್ದು, ಇದರಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳಿ..ಇದನ್ನು ಚೆಕ್ ಮಾಡುವುದು ಹೇಗೆ ಎಂದು ಇಂದು ನಿಮಗೆ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ..
ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಗಳು ಕೂಡ ತಮ್ಮ ಪ್ರದೇಶದ ಜನರಿಗಾಗಿ ಹಲವು ಉತ್ತಮ ಯೋಜನೆಗಳನ್ನು ಜಾರಿಗೆ ತಂದು ಆ ಮೂಲಕ, ಜನರಿಗೆ ಸಹಾಯ ಮಾಡುತ್ತಿದೆ. ಇಂಥ ಸೌಲಭ್ಯಗಳಲ್ಲಿ ಒಂದು ರೇಷನ್ ಕಾರ್ಡ್ ಆಗಿದ್ದು, ಇದರಿಂದಲು ಜನರಿಗೆ ಹೆಚ್ಚಿನ ಸೌಲಭ್ಯ ಸಿಗುತ್ತಿದೆ.
ಪ್ರತಿ ವರ್ಷ ರಾಜ್ಯದ ಜನರಿಗೆ ಮತ್ತು ದೇಶದ ಜನರಿಗಾಗಿ ಕೇಂದ್ರ ಸರ್ಕಾರವು ಹೊಸ ರೇಷನ್ ಕಾರ್ಡ್ ಹೊಂದಿರುವವರ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಹಾಗೆಯೇ ಈ ವರ್ಷ ಕೂಡ ಬಿಡುಗಡೆ ಮಾಡಿದೆ.
ಗೃಹಲಕ್ಷ್ಮಿ ಯೋಜನೆಗೆ ಹೊಸ ರೂಲ್ಸ್ ತಂದ ಸರ್ಕಾರ, ಅರ್ಜಿ ಹಾಕಿದ್ರೂ ಹಣ ಬಂದಿಲ್ಲ ಅಂತ ಗೃಹಿಣಿಯರ ದೂರು
ನಮ್ಮಲ್ಲಿ ಕೊಡುವುದು ಎರಡು ರೀತಿಯ ರೇಷನ್ ಕಾರ್ಡ್, ಒಂದು ಎಪಿಎಲ್ ಕಾರ್ಡ್.. ಇದು ಬಡತನದ ರೇಖೆಗಿಂತ ಸ್ವಲ್ಪ ಮೇಲಿರುವ ಜನರಿಗೆ ಕೊಡುವ ರೇಷನ್ ಕಾರ್ಡ್. ಈ ರೇಶನ್ ಕಾರ್ಡ್ ಇಂದ ರೇಷನ್ ಖರೀದಿ ಮಾಡಲು ಹಣ ಕಟ್ಟಬೇಕು. ಆದರೆ ಇದು ಕಡಿಮೆ ಹಣ ಕಟ್ಟುವಂಥ ರೇಷನ್ ಕಾರ್ಡ್ ಆಗಿದೆ. ಮತ್ತೊಂದು ಕಾರ್ಡ್ ಬಿಪಿಎಲ್ ರೇಶನ್ ಕಾರ್ಡ್ ಆಗಿದೆ, ಈ ಕಾರ್ಡ್ ನಲ್ಲಿ ಸರ್ಕಾರದ ಸೌಲಭ್ಯಗಳನ್ನು ಉಚಿತವಾಗಿ ಪಡೆಯಬಹುದು.
ಇಷ್ಟು ಸೌಲಭ್ಯ ಕೊಡುವ ರೇಷನ್ ಕಾರ್ಡ್ ನ ಪಟ್ಟಿಯನ್ನು ಪ್ರತಿವರ್ಷ ಸರ್ಕಾರ ಬಿಡುಗಡೆ ಮಾಡಲಿದ್ದು, ಈ ವರ್ಷದ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿ.
*ಇದನ್ನು ಚೆಕ್ ಮಾಡಲು ಮೊದಲಿಗೆ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಆಹಾರ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಇದು nfsa.gov.in ವೆಬ್ಸೈಟ್ ಆಗಿದೆ.
*ಹೋಮ್ ಪೇಜ್ ನಲ್ಲಿ 2023 ರೇಷನ್ ಕಾರ್ಡ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ..
*ಬಳಿಕ ನಿಮ್ಮ ರಾಜ್ಯ, ಜಿಲ್ಲೆ ಮತ್ತು ಗ್ರಾಮದ ಹೆಸರನ್ನು ಹಾಕಬೇಕಾಗುತ್ತದೆ.
*ಬಳಿಕ ನೀವು ರೇಷನ್ ಕಾರ್ಡ್ ನ ಲಿಸ್ಟ್ ಅನ್ನು ನೋಡುತ್ತೀರಿ.
*ಈ ಪಟ್ಟಿಯಲ್ಲಿ ನಿಮ್ಮ ಹೆಸರಿಗಾಗಿ ಹುಡುಕಿ, ಹೆಸರು ಇದ್ದರೆ ನಿಮಗೆ ಪ್ರತಿ ತಿಂಗಳು ರೇಶನ್ ಸಿಗುತ್ತದೆ ಎಂದು ಅರ್ಥ.
*ಆಗ ನೀವು ರೇಷನ್ ಅಂಗಡಿಯಿಂದ ಸುಲಭವಾಗಿ ರೇಷನ್ ಪಡೆಯಬಹುದು.
*ರಾಜ್ಯದ ಬೇರೆ ಸೌಲಬ್ಯಗಳು ಕೂಡ ಸಿಗುತ್ತದೆ.
ಈ ಮೂಲಕ ನೀವು ಮನೆಯಲ್ಲೇ ಚೆಕ್ ಮಾಡಬಯಹುದು.
Govt released new ration card list for Annabhagya Yojana
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.