ಕರ್ನಾಟಕ ಗೃಹಜ್ಯೋತಿ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ, ಉಚಿತ ವಿದ್ಯುತ್ ಕುರಿತು ಮಹತ್ವದ ಅಪ್‌ಡೇಟ್

ಉಚಿತ ವಿದ್ಯುತ್ ಸೌಲಭ್ಯದ ಗೃಹಜ್ಯೋತಿ ಯೋಜನೆಯಡಿ ಗ್ರಾಹಕರ ಹೆಚ್ಚುವರಿ ವಿವರ ಸಂಗ್ರಹಕ್ಕೆ ರಾಜ್ಯ ಸರ್ಕಾರ ಅಕ್ಟೋಬರ್ 31ರವರೆಗೆ ಗಡುವು ವಿಸ್ತರಿಸಿದೆ.

ಬೆಂಗಳೂರು (Bengaluru): ಗೃಹಜ್ಯೋತಿ ಯೋಜನೆಯಡಿ (Gruha Jyothi Scheme) ನೋಂದಾಯಿಸಿಕೊಂಡಿರುವ ಗ್ರಾಹಕರ ಹೆಚ್ಚುವರಿ ವಿವರಗಳನ್ನು ಸಂಗ್ರಹಿಸಿ, ಸೇವಾಸಿಂಧು ತಂತ್ರಾಂಶದಲ್ಲಿ ದಾಖಲಿಸುವ ಪ್ರಕ್ರಿಯೆಗೆ ಕರ್ನಾಟಕ ರಾಜ್ಯ ಸರ್ಕಾರ ಮತ್ತೊಂದು ತಿಂಗಳ ಕಾಲಾವಕಾಶ ನೀಡಿದೆ.

ಈ ಹಿಂದೆ ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಬೇಕಿದ್ದ ಕಾರ್ಯಕ್ಕೆ ಇದೀಗ 2026ರ ಅಕ್ಟೋಬರ್ 31ರವರೆಗೆ ಗಡುವು ವಿಸ್ತರಿಸಲಾಗಿದೆ.

ಯೋಜನೆಯಡಿ ನೀಡಲಾಗುವ ವಿದ್ಯುತ್ ಸಹಾಯಧನ (Electricity Subsidy) ಸರಿಯಾದ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಕರ್ನಾಟಕ ರೇಷನ್‌ ಕಾರ್ಡ್‌ದಾರರಿಗೆ ಗುಡ್ ನ್ಯೂಸ್; ರಾಜ್ಯಾದ್ಯಂತ ಅನ್ನಸೇವೆ ಆ್ಯಪ್‌ ವಿಸ್ತರಣೆ

ಆಧಾರ್‌ಗೆ ಲಿಂಕ್ ಆಗಿರುವ ನೋಂದಣಿಗಳಲ್ಲಿ ಮನೆ ಮಾಲೀಕರು ಅಥವಾ ಬಾಡಿಗೆದಾರರು ಮೃತಪಟ್ಟಿರುವುದು, ಬಾಡಿಗೆ ಮನೆ ಬದಲಿಸಿರುವುದು ಹಾಗೂ ಮನೆ ಖರೀದಿ ಅಥವಾ ಮಾರಾಟದ ನಂತರವೂ ಹಳೆಯ ವಿವರಗಳು ಮುಂದುವರಿದಿರುವುದು ಗಮನಕ್ಕೆ ಬಂದಿದೆ.

ಈ ಹಿನ್ನೆಲೆಯಲ್ಲಿ ಫಲಾನುಭವಿಗಳ ಮಾಹಿತಿಯನ್ನು ನವೀಕರಿಸಿ, ಜೀವಂತ ಹಾಗೂ ಅರ್ಹ ಗ್ರಾಹಕರಿಗೆ ಮಾತ್ರ ಯೋಜನೆಯ ಪ್ರಯೋಜನ ದೊರೆಯುವಂತೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ಪರಿಶೀಲನಾ ಕಾರ್ಯ 2026ರ ಜುಲೈ 1ರಂದು ಆರಂಭವಾಗಿತ್ತು.

Gruha Jyothi Scheme

ಆದರೆ, ಹಲವು ಮನೆಗಳಿಗೆ ಬೀಗ ಹಾಕಿರುವುದು, ಮತದಾರರ ಗುರುತಿನ ಚೀಟಿ (Voter ID) ವಿವರಗಳನ್ನು ಪರಿಶೀಲಿಸುವ ಅಗತ್ಯ, ಮಾಹಿತಿ ನೀಡಲು ಕೆಲವರು ನಿರಾಕರಿಸಿರುವುದು ಸೇರಿದಂತೆ ಹಲವು ಕಾರಣಗಳಿಂದ ಪ್ರಕ್ರಿಯೆ ವಿಳಂಬವಾಗಿದೆ.

ಇದನ್ನೂ ಓದಿ: ಆತಂಕ ಬೇಡ, ಗೃಹಲಕ್ಷ್ಮಿ ಹಣ ಅರ್ಹ ಮಹಿಳೆಯರಿಗೆ ಸಿಗಲಿದೆ: ಮಧು ಬಂಗಾರಪ್ಪ

ಶಾಶ್ವತವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಮನೆಗಳು ಮತ್ತು ಮೇಲ್ಛಾವಣಿ ಸೌರಶಕ್ತಿ (Rooftop Solar) ವ್ಯವಸ್ಥೆ ಹೊಂದಿರುವ ಗ್ರಾಹಕರ ಪ್ರಕರಣಗಳನ್ನೂ ಮರುಪರಿಶೀಲಿಸಬೇಕಿದೆ.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಬೆಸ್ಕಾಂ (BESCOM), ಮೆಸ್ಕಾಂ ಸೇರಿದಂತೆ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳು ಸರ್ಕಾರಕ್ಕೆ ಹೆಚ್ಚುವರಿ ಸಮಯ ನೀಡುವಂತೆ ಮನವಿ ಸಲ್ಲಿಸಿದ್ದವು.

ಎಸ್ಕಾಂಗಳ ಮನವಿಯನ್ನು ಪರಿಗಣಿಸಿದ ಇಂಧನ ಇಲಾಖೆ, ಮಾಹಿತಿ ಸಂಗ್ರಹ ಮತ್ತು ದಾಖಲೀಕರಣ ಕಾರ್ಯ ಪೂರ್ಣಗೊಳಿಸಲು ಅಕ್ಟೋಬರ್ 31ರವರೆಗೆ ಅವಕಾಶ ನೀಡಿ ಅಧಿಕೃತ ಆದೇಶ ಹೊರಡಿಸಿದೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories