ಗೃಹಜ್ಯೋತಿ ಆಯ್ತು.. ಈಗ ಮತ್ತೊಂದು ಹೊಸ ಯೋಜನೆ ತಂದ ಸರ್ಕಾರ! ಜನರಿಗೆ ಬಿಗ್ ನ್ಯೂಸ್!
ರಾಜ್ಯ ಸರ್ಕಾರವು ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಮೂರು ಯೋಜನೆಗಳನ್ನು ಒಂದಾಗಿಸಿದೆ, ಸರ್ಕಾರದ ಈ ಪ್ಲಾನ್ ಇಂದ ರಾಜ್ಯದಲ್ಲಿ 50ಲಕ್ಷಗಳಿಗಿಂತ ಹೆಚ್ಚು ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ಸಿಗುತ್ತದೆ..
ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಜಾರಿಗೆ ಬಂದ ನಂತರ ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿತ್ತು, ಅದರಲ್ಲಿ ಒಂದು ಗೃಹಜ್ಯೋತಿ ಯೋಜನೆ (Gruha Jyothi Scheme) ಆಗಿದೆ. ಈ ಯೋಜನೆಯ ಮೂಲಕ ರಾಜ್ಯದ ಎಲ್ಲಾ ಜನತೆಗೆ 200 ಯೂನಿಟ್ ಉಚಿತವಾಗಿ ವಿದ್ಯುತ್ ಸೌಲಭ್ಯ ನೀಡುವುದಾಗಿ ಸರ್ಕಾರ ಘೋಷಿಸಿತ್ತು.
ಈ ಯೋಜನೆಯಲ್ಲಿ ಕೆಲವು ಗೊಂದಲಗಳು ಉಂಟಾದರು ಕೂಡ ಸರ್ಕಾರವೇ ಎಲ್ಲದಕ್ಕೂ ಸ್ಪಷ್ಟನೆ ನೀಡಿತು. ಈಗ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರುವಾಗಿದೆ. ಈಗಾಗಲೇ ಗೃಹಜ್ಯೋತಿ ಯೋಜನೆಹೆ 1.09ಕೋಟಿ ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಗೃಹಜ್ಯೋತಿ ಯೋಜನೆಯ ಬೆನ್ನಲ್ಲೇ..
ಈಗ ರಾಜ್ಯ ಸರ್ಕಾರವು ಜನರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಗೃಹಜ್ಯೋತಿ ಯೋಜನೆಯ ಬಗ್ಗೆ ಈಗ ನಮಗೆ ಸಿಕ್ಕಿರುವ ಅಪ್ಡೇಟ್ ಏನು ಎಂದರೆ, ರಾಜ್ಯ ಸರ್ಕಾರವು ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಮೂರು ಯೋಜನೆಗಳನ್ನು ಒಂದಾಗಿಸಿದೆ, ಸರ್ಕಾರದ ಈ ಪ್ಲಾನ್ ಇಂದ ರಾಜ್ಯದಲ್ಲಿ 50ಲಕ್ಷಗಳಿಗಿಂತ ಹೆಚ್ಚು ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ಸಿಗುತ್ತದೆ..
ಗೃಹಜ್ಯೋತಿ ಯೋಜೆನೆಯಲ್ಲಿ ಸೇರಿರುವ ಮೂರು ಯೋಜನೆಗಳು ಯಾವುವು ಎಂದರೆ, ಭಾಗ್ಯ ಜ್ಯೋತಿ (Bhagya Jyothi Scheme), ಕುಟೀರ ಜ್ಯೋತಿ (Kuteera Jyothi Scheme) ಮತ್ತು ಅಮೃತ ಜ್ಯೋತಿ ಯೋಜನೆ (Amrutha Jyothi Scheme) ಆಗಿದೆ. ಈ ಮೂರು ಯೋಜನೆಗಳನ್ನು ಒಟ್ಟುಗೂಡಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ.
ಇಷ್ಟು ದಿವಸಗಳ ಕಾಲ ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆಗಳ ಸೌಲಭ್ಯ ಪಡೆಯುತ್ತಿರುವವರು.. 40 ಯೂನಿಟ್ ಉಚಿತ ವಿದ್ಯುತ್ ಕೊಡಲಾಗುತ್ತಿತ್ತು ಆದರೆ ಇನ್ನುಮುಂದೆ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 53 ಯೂನಿಟ್ ಉಚಿತ ವಿದ್ಯುತ್ ಜೊತೆಗೆ 10% ಹೆಚ್ಚು ವಿದ್ಯುತ್ ಸೌಲಭ್ಯ ಸಿಗಲಿದೆ.
ಈ ಹೊಸ ಅಪ್ಡೇಟ್ ಬಗ್ಗೆ ಸರ್ಕಾರವೇ ಅಧಿಕೃತವಾಗಿ ಘೋಷಣೆ ಮಾಡಲಿದೆ. ಮತ್ತೊಂದು ಯೋಜನೆ ಅಮೃತಜ್ಯೋತಿ ಯೋಜನೆ ಆಗಿದೆ. ಈ ಯೋಜನೆಯ ಫಲವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬಗಳು ಪಡೆಯುತ್ತಿದ್ದವು. ಇವರಿಗೆಲ್ಲಾ 75 ಯೂನಿಟ್ ಉಚಿತ ವಿದ್ಯುತ್ ಸಿಗುತ್ತಿತ್ತು, ಈ ಯೋಜನೆಯನ್ನು ಸಹ ಗೃಹಜ್ಯೋತಿ ಯೋಜನೆಯ ಜೊತೆಗೆ ಸೇರಿಸಲಾಗಿದ್ದು..
ಈಗ ಅಮೃತಜ್ಯೋತಿ ಯೋಜೆನೆಯ ಫಲ ಪಡೆಯುವವರಿಗೆ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ. 75 ಯೂನಿಟ್ ವಿದ್ಯುತ್ ಜೊತೆಗೆ 10% ಹೆಚ್ಚು ವಿದ್ಯುತ್ ಸಿಗುತ್ತದೆ. ಈ ಹೊಸ ಅಪ್ಡೇಟ್ ಅನ್ನು ಕೂಡ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡುತ್ತದೆ. ಕಾಂಗ್ರೆಸ್ ಸರ್ಕಾರದ ಈ ಹೊಸ ಯೋಜನೆಯ ಮಾಹಿತಿ ಇಂದ..
ನಮ್ಮ ರಾಜ್ಯದಲ್ಲಿ 50ಕ್ಕಿಂತ ಹೆಚ್ಚು ಕುಟುಂಬಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಸಿಗಲಿದೆ. ಭಾಗ್ಯಜ್ಯೋತಿ ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಈ ಮೂರು ಯೋಜನೆಗಳು ಒಂದಾಗಿ ಗೃಹಜ್ಯೋತಿ ಯೋಜನೆಯ ಲಾಭ ಸಿಗುತ್ತದೆ. ರಾಜ್ಯದ ಎಲ್ಲಾ ಜನರು ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆಯುವುದು ಸರ್ಕಾರದ ಉದ್ದೇಶವಾಗಿದೆ.
Gruha jyothi scheme new update by government