ಗೃಹಲಕ್ಷ್ಮಿ 3ನೇ ಕಂತಿನ ಹಣ ಈ ದಿನ ಬಿಡುಗಡೆ! ನಿಮ್ಮ ಬ್ಯಾಂಕ್ ಖಾತೆ ಚೆಕ್ ಮಾಡಿಕೊಳ್ಳಿ
ಗೃಹಲಕ್ಷ್ಮಿ ಎರಡನೇ ಕಂತಿನ ಹಣ ಜಮಾ (second installment) ಆಗುವ ಸಮಯದಲ್ಲಿ ಸಾಕಷ್ಟು ಸಮಸ್ಯೆ ಉಂಟಾಗಿ ಫಲಾನುಭವಿ ಮಹಿಳೆಯರ (beneficiary) ಖಾತೆಗೆ (Bank Account) ಹಣ ವರ್ಗಾವಣೆ ಆಗಿಲ್ಲ
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಇತ್ತೀಚಿಗೆ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ, ಮೊದಲು ಕಂತಿನ ಹಣ ಬಿಡುಗಡೆ ಆದಾಗ ಈ ಯೋಜನೆ ಬಹುತೇಕ ಯಶಸ್ಸು ಸಾಧಿಸಿದೆ ಎಂದೇ ಹೇಳಲಾಗುತ್ತಿತ್ತು, ಆದರೆ ಎರಡನೇ ಕಂತಿನ ಹಣ ಜಮಾ (second installment) ಆಗುವ ಸಮಯದಲ್ಲಿ ಸಾಕಷ್ಟು ಸಮಸ್ಯೆ ಉಂಟಾಗಿ ಫಲಾನುಭವಿ ಮಹಿಳೆಯರ (beneficiary) ಖಾತೆಗೆ (Bank Account) ಹಣ ವರ್ಗಾವಣೆ ಆಗಿಲ್ಲ
ಈವರೆಗೆ ಒಟ್ಟು ಅರ್ಜಿ ಸಲ್ಲಿಸಿದ ಕೋಟ್ಯಾಂತರ ಮಹಿಳೆಯರ ಲೆಕ್ಕಾಚಾರ ತೆಗೆದುಕೊಂಡರೆ 100 ರಲ್ಲಿ ಕೇವಲ 70% ನಷ್ಟು ಮಹಿಳೆಯರ ಖಾತೆಗೆ ಮಾತ್ರ ಹಣ ಜಮಾ (Money Transfer) ಆಗಿದೆ, ಇನ್ನು 30% ಮಹಿಳೆಯರಿಗೆ ಒಂದೇ ಒಂದು ಕಂತಿನ ಹಣವು ಕೂಡ ಜಮಾ ಆಗದೇ ಇರುವುದು ನಿರಾಶದಾಯಕ ವಿಷಯವಾಗಿದೆ.
ರಾಜ್ಯ ಸರ್ಕಾರದಿಂದ ರೈತರಿಗೆ ಭರ್ಜರಿ ದೀಪಾವಳಿ ಗಿಫ್ಟ್; ರೈತರ ಬಡ್ಡಿ ಮನ್ನಾ ಚಿಂತನೆ
ಆಧಾರ್ ಸೀಡಿಂಗ್ ಇಲ್ಲದಿದ್ದರೂ ಹಣ ಜಮಾ ಆಗುತ್ತೆ!
ಪ್ರತಿಯೊಬ್ಬ ಮಹಿಳೆಯರ ಖಾತೆಗೆ ಹಣ ಜಮಾ ಆಗದೇ ಇರುವುದಕ್ಕೆ ಸಾಕಷ್ಟು ಕಾರಣಗಳು ಕೂಡ ಇವೆ, ಅದರಲ್ಲಿ ಮುಖ್ಯವಾಗಿ ಮಹಿಳೆಯರ ಖಾತೆಗೆ ಆಧಾರ್ ಲಿಂಕ್ (Aadhaar link) ಆಗದೆ ಇರುವುದು ಹಾಗೂ ಸರ್ಕಾರದ ತಾಂತ್ರಿಕ ದೋಷದಿಂದಾಗಿಯೂ ಕೂಡ ಫಲಾನುಭವಿಗಳಿಗೆ ಹಣ ಜಮಾ ಆಗಿಲ್ಲ.
ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡಿರುವ ಸರ್ಕಾರ ಈಗಾಗಲೇ ಪ್ರಗತಿ ಪರಿಶೀಲನ ಸಭೆ ನಡೆಸಿದ್ದು ಸಿಡಿಪಿಓ ಅಧಿಕಾರಿಗಳ (cdpo officers) ಜೊತೆಗೂ ಕೂಡ ಚರ್ಚೆ ನಡೆಸಿರುವುದಾಗಿ ತಿಳಿಸಿದೆ.
ಅಲ್ಲದೆ ಸುಮಾರು 12 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲ ಆದರೆ ಇಂಥವರಿಗೂ ಕೂಡ ಮುಂದಿನ ತಿಂಗಳಿನಿಂದ ಹಣ ಜಮಾ ಮಾಡಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ, ಅಂದರೆ ಆಧಾರ್ ಲಿಂಕ್ ಆಗದೆ ಇದ್ದರೂ ಕೂಡ ಫಲಾನುಭವಿ ಮಹಿಳೆಯರ ಖಾತೆಗೆ 2,000 ರೂಪಾಯಿ ಜಮಾ ಆಗುತ್ತದೆ.
ರಾಜ್ಯದ ಜನರು ಖುಷಿ ಪಡೋ ಸುದ್ದಿ; ಡಿಸೆಂಬರ್ ವೇಳೆಗೆ ಜಾರಿಯಾಗಲಿದೆ ಮತ್ತೊಂದು ಹೊಸ ಯೋಜನೆ
ಇದೇ ದಿನಾಂಕ ಇನ್ನು ಮುಂದೆ ಹಣ ಬಿಡುಗಡೆ!
ಈ ಹಿನ್ನೆಲೆಯಲ್ಲಿ ಸಾಕಷ್ಟು ಜನ ತಮ್ಮ ಖಾತೆಗೆ (Bank Account) ಯಾವಾಗ ಹಣ ಬರುತ್ತದೆ ಎಂದು ತಲೆ ಕೆಡಿಸಿಕೊಳ್ಳುವಂತೆ ಆಗಿತ್ತು. ಆದರೆ ಇನ್ನು ಮುಂದೆ ಈ ಸಮಸ್ಯೆ ಇಲ್ಲ, ಸರ್ಕಾರ ಈಗಾಗಲೇ ಘೋಷಿಸಿರುವ ಪ್ರಕಾರ ಅನ್ನಭಾಗ್ಯ ಯೋಜನೆ ಹಣ ಪ್ರತಿ ತಿಂಗಳು 10 ರಿಂದ 15 ನೇ ತಾರೀಖಿನ ಒಳಗೆ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ. ಅದೇ ರೀತಿ ಗೃಹಲಕ್ಷ್ಮಿ ಯೋಜನೆಯ ಹಣ 15 ರಿಂದ 20ನೇ ತಾರೀಖಿನ ಒಳಗೆ ಖಾತೆಗೆ ನೇರವಾಗಿ ಜನ ಆಗಲಿದೆ.
ಇದರ ಜೊತೆಗೆ ಸಾಮಾಜಿಕ ಭದ್ರತಾ ಪಿಂಚಣಿ (Pension) 5ನೇ ತಾರೀಖಿನ ಒಳಗೆ ಫಲಾನುಭವಿಗಳಿಗೆ ಸಿಗಲಿದೆ ಎಂದು ಸರ್ಕಾರ ಘೋಷಿಸಿದೆ.
ಗೃಹಲಕ್ಷ್ಮಿ ಯೋಜನೆ ಬಿಗ್ ಅಪ್ಡೇಟ್! ಇನ್ಮುಂದೆ ಇದೇ ದಿನಾಂಕ ಜಮಾ ಆಗುತ್ತೆ ಎಲ್ಲರಿಗೂ ಹಣ
ಮನೆ ಬಾಗಿಲಿಗೆ ಬರಲಿದ್ದಾರೆ ಸಿಬ್ಬಂದಿಗಳು!
ಸರ್ಕಾರ ಹೇಳಿರುವ ಎಲ್ಲಾ ಬದಲಾವಣೆಗಳನ್ನು ನಿಮ್ಮ ಖಾತೆಯಲ್ಲಿ ನಿಮಗೆ ಮಾಡಿಕೊಳ್ಳಲು ಸಾಧ್ಯವಾಗದೆ ಇದ್ದಲ್ಲಿ ಅಥವಾ ನಿಮ್ಮ ಖಾತೆಗೆ ಯಾಕೆ ಹಣ ಬರುತ್ತಿಲ್ಲ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗದೆ ಇರುವ ಪಕ್ಷದಲ್ಲಿ ಸ್ವಲ್ಪ ದಿನ ಆದರೆ ನಿಮ್ಮ ಮನೆ ಬಾಗಿಲಿಗೆ ಅಂಗನವಾಡಿ ಶಿಕ್ಷಕಿ ಅಥವಾ ಸಹಾಯಕಿ ಬಂದು ನಿಮ್ಮ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ತಿಳಿಸಿ ಪರಿಹಾರವನ್ನು ಸೂಚಿಸುತ್ತಾರೆ.
ಈಗಾಗಲೇ ಫಲಾನುಭವಿಗಳ ಲಿಸ್ಟ್ ಅಂಗನವಾಡಿಗೆ ತಲುಪಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ತಿಳಿಸಿದ್ದಾರೆ.
ಒಟ್ಟಿನಲ್ಲಿ ನವೆಂಬರ್ ತಿಂಗಳು ಮುಗಿಯುವುದರ ಒಳಗೆ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ ಮೂರು ಕಂತಿನ ಹಣ ಜಮಾ ಆಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವೆ ಮಾಹಿತಿ ನೀಡಿದ್ದಾರೆ.
Gruha Lakshmi Scheme 3rd installment money released, Check your bank account
Follow us On
Google News |