ರಾಜ್ಯದ ಜನರು ಖುಷಿ ಪಡೋ ಸುದ್ದಿ; ಡಿಸೆಂಬರ್ ವೇಳೆಗೆ ಜಾರಿಯಾಗಲಿದೆ ಮತ್ತೊಂದು ಹೊಸ ಯೋಜನೆ

ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರವು ಬಿಪಿಎಲ್ ಪಡಿತರ ಚೀಟಿದಾರರಿಗೆ (BPL Ration Card) ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ.

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರವು ಬಿಪಿಎಲ್ ಪಡಿತರ ಚೀಟಿದಾರರಿಗೆ (BPL Ration Card) ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಇದರಿಂದಾಗಿ ಬಿಪಿಎಲ್ ಪಡಿತರ ಚೀಟಿದಾರರ (Ration Card) ಸಂಖ್ಯೆ ಹೆಚ್ಚಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ರಾಜ್ಯ ಸರ್ಕಾರವು ಸಮಾಜದ ಕಟ್ಟ ಕಡೆಯ ಮನುಷ್ಯನನ್ನು ಗಮನದಲ್ಲಿಟ್ಟುಕೊಂಡು ಹಲವಾರು ಯೋಜನೆಗಳನ್ನು (Schemes) ಜಾರಿಗೆ ತರುತ್ತಿದೆ.

ಕೋವಿಡ್ ನಂತರದಲ್ಲಿ ಜನರು ಆರೋಗ್ಯದತ್ತ ಹೆಚ್ಚಿನ ಲಕ್ಷ್ಯ ವಹಿಸಿದ್ದಾರೆ. ಅಲ್ಲದೆ ಹವಾಮಾನ ವೈಪರಿತ್ಯದಿಂದಲೂ ಅನೇಕ ಸಣ್ಣ ಸಣ್ಣ ಸಾಂಕ್ರಾಮಿಕ ಕಾಯಿಲೆಗಳು ಆಗಾಗ ಕಾಣಿಸಿಕೊಳ್ಳುತ್ತಿದೆ. ಮಕ್ಕಳಿಂದ ಹಿಡಿದು ಮುದುಕರ ವರೆಗೂ ತಮ್ಮ ಕಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ.

ರಾಜ್ಯದ ಜನರು ಖುಷಿ ಪಡೋ ಸುದ್ದಿ; ಡಿಸೆಂಬರ್ ವೇಳೆಗೆ ಜಾರಿಯಾಗಲಿದೆ ಮತ್ತೊಂದು ಹೊಸ ಯೋಜನೆ - Kannada News

ರಾಜ್ಯ ಸರ್ಕಾರ ಜಾರಿಗೆ ತಂತು ಮಾಂಗಲ್ಯ ಭಾಗ್ಯ ಯೋಜನೆ! ಮದುವೆಯಾಗುವವರಿಗೆ ಸ್ಕೀಮ್

ಉಚಿತ ಆರೋಗ್ಯ ಯೋಜನೆ ಜಾರಿಗೆ ಚಿಂತನೆ:

ಸದ್ಯ ರಾಜ್ಯದ ಜನರ ಆರೋಗ್ಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಹೊಸ ಆರೋಗ್ಯ ಯೋಜನೆ (Health Scheme) ಜನರಿಗೆ ಪರಿಚಯಿಸಿದೆ. ರಾಜ್ಯದಲ್ಲಿರುವ ಬಿಪಿಎಲ್ ಪಡಿತರ ಚೀಟಿದಾರರು ಈ ಉಚಿತ ಆರೋಗ್ಯ ಸೇವೆಯನ್ನು ಪಡೆದುಕೊಳ್ಳಬಹುದು.

ರಾಜ್ಯ ಸರ್ಕಾರ ಜಾರಿಗೆ ತರಲಿರುವ ಹೊಸ ಆರೋಗ್ಯ ಯೋಜನೆ (New Health Scheme) ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ಡಿಸೆಂಬರ್ ತಿಂಗಳಿನಿಂದ ರದ್ದಾಗಲಿದೆ ಇಂತಹವರ ರೇಷನ್ ಕಾರ್ಡ್! ಸರ್ಕಾರ ಖಡಕ್ ವಾರ್ನಿಂಗ್

ಗೃಹ ಆರೋಗ್ಯ ಯೋಜನೆ – Gruha Arogya Scheme

Gruha Arogya Schemeರಾಜ್ಯದ ಜನರಲ್ಲಿ ಕಾಣಿಸಿಕೊಳ್ಳುವ ಅನಾರೋಗ್ಯ ಸಮಸ್ಯೆಗಳಿಗೆ ಉಚಿತ ಔಷಧಿ (Free medicine) ಒದಗಿಸುವ ಗೃಹ ಆರೋಗ್ಯ ಯೋಜನೆ ಜಾರಿಗೆ ತರಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ ಈ ಯೋಜನೆ ಜಾರಿಯಾಗಲಿದೆ.

ಈ ಯೋಜನೆ ಅಡಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರ ತಪಾಸಣೆ ನಡೆಸಲಿದ್ದಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಗೃಹ ಆರೋಗ್ಯ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆದಿದೆ.

ಗೃಹಲಕ್ಷ್ಮಿ ಯೋಜನೆ ಬಿಗ್ ಅಪ್ಡೇಟ್! ಇನ್ಮುಂದೆ ಇದೇ ದಿನಾಂಕ ಜಮಾ ಆಗುತ್ತೆ ಎಲ್ಲರಿಗೂ ಹಣ

ಮುಂದಿನ ತಿಂಗಳು ಜಾರಿಯಾಗಲಿದೆ ಮಹತ್ವದ ಯೋಜನೆ:

ಹೃದಯಾಘಾತ, ಕಿಡ್ನಿ, ಕ್ಯಾನ್ಸರ್, ಬಿಪಿ, ಮಧುಮೇಹ ಸೇರಿದಂತೆ ಸಣ್ಣ ಪುಟ್ಟ ಕಾಯಿಲೆಗಳಿಗೂ ಸ್ಥಳದಲ್ಲೇ ಔಷಧ ನೀಡಲಿದ್ದು, ಸಂಕೀರ್ಣ ಕಾಯಿಲೆಯನ್ನು ಪತ್ತೆ ಹಚ್ಚಿ ಗಂಭೀರ ಸಮಸ್ಯೆ ಇದ್ದವರನ್ನು ಸೂಕ್ತ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇನ್ನು ಮುಂದೆ ರಾಜ್ಯದ ಜನರು ಐದು ಗ್ಯಾರಂಟಿ ಯೋಜನೆಗಳ ಸೌಲಭ್ಯದ ಜೊತೆ ಗೃಹ ಆರೋಗ್ಯ ಯೋಜನೆಯ ಸೌಲಭ್ಯವನ್ನು ಪಡೆಯಬಹುದು. ಏನಾದರೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲವೇ ಸರ್ಕಾರಿ ಆಸ್ಪತ್ರೆಗೆ ಭೇಟಿ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ.

Another new scheme will be implemented by December

Follow us On

FaceBook Google News

Another new scheme will be implemented by December