ಡಿಸೆಂಬರ್ ತಿಂಗಳಿನಿಂದ ರದ್ದಾಗಲಿದೆ ಇಂತಹವರ ರೇಷನ್ ಕಾರ್ಡ್! ಸರ್ಕಾರ ಖಡಕ್ ವಾರ್ನಿಂಗ್
ಬಿಪಿಎಲ್ ರೇಷನ್ ಕಾರ್ಡ್ (BPL Ration card) ಹೊಂದಿರುವವರಿಗೆ ಸರ್ಕಾರ ಮಹತ್ವದ ಸೂಚನೆ ಒಂದನ್ನು ನೀಡಿದೆ, ಯಾವುದೇ ಕಾರಣಕ್ಕೂ ಅನರ್ಹರು ಇನ್ನು ಮುಂದೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ ಅಂತವರ ರೇಷನ್ ಕಾರ್ಡ್ ರದ್ದುಪಡಿಸಲು (ration card cancellation) ಸರ್ಕಾರ ನಿರ್ಧರಿಸಿದೆ
ಇದರಿಂದ ಯಾರಿಗೆ ನಿಜವಾಗಿ ಪಡಿತರ ವಸ್ತುಗಳ ಅವಶ್ಯಕತೆ ಇರುತ್ತದೆಯೋ ಅಂತವರಿಗೆ ರೇಷನ್ ಕಾರ್ಡ್ ಒದಗಿಸಲು ಸರ್ಕಾರ ಒಂದಾಗಿದೆ.
ಇನ್ಮುಂದೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಈ 4 ಹೊಸ ಮಾನದಂಡಗಳು ಕಡ್ಡಾಯ
ಮುಂದಿನ ಐದು ವರ್ಷ ಸಿಗುತ್ತೆ ಉಚಿತ ಪಡಿತರ ವಸ್ತು!
ಬಡತನ ರೇಖೆಗಿಂತ ಕೆಳಗಿರುವವರಿಗೆ (below poverty line) ಬಿಪಿಎಲ್ ರೇಷನ್ ಕಾರ್ಡ್ ನೀಡಲಾಗಿದೆ, ದೇಶಾದ್ಯಂತ ಪ್ರತಿಯೊಂದು ರಾಜ್ಯವು ಕೂಡ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು ಉಚಿತ ಐದು ಕೆಜಿ ಅಕ್ಕಿ ಪಡೆದುಕೊಳ್ಳುತ್ತಿದೆ.
ಕರೋನಾ ಸಾಂಕ್ರಾಮಿಕ (covid-19) ಸಂದರ್ಭದಲ್ಲಿ 5 ಕೆಜಿ ಉಚಿತ ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು. ಇದೀಗ ಮುಂದಿನ ಐದು ವರ್ಷಗಳ ಕಾಲ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ರೇಷನ್ ನೀಡಲು ಕೇಂದ್ರ ಸರ್ಕಾರ (Central government) ನಿರ್ಧರಿಸಿದೆ.
ಛತ್ತೀಸ್ಗಡ (Chhattisgarh) ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಸ್ವತ: ಈ ಬಗ್ಗೆ ಘೋಷಣೆ ಮಾಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಬಿಗ್ ಅಪ್ಡೇಟ್! ಇನ್ಮುಂದೆ ಇದೇ ದಿನಾಂಕ ಜಮಾ ಆಗುತ್ತೆ ಎಲ್ಲರಿಗೂ ಹಣ
ಮಾನದಂಡಗಳನ್ನು ಮೀರಿದರೆ ರದ್ದಾಗುತ್ತೆ ಬಿಪಿಎಲ್ ಕಾರ್ಡ್!
ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ ಹೆಚ್ಚಿನ ಮಹತ್ವ ಪಡೆದುಕೊಂಡಿದೆ ಎನ್ನಬಹುದು, ಯಾಕೆಂದರೆ ರಾಜ್ಯ ಸರ್ಕಾರ ಹೊರಡಿಸಿರುವ ಯಾವುದೇ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ ಇದ್ದರೆ ಒಳ್ಳೆಯದು
ಇದೇ ಕಾರಣಕ್ಕೆ ಸಾಕಷ್ಟು ಜನ ಬಿಪಿಎಲ್ ಹೊಸ ಕಾರ್ಡ್ ಪಡೆದುಕೊಳ್ಳಲು ಬಯಸುತ್ತಾರೆ. ಅಷ್ಟೇ ಅಲ್ಲದೆ ಈಗ ಇರುವ ಬಿಪಿಎಲ್ ಕಾರ್ಡ್ ದಾರರು ಸುಳ್ಳು ಮಾಹಿತಿಯನ್ನು ಕೊಟ್ಟು ಸರ್ಕಾರದ ಬೆನಿಫಿಟ್ ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವುದು, ಆಹಾರ ಇಲಾಖೆಯ (food department) ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹೊಸ ನಾಲ್ಕು ಮಾನದಂಡಗಳನ್ನು ಸೂಚಿಸಿದ್ದು ಇದನ್ನು ಮೀರಿದರೆ ಅಂಥವರ ಬಿಪಿಎಲ್ ಕಾರ್ಡ್ ತಕ್ಷಣಕ್ಕೆ ರದ್ದಾಗುತ್ತದೆ.
ಇನ್ಮುಂದೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಈ 4 ಹೊಸ ಮಾನದಂಡಗಳು ಕಡ್ಡಾಯ
ಸರ್ಕಾರ ಘೋಷಿಸಿದ ನಾಲ್ಕು ಮಾನದಂಡಗಳು ಯಾವವು!
*ಯಾರು ನೂರು ಚದರ ಮೀಟರ್ ಗಿಂತಲೂ ದೊಡ್ಡದಾಗಿರುವ ಸ್ವಂತ ಮನೆ ಹೊಂದಿರುತ್ತಾರೋ ಅಂತವರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ.
*ಯಾರ ಬಳಿ ನಾಲ್ಕು ಚಕ್ರದ ವಾಹನ ಅಥವಾ ಟ್ರ್ಯಾಕ್ಟರ್ ಇರುತ್ತದೆ ಅವರಿಗೂ ಸಹ ಸಿಗುವುದಿಲ್ಲ.
*ಯಾರು ಶಸ್ತ್ರಾಸ್ತ್ರ ಪರವಾನಿಗೆ ಹೊಂದಿರುತ್ತಾರೋ ಅಂತವರಿಗೂ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ.
*ಗ್ರಾಮೀಣ ಭಾಗದಲ್ಲಿ 2 ಲಕ್ಷ ರೂಪಾಯಿ ಹಾಗೂ ನಗರ ಭಾಗದಲ್ಲಿ ಮೂರು ಲಕ್ಷ ರೂಪಾಯಿ ವಾರ್ಷಿಕ ಆದಾಯ ಮೀರಿದರೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ.
ಈ ನಾಲ್ಕು ನಿಯಮಗಳನ್ನು ಹೊರತುಪಡಿಸಿ ಸರ್ಕಾರ ಈ ಮೊದಲೇ ಹೇಳಿರುವ ಮಾನದಂಡಗಳು ಕೂಡ ಬಿಪಿಎಲ್ ಕಾರ್ಡ್ ದಾರರಿಗೆ ಅನ್ವಯವಾಗುತ್ತದೆ. ಹಾಗಾಗಿ ಯಾರು ಈ ಮನದಂಡಗಳ ಒಳಗೆ ಬರುತ್ತಾರೋ ಅಂತವರ ಬಿಪಿಎಲ್ ಕಾರ್ಡ್ ಉಳಿದುಕೊಳ್ಳಲಿದೆ.
ಇದರ ಜೊತೆಗೆ ಸದ್ಯದಲ್ಲಿ ಫಲಾನುಭವಿ ಅರ್ಜಿದಾರರ ಹೊಸ ಬಿಪಿಎಲ್ ಕಾರ್ಡ್ ವಿತರಣೆಗೂ ಕೂಡ ಸರ್ಕಾರ ಮುಂದಾಗಿದ್ದು ಸಾಕಷ್ಟು ಜನರಿಗೆ ಹೊಸ ರೇಷನ್ ಕಾರ್ಡ್ ಸಿಗುವ ಸಾಧ್ಯತೆ ಇದೆ.
The ration card of such people will be canceled from December
Our Whatsapp Channel is Live Now 👇