ಇನ್ಮುಂದೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಈ 4 ಹೊಸ ಮಾನದಂಡಗಳು ಕಡ್ಡಾಯ

ಬಿಪಿಎಲ್ ರೇಷನ್ ಕಾರ್ಡ್ (BPL Ration card) ಗೆ ಸಂಬಂಧಪಟ್ಟ ಹಾಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾಗಿರುವ ಕೆ.ಹೆಚ್ ಮುನಿಯಪ್ಪ (K.H Muniyappa) ಮಹತ್ವದ ಅಪ್ಡೇಟ್ (update) ಒಂದನ್ನು ನೀಡಿದ್ದಾರೆ.

ಬಿಪಿಎಲ್ ರೇಷನ್ ಕಾರ್ಡ್ (BPL Ration card) ಗೆ ಸಂಬಂಧಪಟ್ಟ ಹಾಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾಗಿರುವ ಕೆ.ಹೆಚ್ ಮುನಿಯಪ್ಪ (K.H Muniyappa) ಮಹತ್ವದ ಅಪ್ಡೇಟ್ (update) ಒಂದನ್ನು ನೀಡಿದ್ದಾರೆ.

ಇನ್ನು ಮುಂದೆ ಇಂಥವರಿಗೆ ಬಿಪಿಎಲ್ ಕಾರ್ಡ್ ಹೊಂದಿದ್ದರು ಕೂಡ ಸರ್ಕಾರದ ಯಾವ ಪ್ರಯೋಜನಗಳು ಸಿಗುವುದಿಲ್ಲ, ಅಂದರೆ ಬಿಪಿಎಲ್ ಕಾರ್ಡ್ ಹೊಂದಿದ್ದರು ಕೂಡ ಸರ್ಕಾರದ ಯೋಜನೆಯ ಬೆನಿಫಿಟ್ಸ್ (benefits) ಸಿಗುವುದಿಲ್ಲ.

ಗೃಹಜ್ಯೋತಿ ಯೋಜನೆ ಫ್ರೀ ಕರೆಂಟ್ ಜೊತೆಗೆ ಇಂಥವರಿಗೆ ಸಿಗಲಿದೆ ಎಕ್ಸ್ಟ್ರಾ ಬೆನಿಫಿಟ್

ಇನ್ಮುಂದೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಈ 4 ಹೊಸ ಮಾನದಂಡಗಳು ಕಡ್ಡಾಯ - Kannada News

ಸರ್ಕಾರ ಘೋಷಿಸಿದ ನಾಲ್ಕು ಹೊಸ ಮಾನದಂಡಗಳು!

ಬಿಪಿಎಲ್ ಕಾರ್ಡ್ ಹೊಂದಿರಲು ಅದರದ್ದೆ ಆದ ನಿಯಮಗಳು ಇವೆ, ಮಾನದಂಡಗಳ ಒಳಗೆಬಾರದೆ ಇದ್ದರೆ ಅಂತವರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ. ಇದೀಗ ಮತ್ತೆ ನಾಲ್ಕು ಮಾನದಂಡಗಳನ್ನು ಸರ್ಕಾರ ತಿಳಿಸಿದ್ದು, ಈ ಮಾನದಂಡಗಳ ಒಳಗೆ ನೀವು ಬಾರದೆ ಇದ್ದರೆ ನಿಮ್ಮ ಬಳಿ ಇರುವ ರೇಷನ್ ಕಾರ್ಡ್ ಕಳೆದುಕೊಳ್ಳುತ್ತೀರಿ ಹಾಗೂ ಹೊಸ ರೇಷನ್ ಕಾರ್ಡ್ ಕೂಡ ಪಡೆಯಲು ಸಾಧ್ಯವಿಲ್ಲ.

ಹಾಗಾದ್ರೆ ಸರ್ಕಾರ ತಿಳಿಸಿದ ಹೊಸ ನಾಲ್ಕು ಮಾನದಂಡಗಳು (4 new rules) ಯಾವುವು ನೋಡೋಣ.

*ನೂರು ಚದರ ಮೀಟರ್ ಗಿಂತಲೂ ದೊಡ್ಡ ಸ್ವಂತ ಮನೆಯನ್ನು (own house) ಹೊಂದಿರಬಾರದು.

*ಸ್ವಂತ 4 ಚಕ್ರದ ವಾಹನ (Own Car or Four Wheeler) ಅಥವಾ ಟ್ರ್ಯಾಕ್ಟರ್ ಹೊಂದಿರಬಾರದು

*ಯಾವುದೇ ಶಸ್ತ್ರಾಸ್ತ್ರ ಪರವಾನಿಗೆ ಪಡೆದುಕೊಂಡಿರಬಾರದು.

*ಹಳ್ಳಿಯಲ್ಲಿ ವಾರ್ಷಿಕ ಆದಾಯ ಎರಡು ಲಕ್ಷ ಹಾಗೂ ನಗರದಲ್ಲಿ ವಾರ್ಷಿಕ ಆದಾಯ 3 ಲಕ್ಷ ಮೀರಿರಬಾರದು.

ಈ ನಾಲ್ಕು ಮಾನದಂಡಗಳನ್ನು ಹೊಂದಿದ್ದರೆ ಅಂತವರಿಗೆ ರೇಷನ್ ಕಾರ್ಡ್ ಸಿಗುವುದಿಲ್ಲ.

ಇಷ್ಟು ದಿನ ಗೃಹಲಕ್ಷ್ಮಿ ಹಣ ಬಾರದವರಿಗೂ ಹಣ ವರ್ಗಾವಣೆ ಆಗಿದೆ, ಕೂಡಲೇ ಚೆಕ್ ಮಾಡಿಕೊಳ್ಳಿ

ರೇಷನ್ ಕಾರ್ಡ್ ಸೆರೆಂಡರ್ ಮಾಡಿ

BPL Ration Cardಸರ್ಕಾರ ಈಗಾಗಲೇ ತಿಳಿಸಿರುವಂತೆ ಬಿಪಿಎಲ್ ಕಾರ್ಡ್ ಹೊಂದಿರಲು ಘೋಷಿಸಲಾದ ಮಾನದಂಡಗಳ ಒಳಗೆ ಬಾರದೆ ಇರುವವರು ತಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ತಾವಾಗಿಯೇ ಸರ್ಕಾರಕ್ಕೆ ಹಿಂತಿರುಗಿಸಿ ಕೊಡಬೇಕು.

ಸರ್ಕಾರದ ನಿಯಮಗಳ ಬಗ್ಗೆ ಗೊತ್ತಿದ್ದರೂ ಕೂಡ ಉಳ್ಳವರು ರೇಷನ್ ಕಾರ್ಡ್ ಹೊಂದಿದ್ದರೆ ಹಾಗೂ ಅದರಿಂದ ಸರ್ಕಾರದ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ ಅಂತವರ ರೇಷನ್ ಕಾರ್ಡ್ ಯಾವುದೇ ನೋಟಿಸ್ (notice) ಕೂಡ ಕೊಡದೆ ರದ್ದು ಪಡಿಸಲು ಸರ್ಕಾರ ನಿರ್ಧರಿಸಿದೆ.

ಹಾಗಾಗಿ ಬಡತನ ರೇಖೆಗಿಂತ ಕೆಳಗಿನವರಿಗೆ (below poverty line) ಕೊಡಲಾಗುವ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಉಳ್ಳವರು ಹೊಂದಿದ್ದರೆ ಅದನ್ನು ತಕ್ಷಣವೇ ಸರ್ಕಾರಕ್ಕೆ ಸರೆಂಡರ್ (surrender) ಮಾಡಬೇಕು.

ಅನ್ನಭಾಗ್ಯ ಹಣ ಇನ್ನು ಜಮಾ ಆಗಿಲ್ವ, ತಕ್ಷಣ ಈ ಕೆಲಸ ಮಾಡಿ ಎಲ್ಲಾ ಕಂತಿನ ಹಣ ಬರುತ್ತೆ

ರೇಷನ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ!

ಯಾರು ಅಗತ್ಯ ಇಲ್ಲದೆ ಇದ್ದರೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದಾರೋ, ಅದನ್ನು ಪರಿಶೀಲಿಸಿ ಅಂಥವರ ರೇಷನ್ ಕಾರ್ಡ್ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ. ಇನ್ನು ಈಗಾಗಲೇ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಫಲಾನುಭವಿಗಳಿಗೆ ಮಾತ್ರ ರೇಷನ್ ಕಾರ್ಡ್ ಸದ್ಯದಲ್ಲಿಯೇ ವಿತರಣೆ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಯಾರು ಸರ್ಕಾರ ವಿಧಿಸಿರುವ ಮಾನದಂಡಗಳ ಅಡಿಯಲ್ಲಿ ಬರುವುದಿಲ್ಲವೋ ಅಂತವರನ್ನು ಹೊರತುಪಡಿಸಿ ಬೇರೆಯವರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅದನ್ನು ತಕ್ಷಣವೇ ಆಹಾರ ಇಲಾಖೆಗೆ ಹಿಂತಿರುಗಿಸಿ ಕೊಡಬೇಕು ಇಲ್ಲವಾದರೆ ಸರ್ಕಾರದಿಂದ ಭಾರಿ ಮೊತ್ತದ ದಂಡ ವಿಧಿಸಲಾಗುತ್ತದೆ.

These 4 new criteria are mandatory to get a new BPL Ration Card

Follow us On

FaceBook Google News

These 4 new criteria are mandatory to get a new BPL Ration Card