ಗೃಹಜ್ಯೋತಿ ಯೋಜನೆ ಫ್ರೀ ಕರೆಂಟ್ ಜೊತೆಗೆ ಇಂಥವರಿಗೆ ಸಿಗಲಿದೆ ಎಕ್ಸ್ಟ್ರಾ ಬೆನಿಫಿಟ್

ಯಾವುದೇ ಅಡಚಣೆ ಇಲ್ಲದೆ ಈ ಐದು ಗಂಟೆಗಳ ಕಾಲ ರೈತರು ತಮ್ಮ ಜಮೀನಿಗೆ (Agriculture Property) ಪಂಪ್ಸೆಟ್ ಮೂಲಕ ನೀರು ಪೂರೈಕೆ ಮಾಡಿಕೊಳ್ಳಬಹುದು. ನೆರೆ ರಾಜ್ಯಗಳಿಂದ ವಿದ್ಯುತ್ (Electricity) ಖರೀದಿ ಮಾಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ.

ಗೃಹಜೋತಿ ಯೋಜನೆಯ (Gruha Jyothi Yojana) ಅಡಿಯಲ್ಲಿ ಇಂದು ಸಾಕಷ್ಟು ಕುಟುಂಬಗಳು 200 ಯೂನಿಟ್ಗಿಂತಲೂ ( 200 unit) ಕಡಿಮೆ ವಿದ್ಯುತ್ ಬಳಸುತ್ತಿದ್ದರೆ ಅಂತವರಿಗೆ ಉಚಿತ ವಿದ್ಯುತ್ (free Electricity) ನೀಡಲಾಗುತ್ತಿದೆ.

ಈ ಮೂಲಕ ಲಕ್ಷಾಂತರ ಕುಟುಂಬಗಳು ಪ್ರತಿ ತಿಂಗಳು ಯಾವುದೇ ಹಣ ಪಾವತಿ ಮಾಡದೆ ಉಚಿತವಾಗಿ ವಿದ್ಯುತ್ ಬಳಸಿಕೊಳ್ಳಬಹುದಾಗಿದೆ. ಇದೇ ರೀತಿ ಇನ್ನೂ ಬೇರೆ ಬೇರೆ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ

ಆದರೆ ಈಗಾಗಲೇ ಜಾರಿಗೆ ತಂದಿರುವ ಯೋಜನೆಗಳಲ್ಲಿ ಕೆಲವು ಲೋಪದೋಷಗಳು ಕೂಡ ಇದ್ದು ಒಂದಿಷ್ಟು ಫಲಾನುಭವಿಗಳಿಗೆ ಅದರ ಪ್ರಯೋಜನ ಸಿಗುತ್ತಿಲ್ಲ.

sudden rise in electricity prices even Gruha Jyothi Yojana

ಅನ್ನಭಾಗ್ಯ ಹಣ ಇನ್ನು ಜಮಾ ಆಗಿಲ್ವ, ತಕ್ಷಣ ಈ ಕೆಲಸ ಮಾಡಿ ಎಲ್ಲಾ ಕಂತಿನ ಹಣ ಬರುತ್ತೆ

ತಲೆದೂರಿದೆ ವಿದ್ಯುತ್ ಕೊರತೆ! (Electricity problem)

ಬಹಳ ಮುಖ್ಯವಾಗಿರುವ ವಿಚಾರ ಅಂದ್ರೆ ಒಂದು ಕಡೆ ಉಚಿತ ವಿದ್ಯುತ್ ಅನ್ನು ನಾವು ಪಡೆದು ಕೊಳ್ಳುತ್ತಿದ್ದೇವೆ ಆದರೆ ಜನರ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಉತ್ಪಾದನೆ (power generation) ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ

ಬೆಸ್ಕಾಂ (BESCOM) ನೀಡಿರುವ ಮಾಹಿತಿಯ ಪ್ರಕಾರ ಜನರ ವಿದ್ಯುತ್ ಬೇಡಿಕೆ ಕಳೆದ ವರ್ಷಗಳಿಗೆ ಹೋಲಿಸಿದರೆ 20% ಹೆಚ್ಚಾಗಿದೆ. ಆದರೆ ಮಳೆಯ ಅಭಾವದಿಂದಾಗಿ ಸರ್ಕಾರ ಜನರ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ

ಇದರ ಜೊತೆಗೆ ಗೃಹಜ್ಯೋತಿ ಯೋಜನೆಯ ಪರಿಣಾಮ, ವಿದ್ಯುತ್ ನಿಗಮಕ್ಕೆ ಬಾರಿ ದೊಡ್ಡ ಆರ್ಥಿಕ ನಷ್ಟ ಉಂಟಾಗುತ್ತಿದೆ. ಜೊತೆಗೆ ಜನರಿಗೆ ಬೇಕಾದಷ್ಟು ವಿದ್ಯುತ್ ಒದಗಿಸಲು ಸಾಧ್ಯವಾಗುತ್ತಿಲ್ಲ.

ಶೀಘ್ರದಲ್ಲೇ ಸಿಗಲಿದೆ ಹೊಸ ಪಡಿತರ ಚೀಟಿ; ರೇಷನ್ ಕಾರ್ಡ್ ಅರ್ಜಿದಾರರು ಫುಲ್ ಖುಷ್

ರೈತರಿಗೆ ಸಿಗಬೇಕು ವಿದ್ಯುತ್!

Free Electricityಮಳೆಯ ಅಭಾವ ವಿದ್ಯುತ್ ಉತ್ಪಾದನೆಯಲ್ಲಿ ಮಾತ್ರವಲ್ಲ, ರೈತರ ಬೆಳೆಗಳ ಮೇಲೂ ಪರಿಣಾಮ ಬೀರುತ್ತದೆ. ಮಳೆಯ ಕೊರತೆಯಿಂದಾಗಿ ರೈತರು ತಮ್ಮ ಜಮೀನಿಗೆ ಸ್ವಲ್ಪವಾದರೂ ಫಸಲು ಬರುವಂತೆ ಮಾಡಲು ಸರಿಯಾದ ರೀತಿಯಲ್ಲಿ ನೀರಾವರಿ ಮಾಡಬೇಕು. ಆದರೆ ರೈತರು ತಮ್ಮ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ವಿದ್ಯುತ್ ಬಳಸಿ ಆ ಮೂಲಕ ನೀರು ಹಾಯಿಸಬೇಕು.

ಆದರೆ ವಿದ್ಯುತ್ ಅಭಾವದಿಂದ ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಲೋಡ್ ಶೆಡ್ಡಿಂಗ್ (load shedding) ಸಮಸ್ಯೆ ಆರಂಭವಾಗಿಬಿಟ್ಟಿದೆ ಇದರಿಂದಾಗಿ ರೈತರು ಸರಿಯಾಗಿ ಏಕಕಾಲಕ್ಕೆ ಪ್ರತಿದಿನ ನೀರಾವರಿ ಮಾಡಲು ಸಾಧ್ಯವಾಗುತ್ತಿಲ್ಲ. ಸಮಸ್ಯೆ ಬಗೆಹರಿಸಲು ಸರ್ಕಾರ ನಿರ್ಧರಿಸಿದೆ.

ಇನ್ಮುಂದೆ ರೈತರ ಬಳಿ ಈ ಕಾರ್ಡ್ ಇಲ್ಲದಿದ್ದರೆ ಯಾವುದೇ ಬೆನಿಫಿಟ್ ಸಿಗೋಲ್ಲ! ಮೊದಲು ಕಾರ್ಡ್ ಮಾಡಿಸಿಕೊಳ್ಳಿ

ರೈತರಿಗೆ 5 ಗಂಟೆಗಳ ನಿರಂತರ ಕರೆಂಟ್!

ರೈತರು ತಮ್ಮ ಜಮೀನಿಗೆ ನೀರು ಹಾಯಿಸಿಕೊಳ್ಳಲು ಪಂಪ್ಸೆಟ್ (pumpset) ಗೆ ಅಗತ್ಯವಾಗಿರುವ ವಿದ್ಯುತ್ ಪೂರೈಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಇನ್ನು ಮುಂದೆ ರೈತರ ಜಮೀನಿಗೆ ನೀರುಣಿಸಲು ಸರ್ಕಾರ ದಿನದಲ್ಲಿ 5 ಗಂಟೆಗಳ ಕಾಲ ನಿರಂತರ ವಿದ್ಯುತ್ ಒದಗಿಸಲು ನಿರ್ಧರಿಸಿದೆ

ಹಾಗಾಗಿ ಯಾವುದೇ ಅಡಚಣೆ ಇಲ್ಲದೆ ಈ ಐದು ಗಂಟೆಗಳ ಕಾಲ ರೈತರು ತಮ್ಮ ಜಮೀನಿಗೆ (Agriculture Property) ಪಂಪ್ಸೆಟ್ ಮೂಲಕ ನೀರು ಪೂರೈಕೆ ಮಾಡಿಕೊಳ್ಳಬಹುದು. ಇನ್ನು ರಾಜ್ಯದ ಜನತೆಯ ವಿದ್ಯುತ್ ಬೇಡಿಕೆ ಪೂರೈಕೆ ಮಾಡಲು ನೆರೆ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ.

Along with Gruha Jyothi Yojana Free Electricity, Such people get extra benefit

Related Stories