ಶೀಘ್ರದಲ್ಲೇ ಸಿಗಲಿದೆ ಹೊಸ ಪಡಿತರ ಚೀಟಿ; ರೇಷನ್ ಕಾರ್ಡ್ ಅರ್ಜಿದಾರರು ಫುಲ್ ಖುಷ್
ಈಗಾಗಲೇ ರಾಜ್ಯಾದ್ಯಂತ ಹೊಸ ಪಡಿತರ ಚೀಟಿ (Ration Card) ಪಡೆದುಕೊಳ್ಳಲು ಕಳೆದ ಎರಡು ವರ್ಷಗಳಿಂದ ಅರ್ಜಿ ಸಲ್ಲಿಸಿದ ಅರ್ಜಿದಾರರು ಯಾವಾಗ ತಮಗೆ ಪಡಿತರ ಚೀಟಿ ಸಿಗುತ್ತದೆ ಎಂಬುದನ್ನು ಕಾದು ಕುಳಿತಿದ್ದಾರೆ.
ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ (K.H muniyappa) ಮಹತ್ವದ ಮಾಹಿತಿ ಒಂದನ್ನು ನೀಡಿದ್ದಾರೆ!
ಇನ್ಮುಂದೆ ರೈತರ ಬಳಿ ಈ ಕಾರ್ಡ್ ಇಲ್ಲದಿದ್ದರೆ ಯಾವುದೇ ಬೆನಿಫಿಟ್ ಸಿಗೋಲ್ಲ! ಮೊದಲು ಕಾರ್ಡ್ ಮಾಡಿಸಿಕೊಳ್ಳಿ
ಬಿಪಿಎಲ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಕೆ! (Application for new BPL card)
ರಾಜ್ಯದಲ್ಲಿ ಈಗಾಗಲೇ ರೇಷನ್ ಕಾರ್ಡ್ ಮಹತ್ವ ಎಲ್ಲರಿಗೂ ಅರ್ಥವಾಗಿದೆ. ಯಾಕೆಂದರೆ ಕೇವಲ ಉಚಿತ ಪಡಿತರ ವಸ್ತುಗಳನ್ನು ಪಡೆದುಕೊಳ್ಳಲು ಮಾತ್ರವಲ್ಲದೆ ಸರ್ಕಾರದ ಗ್ಯಾರಂಟಿ ಯೋಜನೆಯ (guarantee scheme) ಲಾಭ ಪಡೆದುಕೊಳ್ಳಲು ಕೂಡ ರೇಷನ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ.
ಹಿನ್ನೆಲೆಯಲ್ಲಿ ಕಳೆದ ಎರಡುವರೆ ವರ್ಷಗಳ ಹಿಂದೆ ರೇಷನ್ ಕಾರ್ಡ್ ಗಾಗಿ ಅರ್ಜಿ (Ration Card Application) ಸಲ್ಲಿಸಿದವರು ತಮಗೆ ರೇಷನ್ ಕಾರ್ಡ್ ವಿತರಣೆ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದರ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವರು ಸದ್ಯದಲ್ಲಿಯೇ ಹೊಸ ಪಡಿತರ ಚೀಟಿ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಣ ಎಲ್ಲರಿಗೂ ಜಮಾ ಆಗೋದು ಫಿಕ್ಸ್! ಹೊಸ ತಂತ್ರ ರೂಪಿಸಿದ ಸರ್ಕಾರ
ಅರ್ಜಿ ಪರಿಶೀಲನೆ!
ಸರ್ಕಾರಕ್ಕೆ ಒಟ್ಟು ಸಲ್ಲಿಕೆಯಾಗಿರುವ ಅರ್ಜಿಗಳು ಸುಮಾರು 2.96 ಲಕ್ಷದಷ್ಟು, ಇವುಗಳಲ್ಲಿ ಎಲ್ಲಾ ಅರ್ಜಿಗಳನ್ನು ಸರ್ಕಾರ ಪರಿಗಣಿಸುವುದಿಲ್ಲ.. ಹಾಗಾಗಿ ಸರಿಯಾದ ಪರಿಶೀಲನೆ ನಡೆಸಿ ನಂತರವಷ್ಟೇ ಹೊಸ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಈಗಾಗಲೇ ಸುಮಾರು 75% ನಷ್ಟು ಸಲ್ಲಿಕೆಯಾದ ಅರ್ಜಿಯ ಪರಿಶೀಲನೆ ನಡೆದಿದೆ. ಈ ಪರಿಶೀಲನೆ ಪೂರ್ಣಗೊಂಡ ನಂತರ ಪಡಿತರ ಚೀಟಿ ವಿತರಣೆ ಆರಂಭವಾಗುವುದು. ಸಚಿವರು ತಿಳಿಸಿರುವ ಮಾಹಿತಿಯ ಪ್ರಕಾರ ನವೆಂಬರ್ ಕೊನೆಯ ವಾರದಲ್ಲಿ ಹೊಸ ಪಡಿತರ ಚೀಟಿ ವಿತರಣೆ ಪ್ರಕ್ರಿಯೆ ಆರಂಭವಾಗುವುದು.
ಸರ್ಕಾರಿ ಭೂಮಿಯಲ್ಲಿ ಕೃಷಿ ಮಾಡುವವರಿಗೆ ಸಿಹಿಸುದ್ದಿ! ಇನ್ಮುಂದೆ ಆ ಜಮೀನು ನಿಮ್ಮದೇ
ಅರ್ಹತೆ ಇರುವವರಿಗೆ ಹೊಸ ಪಡಿತರ ಚೀಟಿ ಹೇಗೆ ಸಿಗುತ್ತದೆಯೋ ಹಾಗೆಯೇ ಅನಗತ್ಯವಾಗಿ ಪಡಿತರ ಚೀಟಿ ಹೊಂದಿರುವವರ ಪಡಿತರ ಚೀಟಿಯನ್ನು ರದ್ದು ಪಡಿಸಲಾಗುತ್ತದೆ (ration card cancellation). ಎಂಬುದನ್ನು ಕೂಡ ಆಹಾರ ಇಲಾಖೆ ಸ್ಪಷ್ಟಗೊಳಿಸಿದೆ.
ಸರ್ಕಾರ ತಿಳಿಸಿರುವ ಪ್ರಕಾರ ಸುಮಾರು ಮೂರು ಲಕ್ಷಕ್ಕೂ ಹೆಚ್ಚಿನ ಜನ ಪಡಿತರ ಚೀಟಿ ಹೊಂದಿದ್ದರು ಕೂಡ ಅದರ ಲಾಭ ಪಡೆದುಕೊಳ್ಳುತ್ತಿಲ್ಲ ಹಾಗಾಗಿ ಅಂತಹ ಪಡಿತರ ಚೀಟಿಯನ್ನು ರದ್ದು ಪಡಿಸಲು ಸರ್ಕಾರ ನಿರ್ಧರಿಸಿದೆ.
ಪಡಿತರ ಚೀಟಿ ಹೊಂದಿದ್ದರೆ ಅದರಲ್ಲೂ ಬಿಪಿಎಲ್ ಕಾರ್ಡ್ (BPL Card) ಇದ್ದರೆ ಉಚಿತ ಪಡಿತರ ವಸ್ತು ಪಡೆದುಕೊಳ್ಳುವುದು ಮಾತ್ರವಲ್ಲದೆ ಸರ್ಕಾರದ ಪ್ರತಿಯೊಂದು ಸೌಲಭ್ಯವನ್ನು ಕೂಡ ಪಡೆದುಕೊಳ್ಳಬಹುದು.
ಇನ್ಮುಂದೆ ಇಂತಹವರಿಗೆ ಉಚಿತ ವಿದ್ಯುತ್ ಸೌಲಭ್ಯ ಇಲ್ಲ, ಕಟ್ಟಲೇಬೇಕು ಪೂರ್ಣ ಬಿಲ್
ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಸಾಕಷ್ಟು ಅರ್ಜಿದಾರರು ಕಾಯುತ್ತಿದ್ದಾರೆ. ಆಹಾರ ಇಲಾಖೆ, ಗುಡ್ ನ್ಯೂಸ್ ನೀಡಿದ್ದು ಸದ್ಯದಲ್ಲಿ ಅರ್ಜಿದಾರರಿಗೆ ಪಡಿತರ ಚೀಟಿ ವಿತರಣೆ ಆಗಲಿದೆ. ಆದರೆ ಎಷ್ಟು ಅರ್ಜಿಗಳನ್ನ ಸರ್ಕಾರ ಪರಿಗಣಿಸಿ ಹೊಸ ಪಡಿತರ ಚೀಟಿ ವಿತರಣೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.
A new ration card will be available soon, Ration card applicants are happy