ಇನ್ಮುಂದೆ ಇಂತಹವರಿಗೆ ಉಚಿತ ವಿದ್ಯುತ್ ಸೌಲಭ್ಯ ಇಲ್ಲ, ಕಟ್ಟಲೇಬೇಕು ಪೂರ್ಣ ಬಿಲ್
ಉಚಿತ ವಿದ್ಯುತ್ (free electricity ) ನೀಡುವುದರ ಮೂಲಕ ರಾಜ್ಯ ಸರ್ಕಾರ (State government) ರಾಜ್ಯದ ಜನತೆಯ ಮನೆ ಮನ ಬೆಳಗುತ್ತಿದೆ ಎನ್ನಬಹುದು. ಯಾಕೆಂದರೆ ಈಗಾಗಲೇ ಲಕ್ಷಾಂತರ ಕುಟುಂಬಗಳು ಗೃಹಜ್ಯೋತಿ ಯೋಜನೆಯ (Gruha Jyothi scheme) ಅಡಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.
ಸರ್ಕಾರವೇನೋ ಉಚಿತ ವಿದ್ಯುತ್ ಕೊಡುತ್ತಿದೆ. ಆದರೆ ಸಾಕಷ್ಟು ಜನ ಬೆಸ್ಕಾಂ (BESCOM) ನಿಯಮ ಮೀರಿದ್ದು ಇಂಥವರ ಮನೆಯ ಪವರ್ ಕಟ್ ಮಾಡಲು ಸರ್ಕಾರ ನಿರ್ಧರಿಸಿದೆ.
ಕೊನೆಗೂ ಬಿಡುಗಡೆಯಾಯ್ತು ಗೃಹಲಕ್ಷ್ಮಿ ಯೋಜನೆ ಅರ್ಜಿ ಫಾರ್ಮ್! ಈ ದಾಖಲೆಗಳು ಕಡ್ಡಾಯ
ಈ ತಪ್ಪು ಮಾಡಿದ್ರೆ ಕೂಡಲೇ ಸರಿ ಮಾಡಿಕೊಳ್ಳಿ!
ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯ ಪ್ರಯೋಜನವನ್ನು ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಕೂಡ ನೀಡಿದ 200 ಯೂನಿಟ್ ಗಿಂತಲೂ ಕಡಿಮೆ ವಿದ್ಯುತ್ ಅನ್ನು ಪ್ರತಿ ತಿಂಗಳು ಯಾರು ಬಳಸುತ್ತಾರೋ ಅಂತವರಿಗೆ ವಿದ್ಯುತ್ ಬಿಲ್ ಸಂಪೂರ್ಣ ಉಚಿತವಾಗಿ (Free Electricity Bill) ಸಿಗಲಿದೆ. ಜುಲೈ ತಿಂಗಳಿನಿಂದ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆ ಅನುಷ್ಠಾನಕ್ಕೆ ಬಂದಿದೆ.
ಅನುಷ್ಠಾನಕ್ಕೆ ತರುವ ಮೊದಲು ರಾಜ್ಯ ಸರ್ಕಾರ ಒಂದು ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿತು, ಹಿಂದಿನ ಬಾಕಿ ಇರುವ ಬಿಲ್ ಅನ್ನು ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಪಾವತಿಸಲೇಬೇಕು. ಅದೇ ರೀತಿ ನಿಗದಿಯಾಗಿರುವ ಯೂನಿಟ್ ಗಿಂತಲೂ ಅಧಿಕ ಯೂನಿಟ್ (extra unit) ಬಳಸಿದರೆ ಆ ಹೆಚ್ಚುವರಿ ಯೂನಿಟ್ ಗೆ ಎಷ್ಟು ವಿದ್ಯುತ್ ಬಿಲ್ ಬರುತ್ತದೆಯೋ ಅದನ್ನು ಪಾವತಿಸಬೇಕು.
ಆದರೆ ಇಂದು ಲಕ್ಷಾಂತರ ಜನ ಈ ನಿಯಮಗಳನ್ನು ಮೀರಿ ಕರೆಂಟ್ ಬಿಲ್ ಕಟ್ಟುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹಳೆಯ ಬಾಕಿಯನ್ನು ಕಟ್ಟಿಲ್ಲ ಹೊಸದಾಗಿ ಹೆಚ್ಚುವರಿ ಯೂನಿಟ್ ಗೆ ಬಂದಿರುವ ಅಲ್ಪ ಹಣವನ್ನು ಬೆಸ್ಕಾಂ ಗೆ ಪಾವತಿ ಮಾಡಿಲ್ಲ. ರಾಜ್ಯ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು ಯಾರು ಈ ನಿಯಮ ಉಲ್ಲಂಘಿಸಿದ್ದಾರೆ, ಅಂತವರ ಮನೆಯ ಪವರ್ ಕಟ್ (power cut) ಮಾಡಲು ನಿರ್ಧರಿಸಿದೆ.
ಸಿಹಿಸುದ್ದಿ! ಗೃಹಜ್ಯೋತಿ ಉಚಿತ ವಿದ್ಯುತ್ ಬೆನ್ನಲ್ಲೇ ಸರ್ಕಾರದ ಮತ್ತೊಂದು ಯೋಜನೆ ಜಾರಿಗೆ
ಇನ್ನು ಹಳೆಯ ಬಾಕಿ ಪಾವತಿ ಮಾಡಿಲ್ಲ!
ಸಾಕಷ್ಟು ಕುಟುಂಬಗಳು ಇದುವರೆಗೆ ತಮ್ಮ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ, ರಾಜ್ಯದಲ್ಲಿ ಸುಮಾರು 10.55 ಲಕ್ಷ ಜನ ವಿದ್ಯುತ್ ಬಿಲ್ ಪಾವತಿ ಮಾಡುವುದಕ್ಕೆ ಬಾಕಿ ಇದೆ. ಬೆಸ್ಕಾಂ ಗೆ ಬರೋಬ್ಬರಿ 147 ಕೋಟಿ ರೂಪಾಯಿಗಳ ಹೊರೆಯಾಗಿದೆ.
ಈ ಕಾರಣಕ್ಕಾಗಿ ಬೆಸ್ಕಾಂ ಪ್ರತಿಯೊಬ್ಬರಿಗೂ ಸೂಚನೆ ನೀಡಿದ್ದು ಹಿಂದಿನ ಬಾಕಿ ಹಾಗೂ ಈಗ ಬರುತ್ತಿರುವ ಬಿಲ್ ಕೂಡ ಪಾವತಿ ಮಾಡಬೇಕು, ಒಂದು ವೇಳೆ ಯಾರು ಬಿಲ್ ಪಾವತಿ ಮಾಡದೆ ಹಾಗೆ ಉಳಿಸಿಕೊಳ್ಳುತ್ತಾರೋ ಅಂತವರ ಮನೆಯ ವಿದ್ಯುತ್ ಕನೆಕ್ಷನ್ (power disconnection) ಕತ್ತರಿಸಲು ನಿರ್ಧರಿಸಲಾಗಿದೆ.
10ನೇ ಕ್ಲಾಸ್ ಪಾಸ್ ಆದವರಿಗೆ ಉದ್ಯೋಗಾವಕಾಶ, 52 ಸಾವಿರ ಸಂಬಳ! ಈಗಲೇ ಅಪ್ಲೈ ಮಾಡಿ
ಸರ್ಕಾರ ಉಚಿತವಾಗಿ ವಿದ್ಯುತ್ ಒದಗಿಸುತ್ತಿದೆ, ನೀವು ಹೆಚ್ಚುವರಿ ಯೂನಿಟ್ ವಿದ್ಯುತ್ ಬಳಕೆ ಮಾಡಿದರೆ ಅದಕ್ಕೆ ಬರುವ ವೆಚ್ಚ ಕಡಿಮೆ, ಹಾಗಾಗಿ ಆ ಕಡಿಮೆ ವಿದ್ಯುತ್ ಬಿಲ್ ಅನ್ನು ಪಾವತಿಸುವುದು ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ. ಯಾರು ಈ ಜವಾಬ್ದಾರಿಯನ್ನ ಮರೆತು ವಿದ್ಯುತ್ ಬಿಲ್ ಪಾವತಿ ಮಾಡುವ ಗೋಜಿಗೆ ಹೋಗಿಲ್ಲವೋ ಅಂತವರು ಸದ್ಯದಲ್ಲಿಯೇ ಮನೆಗೆ ವಿದ್ಯುತ್ ಇಲ್ಲದೆ ಕತ್ತಲೆ ದಿನವನ್ನು ನೋಡಬೇಕಾಗಬಹುದು.
ಈ ಬಗ್ಗೆ ಬೆಸ್ಕಾಂ ಎಚ್ಚರಿಕೆ ನೀಡಿದ್ದು ಬಾಕಿ ಉಳಿದಿರುವ ಎಲ್ಲಾ ಬಿಲ್ ಅನ್ನು ತಕ್ಷಣವೇ ಪಾವತಿಸಬೇಕು ಎಂದು ಸೂಚನೆ ಹೊರಡಿಸಿದೆ. ಹಾಗಾಗಿ ಯಾರು ವಿದ್ಯುತ್ Bill ಉಳಿಸಿಕೊಂಡಿದ್ದೀರೋ, ತಕ್ಷಣವೇ ಹೋಗಿ ಪಾವತಿಸಿ ಬನ್ನಿ. ಇಲ್ಲವಾದರೆ ಸಿಗುವ ಉಚಿತ ವಿದ್ಯುತ್ ಸೌಲಭ್ಯ ಕಳೆದುಕೊಳ್ಳುವುದು ಮಾತ್ರವಲ್ಲದೆ ವಿದ್ಯುತ್ ಸಂಪರ್ಕವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು.
ಅನ್ನಭಾಗ್ಯ ಯೋಜನೆಯ ಅಕ್ಕಿಯೂ ಸಿಗೋಲ್ಲ, ಹಣವೂ ಸಿಗೋಲ್ಲ! ಅಷ್ಟಕ್ಕೂ ಏನಾಯ್ತು ಗೊತ್ತಾ?
There is no free electricity facility for such people, Government imposed fines