ಗೃಹಲಕ್ಷ್ಮಿ ಯೋಜನೆ (Gruha lakshmi scheme) ಅಡಿಯಲ್ಲಿ ಪ್ರತಿ ಕುಟುಂಬದ ಮನೆಯ ಯಜಮಾನಿಗೆ 2000ರೂ.ಗಳನ್ನು ಸರ್ಕಾರ ನೀಡುತ್ತಿದೆ. ಇದರಿಂದ ಅದೆಷ್ಟೋ ಕುಟುಂಬದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ (women empowerment) ಸಹಾಯಕವಾಗಲಿದೆ ಎನ್ನಬಹುದು.

ಯಾಕೆಂದರೆ ಬಡವರಿಗೆ 2,000 ಎನ್ನುವುದು ಕೂಡ ಬಹಳ ಮಹತ್ವದ ವಿಚಾರ, ಈ ಹಿನ್ನೆಲೆಯಲ್ಲಿ ಪ್ರತಿ ತಿಂಗಳು ಉಚಿತವಾಗಿ ಸಿಗುವ ಈ ಹಣ ಹಲವು ಮಹಿಳೆಯರ ಮುಖದಲ್ಲಿ ಮಂದಹಾಸ ಮೂಡಿಸಿದೆ.

Lakshmi Hebbalkar

ಸಿಹಿಸುದ್ದಿ! ಗೃಹಜ್ಯೋತಿ ಉಚಿತ ವಿದ್ಯುತ್ ಬೆನ್ನಲ್ಲೇ ಸರ್ಕಾರದ ಮತ್ತೊಂದು ಯೋಜನೆ ಜಾರಿಗೆ

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜುಲೈ ತಿಂಗಳಿನಿಂದಲೇ ಆರಂಭವಾಗಿತ್ತು. ಈಗಾಗಲೇ ಎರಡು ಕಂತಿನ ಹಣವನ್ನು ಕೂಡ ರಾಜ್ಯ ಸರ್ಕಾರ (State government) ಬಿಡುಗಡೆ ಮಾಡಿದೆ.

ಕೋಟ್ಯಂತರ ಜನ ಮಹಿಳೆಯರು ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ ಕೆಲವು ತಾಂತ್ರಿಕ ದೋಷಗಳಿಂದ (technical error) ಹಾಗೂ ಮಹಿಳೆಯರ ಖಾತೆಯಲ್ಲಿ (Bank Account) ಇರುವ ತೊಂದರೆಗಳಿಂದಾಗಿ ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ (Money Transfer) ಆಗಿಲ್ಲ.

ಮೂರನೇ ತಿಂಗಳಿನ ಹಣ ಬಿಡುಗಡೆ ಹೊತ್ತಿಗಾದರು ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗೆ 2,000ಗಳನ್ನು ಸರ್ಕಾರ ಜಮಾ ಮಾಡಲು ಯಶಸ್ವಿಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು.

10ನೇ ಕ್ಲಾಸ್ ಪಾಸ್ ಆದವರಿಗೆ ಉದ್ಯೋಗಾವಕಾಶ, 52 ಸಾವಿರ ಸಂಬಳ! ಈಗಲೇ ಅಪ್ಲೈ ಮಾಡಿ

ಹೊಸ ಅರ್ಜಿ ಸ್ವೀಕಾರ

Gruha Lakshmi Yojaneಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ರಾಜ್ಯದಲ್ಲಿ ಸುಮಾರು 1.14 ಕೋಟಿ ಮಹಿಳೆಯರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ ಇನ್ನೂ ಸಾಕಷ್ಟು ಮಹಿಳೆಯರು ಅರ್ಜಿ ಸಲ್ಲಿಸುವುದು ಬಾಕಿ ಇದೆ. ಕಳೆದ ಸಪ್ಟೆಂಬರ್ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಆಗುವವರೆಗೂ ಗೊಂದಲ ನಿವಾರಿಸುವ ಸಲುವಾಗಿ ತಾತ್ಕಾಲಿಕವಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು.

ಆದರೆ ಈಗ ಮತ್ತೆ ಯೋಜನೆಯ ಪ್ರಯೋಜನವನ್ನು ಮಾಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ (process) ಆರಂಭವಾಗಲಿದೆ.

ಅನ್ನಭಾಗ್ಯ ಯೋಜನೆಯ ಅಕ್ಕಿಯೂ ಸಿಗೋಲ್ಲ, ಹಣವೂ ಸಿಗೋಲ್ಲ! ಅಷ್ಟಕ್ಕೂ ಏನಾಯ್ತು ಗೊತ್ತಾ?

ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಮಹಿಳೆಯರು ಅಗತ್ಯ ಇರುವ ದಾಖಲೆಗಳೊಂದಿಗೆ ಆಫ್ಲೈನ್ (offline application) ಮೂಲಕ ಅರ್ಜಿ ಸಲ್ಲಿಸಬಹುದು, ಇದಕ್ಕಾಗಿ ಹತ್ತಿರದ ಅಂಗನವಾಡಿ ಶಿಕ್ಷಕಿಯರು ಅಥವಾ ಸಹಾಯಕಿಯರ ಬಳಿ ಅಥವಾ ಗ್ರಾಮ ಪಂಚಾಯತ್ ಗಳಲ್ಲಿ ಗೃಹಲಕ್ಷ್ಮಿ ಅರ್ಜಿ ಫಾರಂ (application form) ತೆಗೆದುಕೊಳ್ಳಬೇಕು.

ಬ್ಯಾಂಕ್ ಖಾತೆಯ ವಿವರ, (Bank Account Details) ಆಧಾರ್ ಕಾರ್ಡ್ (Aadhaar Card) ರೇಷನ್ ಕಾರ್ಡ್, ಆದಾಯ ಪ್ರಮಾಣ ಪತ್ರ ಮೊದಲಾದ ದಾಖಲೆಗಳ ಜೊತೆಗೆ ಅರ್ಜಿ ಫಾರಂ ಭರ್ತಿ ಮಾಡಿ ಅರ್ಜಿ ಸಲ್ಲಿಸಿ. ನೆನಪಿಡಿ, ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದು ಕಡ್ಡಾಯ.

Gruha Lakshmi Yojana application form has been released, These documents are mandatory