ಗೃಹಲಕ್ಷ್ಮಿ ಯೋಜನೆ ಹಣ ಎಲ್ಲರಿಗೂ ಜಮಾ ಆಗೋದು ಫಿಕ್ಸ್! ಹೊಸ ತಂತ್ರ ರೂಪಿಸಿದ ಸರ್ಕಾರ
ರಾಜ್ಯ ಸರ್ಕಾರ (State government) ಜಾರಿಗೆ ತಂದಿರುವ ಅತ್ಯುತ್ತಮ ಯೋಜನೆಗಲ್ಲಿ ಒಂದು ಗೃಹಲಕ್ಷ್ಮಿ ಯೋಜನೆ (Gruha lakshmi scheme). ಯಾಕೆಂದರೆ ರಾಜ್ಯದ ಲಕ್ಷಾಂತರ ಮಹಿಳೆಯರು ಪ್ರತಿ ತಿಂಗಳು 2000ರೂ.ಗಳನ್ನು ಉಚಿತವಾಗಿ ಈ ಯೋಜನೆಯ ಅಡಿಯಲ್ಲಿ ಪಡೆದುಕೊಳ್ಳುವಂತಾಗಿದೆ.
ಆದರೂ ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಣ ಸಂದಾಯವಾಗಿದೆಯಾ ಎಂದರೆ, ಇಲ್ಲ. ಇನ್ನು ಶೇಕಡ 30ರಷ್ಟು ಮಹಿಳೆಯರ ಖಾತೆಗೆ (Bank Account) ಹಣ ಸಂದಾಯ ಆಗಿಲ್ಲ. ಇದಕ್ಕೆ ಸರ್ಕಾರದ ತಾಂತ್ರಿಕ ದೋಷಗಳು (technical error) ಹಾಗೂ ಮಹಿಳೆಯರ ಖಾತೆಯಲ್ಲಿ ಇರುವ ಸಮಸ್ಯೆಗಳು ಕಾರಣ ಎಂದು ಸರ್ಕಾರ ಬಹಿರಂಗಪಡಿಸಿದೆ.
ಸರ್ಕಾರಿ ಭೂಮಿಯಲ್ಲಿ ಕೃಷಿ ಮಾಡುವವರಿಗೆ ಸಿಹಿಸುದ್ದಿ! ಇನ್ಮುಂದೆ ಆ ಜಮೀನು ನಿಮ್ಮದೇ
ಲಕ್ಷಾಂತರ ಮಹಿಳೆಯರು ಯೋಜನೆಯಿಂದ ವಂಚಿತರಾಗಿದ್ದಾರೆ!
ರಾಜ್ಯ ಸರ್ಕಾರ ಮೊದಲ ಕಂತಿನ ಹಣವನ್ನು ಸೆಪ್ಟೆಂಬರ್ (September) ತಿಂಗಳಿನಲ್ಲಿ ಬಿಡುಗಡೆ ಮಾಡಿತು, ಅಕ್ಟೋಬರ್ (October) ನಲ್ಲಿ ಎರಡನೇ ಕಂತಿನ ಹಣವು ಕೂಡ ಬಿಡುಗಡೆ ಆಗಿದೆ.
ಆದರೆ ಇದುವರೆಗೆ 12 ಲಕ್ಷ ಮಹಿಳೆಯರ ಖಾತೆಗೆ ಆಧಾರ್ ಲಿಂಕ್ (Aadhaar link) ಆಗಿಲ್ಲ. ಆಧಾರ್ ಲಿಂಕ್ ಮಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಈ ಕಾರಣಕ್ಕೆ ಸರ್ಕಾರ ಇಂತಹ ಮಹಿಳೆಯರಿಗೆ ಒಂದು ಗುಡ್ ನ್ಯೂಸ್ ನೀಡಿದೆ. ಇನ್ನು ಮುಂದೆ ಈ ಸಮಸ್ಯೆ ಇದ್ದರೂ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.
ಇನ್ಮುಂದೆ ಇಂತಹವರಿಗೆ ಉಚಿತ ವಿದ್ಯುತ್ ಸೌಲಭ್ಯ ಇಲ್ಲ, ಕಟ್ಟಲೇಬೇಕು ಪೂರ್ಣ ಬಿಲ್
ಆಧಾರ್ ಸೀಡಿಂಗ್ ಕಡ್ಡಾಯ ನಿಯಮದಿಂದ ವಿನಾಯಿತಿ! (Aadhaar link not mandatory)
ಹೌದು, ಇದು ಸರ್ಕಾರ ಮಹಿಳೆಯರಿಗೆ ನೀಡಿರುವ ಗುಡ್ ನ್ಯೂಸ್ ಆಗಿದೆ. 12 ಲಕ್ಷ ಮಹಿಳೆಯರು ರಾಜ್ಯದಲ್ಲಿ ತಮ್ಮ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಿಕೊಳ್ಳಲು ಈ ವರೆಗೆ ಸಾಧ್ಯವಾಗಿಲ್ಲ.
ಆದರೆ ಈ ಕಾರಣಕ್ಕೆ ಅಂತಹ ಮಹಿಳೆಯರ ಖಾತೆಗೆ ಹಣ ವರ್ಗಾವಣೆ (DBT) ಮಾಡದೇ ಇರುವುದು ಸರಿಯಲ್ಲ. ಬಹುತೇಕ 90% ನಷ್ಟು ಫಲಾನುಭವಿಗಳ ಖಾತೆಗೆ ಆಧಾರ್ ಲಿಂಕ್ ಆಗಿದೆ. ಇದೀಗ ಗೃಹಲಕ್ಷ್ಮಿ ಯೋಜನೆಯ 2000 ಪಡೆದುಕೊಳ್ಳಲು ವಂಚಿತರಾಗಿರುವ ಮಹಿಳೆಯರು ಆಧಾರ್ ಲಿಂಕ್ ಮಾಡಿಕೊಳ್ಳದೆ ಇದ್ದರೂ ಕೂಡ ಅಂಥವರ ಖಾತೆಗೆ ಹಣ ವರ್ಗಾವಣೆ (Money Transfer) ಮಾಡಲು ಸರ್ಕಾರ ನಿರ್ಧರಿಸಿದೆ.
ಕೊನೆಗೂ ಬಿಡುಗಡೆಯಾಯ್ತು ಗೃಹಲಕ್ಷ್ಮಿ ಯೋಜನೆ ಅರ್ಜಿ ಫಾರ್ಮ್! ಈ ದಾಖಲೆಗಳು ಕಡ್ಡಾಯ
ಮುಂದಿನ ತಿಂಗಳಿನಿಂದ ಪ್ರತಿಯೊಬ್ಬ ಮಹಿಳೆಯರ ಖಾತೆಗೂ ಹಣ ಫಿಕ್ಸ್!
ಈಗಾಗಲೇ ಎರಡು ಕಂತಿನ ಹಣ ಬಿಡುಗಡೆ ಆಗಿದೆ, ಆದರೆ ಲಕ್ಷಾಂತರ ಮಹಿಳೆಯರಿಗೆ ಈ ಹಣ ಲಭ್ಯವಾಗಿಲ್ಲ. ಇದರ ಹಿಂದೆ ಇರುವ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಸರ್ಕಾರ ಟೀಂ (team) ಸಿದ್ಧಪಡಿಸಿದ್ದು ಎಲ್ಲಾ ಮಹಿಳೆಯರಿಗೂ ಹಣ ಸಂದಾಯ ಆಗಲೇಬೇಕು ಎನ್ನುವ ಉದ್ದೇಶವನ್ನು ಈಡೇರಿಸಲು ಎಲ್ಲಾ ಉಪಕ್ರಮಗಳನ್ನು (initiative) ಕೈಗೊಂಡಿದೆ.
ಹಾಗಾಗಿ ಮುಂದಿನ ತಿಂಗಳಿನಿಂದ ಬ್ಯಾಂಕ್ ಖಾತೆಯ ಜೊತೆಗೆ ಆಧಾರ್ ಸೀಡಿಂಗ್ (Aadhar seeding) ಆಗದೇ ಇರುವ ಮಹಿಳೆಯರ ಖಾತೆಗೂ ಕೂಡ ಹಣ ವರ್ಗಾವಣೆ ಆಗಲಿದೆ.
ಅನ್ನಭಾಗ್ಯ ಯೋಜನೆಯ ಅಕ್ಕಿಯೂ ಸಿಗೋಲ್ಲ, ಹಣವೂ ಸಿಗೋಲ್ಲ! ಅಷ್ಟಕ್ಕೂ ಏನಾಯ್ತು ಗೊತ್ತಾ?
Gruha Lakshmi Yojana money is deposited for all, government new strategy
Our Whatsapp Channel is Live Now 👇