ಹಲವು ಕೃಷಿಕರಿಗೆ ತಮ್ಮದೇ ಆಗಿರುವ ಜಮೀನು (agriculture land) ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಕೃಷಿಕರು (farmers) ಸರ್ಕಾರಿ ಜಮೀನಿನಲ್ಲಿ (Government Land) ಉಳುಮೆ ಮಾಡುತ್ತಿರುತ್ತಾರೆ.
ಸರ್ಕಾರಿ ಜಮೀನಿನಲ್ಲಿ (government owned land) ಸಾಕಷ್ಟು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರು ಆ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಡುವಂತೆ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ನಡುವೆ ಅಕ್ರಮ ಸಕ್ರಮಗೊಳಿಸುವ ಕಾರ್ಯದ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ನಿರ್ಣಯವನ್ನು ಕೈಗೊಂಡಿದೆ
ಇನ್ಮುಂದೆ ಇಂತಹವರಿಗೆ ಉಚಿತ ವಿದ್ಯುತ್ ಸೌಲಭ್ಯ ಇಲ್ಲ, ಕಟ್ಟಲೇಬೇಕು ಪೂರ್ಣ ಬಿಲ್
ಸರ್ಕಾರಿ ಜಮೀನು ಅಕ್ರಮವಾಗಿದ್ದರೆ ಸಕ್ರಮಗೊಳಿಸಿಕೊಳ್ಳಲು ಸಾಧ್ಯವಿದೆ!
ಅಕ್ರಮ ಬಗೇರ್ ಹುಕುಂ ಯೋಜನೆ ಅಡಿಯಲ್ಲಿ ಸಾಗುವಳಿ ಭೂಮಿಯನ್ನು ಉಳುವವನಿಗೆ ಬಿಟ್ಟುಕೊಡಲು ರಾಜ್ಯ ಸರ್ಕಾರ (State government) ತೀರ್ಮಾನಿಸಿದೆ.
ಕೃಷಿ ಭೂಮಿಯನ್ನು ಅನಾದಿಕಾಲದಿಂದಲೂ ಅಕ್ರಮ ಸಕ್ರಮ ಸಾಗುವಳಿ ಭೂಮಿಯಾಗಿ ಪರಿವರ್ತಿಸುವುದು ಇದ್ದೇ ಇದೆ. ಹುಕುಂ ಸಾಗುವಳಿ ಭೂಮಿ ಯನ್ನು ರೈತರು ಅಕ್ರಮವಾಗಿ ಸಾಗುವಳಿ ಮಾಡಿಕೊಂಡಿದ್ದರೆ ಅಂತಹ ಭೂಮಿಯನ್ನು ಅದೇ ರೈತನಿಗೆ ಸಕ್ರಮಗೊಳಿಸಿಕೊಡಲು ಸರ್ಕಾರ ಯೋಜನೆಯನ್ನು ಜಾರಿಗೆ ತಂದಿದೆ.
ಹಲವು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ಆ ಜಮೀನಿನಲ್ಲಿ (Property) ಉಳುಮೆ ಮಾಡಲು ಅವಕಾಶವಿದೆ, ಹೊರತು ಆ ಜಮೀನು ಉಳುಮೆ ಮಾಡುವವನ ಹೆಸರಿಗೆ ಇರಲಿಲ್ಲ.
ಇದರಿಂದಾಗಿ ರೈತರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಹೊಸ ನಿರ್ಧಾರ ಕೈಗೊಂಡಿದ್ದು ಅಕ್ರಮವಾಗಿ (ಸ್ವಂತವಲ್ಲದ ಜಮೀನಿನಲ್ಲಿ ಉಳುಮೆ) ಉಳುಮೆ ಮಾಡುತ್ತಿರುವ ಜಮೀನುಗಳನ್ನು ರೈತರಿಗೆ ಸಕ್ರಮ ಪ್ರಮಾಣ ಪತ್ರದ ಮೂಲಕ ಬಿಟ್ಟುಕೊಡಲು ಸರ್ಕಾರ ನಿರ್ಧರಿಸಿದೆ.
ಕೊನೆಗೂ ಬಿಡುಗಡೆಯಾಯ್ತು ಗೃಹಲಕ್ಷ್ಮಿ ಯೋಜನೆ ಅರ್ಜಿ ಫಾರ್ಮ್! ಈ ದಾಖಲೆಗಳು ಕಡ್ಡಾಯ
ಯಾರಿಗೆ ಸಿಗಲಿದೆ ಸಕ್ರಮ ಪತ್ರ!
ಕೃಷಿ ಭೂಮಿಯನ್ನು ಕೃಷಿಕರಿಗೆ ಬಿಟ್ಟು ಕೊಡುವ ಬಗ್ಗೆ ಸಾಗುವಳಿ ಭೂಮಿ ಯೋಜನೆಯ ಅಡಿಯಲ್ಲಿ ಇಂದು ಸಾಕಷ್ಟು ರೈತರು ತಮ್ಮ ಸಾಗುವಳಿ ಜಮೀನಿನ (agriculture land) ಸಕ್ರಮ ಪತ್ರವನ್ನು ಪಡೆಯಲಿದ್ದಾರೆ.
ಸರ್ಕಾರಿ ಒಡೆತನದ ಭೂಮಿಯಲ್ಲಿ ಕಳೆದ 15 ವರ್ಷಗಳಿಂದ ಯಾರು ಉಳುಮೆ ಮಾಡಿಕೊಂಡು ಬರುತ್ತಿದ್ದಾರೋ ಅಂತವರಿಗೆ ಬಗೆರ್ ಹುಕುಂ ಯೋಜನೆಯ ಅಡಿಯಲ್ಲಿ ಆ ಜಾಗವನ್ನು ಅವರ ಹೆಸರಿಗೆ ಬರೆದು ಕೊಡಲಾಗುತ್ತದೆ.
ಸಿಹಿಸುದ್ದಿ! ಗೃಹಜ್ಯೋತಿ ಉಚಿತ ವಿದ್ಯುತ್ ಬೆನ್ನಲ್ಲೇ ಸರ್ಕಾರದ ಮತ್ತೊಂದು ಯೋಜನೆ ಜಾರಿಗೆ
ಆದರೆ ಈಗಾಗಲೇ ಅಕ್ರಮ ಸಕ್ರಮ ಜಮೀನಿನ ಸಲುವಾಗಿ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಸಾಕಷ್ಟು ಅರ್ಜಿಗಳನ್ನು ವಜಗೊಳಿಸಲಾಗಿದೆ. ಕಂದಾಯ ಇಲಾಖೆ ತನ್ನದೇ ಆಗಿರುವ ಅಪ್ಲಿಕೇಶನ್ ಹೊಂದಿದ್ದು ತಂತ್ರಜ್ಞಾನದ ಮೂಲಕ ನಿಜವಾಗಿ ಯಾರು ಸಾಗುವಳಿದಾರರು ಎಂಬುದನ್ನು ಗುರುತಿಸಿ ಅರ್ಹರಿಗೆ ಮಾತ್ರ ಅಕ್ರಮ ಸಕ್ರಮ ಪತ್ರ ವಿತರಣೆ ಮಾಡಲು ಕ್ರಮ ಕೈಗೊಂಡಿದೆ.
ಶೀಘ್ರದಲ್ಲಿಯೇ 15 ವರ್ಷಗಳ ಹಿಂದೆ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದ ರೈತರಿಗೆ ಆ ಜಮೀನು ಅವರದ್ದೇ ಆಗಲಿದೆ. ಅರ್ಹ ರೈತರಿಗೆ ಮಾತ್ರ ಈ ಸೌಲಭ್ಯ ದೊರೆಯಲಿದ್ದು ಸರ್ಕಾರ ಅರ್ಜಿಗಳನ್ನು (application) ಸರಿಯಾಗಿ ಪರಿಶೀಲಿಸಿ ನಂತರ ಅರ್ಹರ ಇತರ ಜಮೀನು ಪರಿಶೀಲನೆ (application verification) ಮಾಡಿ, 15 ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಈಗ ಅವರು ಸಾಗುವಳಿ ಮಾಡುತ್ತಿರುವ ಜಮೀನು ಬಿಟ್ಟುಕೊಡಲು ಮುಂದಾಗಿದೆ. ರಾಜ್ಯದ್ಯಂತ ಇರುವ ಸಾಕಷ್ಟು ರೈತರಿಗೆ ಇದು ಗುಡ್ ನ್ಯೂಸ್ ಆಗಿದ್ದು, ಸರ್ಕಾರಿ ಸಾಗುವಳಿ ಜಮೀನು ಇನ್ನು ಮುಂದೆ ಅವರದ್ದೇ ಆಗಲಿದೆ.
ಅನ್ನಭಾಗ್ಯ ಯೋಜನೆಯ ಅಕ್ಕಿಯೂ ಸಿಗೋಲ್ಲ, ಹಣವೂ ಸಿಗೋಲ್ಲ! ಅಷ್ಟಕ್ಕೂ ಏನಾಯ್ತು ಗೊತ್ತಾ?
Good news for farmers who Farming in government land, From now on that land is yours
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.