ಅನ್ನಭಾಗ್ಯ ಹಣ ಇನ್ನು ಜಮಾ ಆಗಿಲ್ವ, ತಕ್ಷಣ ಈ ಕೆಲಸ ಮಾಡಿ ಎಲ್ಲಾ ಕಂತಿನ ಹಣ ಬರುತ್ತೆ

ಗರೀಬ್ ಕಲ್ಯಾಣ ಯೋಜನೆಯ (Garib Kalyan Yojana) ಅಡಿಯಲ್ಲಿ ಕೇಂದ್ರ ಸರ್ಕಾರ ಪ್ರತಿಯೊಂದು ರಾಜ್ಯದಲ್ಲಿಯೂ ಫಲಾನುಭವಿ ಜನರಿಗೆ ರೇಷನ್ ಕಾರ್ಡ್ (Ration Card)  ವಿತರಣೆ (ration card distribution) ಮಾಡಿದೆ

ಅನ್ನಭಾಗ್ಯ ಯೋಜನೆ (Annabhagya Yojana), ಕರ್ನಾಟಕ ರಾಜ್ಯ ಸರ್ಕಾರದ ಮಹತ್ವದ ಹಾಗೂ ಮಹತ್ವಾಕಾಂಕ್ಷಿ ಯೋಜನೆಯಾಗಿದೆ, ಗರೀಬ್ ಕಲ್ಯಾಣ ಯೋಜನೆಯ (Garib Kalyan Yojana) ಅಡಿಯಲ್ಲಿ ಕೇಂದ್ರ ಸರ್ಕಾರ ಪ್ರತಿಯೊಂದು ರಾಜ್ಯದಲ್ಲಿಯೂ ಫಲಾನುಭವಿ ಜನರಿಗೆ ರೇಷನ್ ಕಾರ್ಡ್ (Ration Card)  ವಿತರಣೆ (ration card distribution) ಮಾಡಿದೆ

ಈ ಮೂಲಕ ಸಾಕಷ್ಟು ಜನ ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಪಡಿತರ ವಿತರಣೆ ಮಾಡಲಾಗುತ್ತಿದೆ, ಅದರಲ್ಲೂ ಕಳೆದ ಎರಡು ವರ್ಷಗಳಿಂದ ಕೇಂದ್ರ ಸರ್ಕಾರ ಪ್ರತಿ ರಾಜ್ಯಕ್ಕೂ ಐದು ಕೆಜಿ ಅಕ್ಕಿಯನ್ನು ಪ್ರತಿ ಫಲಾನುಭವಿ ಕುಟುಂಬಕ್ಕೆ ಉಚಿತವಾಗಿ ನೀಡುತ್ತಾ ಬಂದಿದೆ.

ಶೀಘ್ರದಲ್ಲೇ ಸಿಗಲಿದೆ ಹೊಸ ಪಡಿತರ ಚೀಟಿ; ರೇಷನ್ ಕಾರ್ಡ್ ಅರ್ಜಿದಾರರು ಫುಲ್ ಖುಷ್

ಅನ್ನಭಾಗ್ಯ ಹಣ ಇನ್ನು ಜಮಾ ಆಗಿಲ್ವ, ತಕ್ಷಣ ಈ ಕೆಲಸ ಮಾಡಿ ಎಲ್ಲಾ ಕಂತಿನ ಹಣ ಬರುತ್ತೆ - Kannada News

ಅಕ್ಕಿಯ ಬದಲು ಹಣ ನೀಡುವ ರಾಜ್ಯ ಸರ್ಕಾರ!

ಕೇಂದ್ರ ಸರ್ಕಾರ ಉಚಿತವಾಗಿ ಅಕ್ಕಿ (free rice ) ನೀಡುತ್ತಿರುವಂತೆಯೇ ರಾಜ್ಯ ಸರ್ಕಾರವು ಕೂಡ ಉಚಿತ ಐದು ಕೆಜಿ ಅಕ್ಕಿಯನ್ನು ನೀಡುವ ಭರವಸೆ ನೀಡಿತ್ತು, ಆದರೆ ಇದನ್ನು ಈಡೇರಿಸಲು ಸಾಧ್ಯವಾಗಿಲ್ಲ. ಈ ಕಾರಣದಿಂದ ಅಕ್ಕಿ ಒದಗಿಸುವ ವರೆಗೆ ಪ್ರತಿ ಒಂದು ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ 5 ಕೆಜಿ ಅಕ್ಕಿಗೆ 170ಗಳನ್ನು ಫಲಾನುಭವಿ ಕುಟುಂಬದ ಯಜಮಾನನ ಖಾತೆಗೆ (Bank Account) ವರ್ಗಾವಣೆ (DBT)ಮಾಡುವುದಾಗಿ ಸರ್ಕಾರ ತಿಳಿಸಿತ್ತು. ಅದರಂತೆ ಕಳೆದ ಜುಲೈ ತಿಂಗಳಿನಿಂದ ಸೆಪ್ಟೆಂಬರ್ ವರೆಗೆ ಮೂರು ಕಂತಿನ ಹಣ ಫಲಾನುಭವಿ ಖಾತೆಗೆ ಬಿಡುಗಡೆ ಆಗಿದೆ.

ಇನ್ಮುಂದೆ ರೈತರ ಬಳಿ ಈ ಕಾರ್ಡ್ ಇಲ್ಲದಿದ್ದರೆ ಯಾವುದೇ ಬೆನಿಫಿಟ್ ಸಿಗೋಲ್ಲ! ಮೊದಲು ಕಾರ್ಡ್ ಮಾಡಿಸಿಕೊಳ್ಳಿ

ಇನ್ನೂ ಬಂದಿಲ್ಲ ಹಣ!

ಸಾಕಷ್ಟು ಬಿಪಿಎಲ್ ಕಾರ್ಡ್ (BPL card) ಹೊಂದಿರುವವರು ತಮಗೆ ಇನ್ನೂ ಅನ್ನ ಭಾಗ್ಯ ಯೋಜನೆಯ ಒಂದು ಕಂತಿನ ಹಣವು ಬಂದಿಲ್ಲ ಎಂದು ದೂರುತ್ತಿದ್ದಾರೆ, ಇದಕ್ಕೆ ಮುಖ್ಯವಾಗಿ ಇರುವ ಕಾರಣ ಫಲಾನುಭವಿ ವ್ಯಕ್ತಿಯ ಕುಟುಂಬದ ಸದಸ್ಯರ ಕೆವೈಸಿ (KYC) ಆಗದೇ ಇರುವುದು ಹಾಗೂ ಯಜಮಾನನ ಬ್ಯಾಂಕ್ ಖಾತೆಯ (Bank account) ವಿವರ ಸರಿಯಾಗಿದ್ದು ಆಧಾರ್ ಕಾರ್ಡ್ ಲಿಂಕ್ ಕೂಡ ಆಗಿರಬೇಕು.

ಪ್ರತಿಯೊಬ್ಬರಿಗೂ ಹಣ ಸಂದಾಯವಾಗುತ್ತೆ!

Annabhagya Schemeಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ (K. H muniyappa) ಅವರು ಹೇಳಿರುವಂತೆ ಯಾರ ಖಾತೆಯಲ್ಲಿ ಯಾವ ಸಮಸ್ಯೆಯೂ ಇಲ್ಲವೋ ಅಂತವರಿಗೆ ತಪ್ಪದೆ ಹಣ ವರ್ಗಾವಣೆ ಆಗಿದೆ.

ಆದರೆ ಕೆಲವರು ಇನ್ನೂ ತಮ್ಮ ಖಾತೆಯನ್ನು ಆಧಾರ್ ನೊಂದಿಗೆ ಲಿಂಕ್ (Aadhaar link) ಮಾಡಿಕೊಂಡಿಲ್ಲ ಹಾಗೂ ಯಜಮಾನನ ಹೆಸರಿನಲ್ಲಿ ಖಾತೆ ಇಲ್ಲ ಈ ಕಾರಣಗಳಿಂದಾಗಿ ಹಣ ವರ್ಗಾವಣೆ ಆಗುತ್ತಿಲ್ಲ. ಹಾಗಾಗಿ ಈ ಎಲ್ಲ ಸಮಸ್ಯೆಗಳು ಪರಿಹಾರವಾದರೆ ಅಂಥವರ ಖಾತೆಗೆ ತಕ್ಷಣವೇ ಹಣ ವರ್ಗಾವಣೆ ಆಗುವುದು ಎಂದು ಸಚಿವರು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಹಣ ಎಲ್ಲರಿಗೂ ಜಮಾ ಆಗೋದು ಫಿಕ್ಸ್! ಹೊಸ ತಂತ್ರ ರೂಪಿಸಿದ ಸರ್ಕಾರ

ತಕ್ಷಣವೇ ಈ ಕೆಲಸ ಮಾಡಿ!

ಅನ್ನಭಾಗ್ಯ ಯೋಜನೆಯ ಹಣ ಬಾರದೆ ಇರುವುದಕ್ಕೆ ಪ್ರಮುಖ ಮನೆಯ ಯಜಮಾನ ಹೆಸರಿನಲ್ಲಿ ಬ್ಯಾಂಕ್ ಖಾತೆ ಇಲ್ಲದೆ ಇರುವುದು, ಹಳ್ಳಿ ಪ್ರದೇಶಗಳಲ್ಲಿ ಸಾಕಷ್ಟು ಜನ ಬ್ಯಾಂಕ್ ಖಾತೆ ಹೊಂದಿಲ್ಲ ಅಥವಾ ಬ್ಯಾಂಕ್ ಖಾತೆ ಹೊಂದಿದ್ದರು ಅದಕ್ಕೆ ಆಧಾರ್ ಸೀಡಿಂಗ್ ಆಗಿಲ್ಲ. ಇದನ್ನ ನೀವು ಮಾಡಿಸಿಕೊಂಡರೆ ನಿಮ್ಮ ಖಾತೆಗೂ ತಕ್ಷಣ ಹಣ ಬರುತ್ತದೆ.

ಅದೇ ರೀತಿ ಬಿಪಿಎಲ್ ಕಾರ್ಡ್ ನಲ್ಲಿ ಯಾವುದೇ ತಪ್ಪಾದ ಮಾಹಿತಿ ಇದ್ದರೂ ಕೂಡ ಅಂತವರಿಗೆ ಬರುವುದಿಲ್ಲ, ಹಾಗಾಗಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಅಗತ್ಯ ಇರುವ ತಿದ್ದುಪಡಿಯನ್ನು ಕೂಡ ಮಾಡಿಕೊಳ್ಳಬೇಕು

ಖಾತೆಯ ವಿವರ ಸರಿಯಾಗಿ ಇದ್ದರೆ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರ ಖಾತೆಗೂ ಹಣ ವರ್ಗಾವಣೆ ಮಾಡುವ ಭರವಸೆಯನ್ನು ಕೆ.ಎಚ್ ಮುನಿಯಪ್ಪ ನೀಡಿದ್ದಾರೆ.

ಸರ್ಕಾರಿ ಭೂಮಿಯಲ್ಲಿ ಕೃಷಿ ಮಾಡುವವರಿಗೆ ಸಿಹಿಸುದ್ದಿ! ಇನ್ಮುಂದೆ ಆ ಜಮೀನು ನಿಮ್ಮದೇ

Immediately do this work and Get all the installments of Annabhagya Yojana money

Follow us On

FaceBook Google News

Immediately do this work and Get all the installments of Annabhagya Yojana money