ಇಷ್ಟು ದಿನ ಗೃಹಲಕ್ಷ್ಮಿ ಹಣ ಬಾರದವರಿಗೂ ಹಣ ವರ್ಗಾವಣೆ ಆಗಿದೆ, ಕೂಡಲೇ ಚೆಕ್ ಮಾಡಿಕೊಳ್ಳಿ
Gruha Lakshmi money : ನಿನ್ನೆ ಅಂದರೆ ನವೆಂಬರ್ 7.2023 ರಂದು ಸಾಕಷ್ಟು ಮಹಿಳೆಯರಿಗೆ ಎರಡು ಕಂತಿನ ಗೃಹಲಕ್ಷ್ಮಿ ಹಣ ಒಟ್ಟಿಗೆ ಜಮಾ ಆಗಿರುವುದು ಸಂತಸ ತಂದಿದೆ.
Gruha Lakshmi money : ಉಚಿತವಾಗಿ ಪ್ರತಿ ತಿಂಗಳು 2000 ತಮ್ಮ ಖಾತೆಗೂ (Bank Account) ಜಮಾ ಆಗಬೇಕು ಎನ್ನುವುದು ಪ್ರತಿಯೊಬ್ಬ ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಅರ್ಜಿದಾರ ಮಹಿಳೆಯರ ಹಂಬಲ.
ಆದರೆ ದುರದೃಷ್ಟವಶಾತ್ ಅರ್ಜಿ ಸಲ್ಲಿಸಿದ ಎಲ್ಲಾ ಮಹಿಳೆಯರಿಗೆ ಇದುವರೆಗೆ ಕನಿಷ್ಠ ಒಂದು ಕಂತಿನ ಹಣವು ಕೂಡ ಬಿಡುಗಡೆ ಆಗಿಲ್ಲ. ಇದಕ್ಕೆ ಸರ್ಕಾರ ಸಾಕಷ್ಟು ಕಾರಣಗಳನ್ನು ಕೂಡ ತಿಳಿಸಿದೆ ಹಾಗೂ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮುಂದಿನ ತಿಂಗಳಿನಿಂದ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವುದಾಗಿ ಭರವಸೆ ನೀಡಿದೆ.
ಗೃಹಜ್ಯೋತಿ ಯೋಜನೆ ಫ್ರೀ ಕರೆಂಟ್ ಜೊತೆಗೆ ಇಂಥವರಿಗೆ ಸಿಗಲಿದೆ ಎಕ್ಸ್ಟ್ರಾ ಬೆನಿಫಿಟ್
ಯಾಕೆ ಹಣ ಜಮಾ ಆಗುತ್ತಿಲ್ಲ ಗೊತ್ತಾ?
ಶೇಕಡಾ 70 ರಿಂದ 75% ನಷ್ಟು ಮಹಿಳೆಯರ ಖಾತೆಗೆ ಹಣ ಜಮಾ ಆಗಿದ್ದರು ಕೂಡ ಇನ್ನೂ ಸುಮಾರು 30% ನಷ್ಟು ಜನರಿಗೆ ಹಣ ವರ್ಗಾವಣೆ (DBT) ಆಗುವುದು ಬಾಕಿ ಇದೆ. ಮೊದಲನೇದಾಗಿ ಎರಡನೇ ಕಂತಿನ ಹಣ (second installment) ಈಗಾಗಲೇ ಬಿಡುಗಡೆ ಆಗಿತ್ತು ಈ ಹಣ ಮಹಿಳೆಯರ ಖಾತೆಗೆ ಜಮಾ ಆಗಲು ನವೆಂಬರ್ ವರೆಗೂ ಸಮಯ ಇದೆ
ಆದರೆ ಸರ್ಕಾರದ ಕಡೆಯಿಂದ ಆಗಿರುವ ಕೆಲವು ತಾಂತ್ರಿಕ ಸಮಸ್ಯೆಗಳು (technical error) ಮಹಿಳೆಯರ ಖಾತೆಗೆ ಹಣ ಜಮಾ ಆಗುವುದನ್ನು ತಡೆ ಹಿಡಿದಿವೆ. ಇದರ ಜೊತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಯಾವೆಲ್ಲ ನಿಯಮಗಳನ್ನು ಅನುಸರಿಸಬೇಕಿತ್ತೋ ಅವುಗಳನ್ನು ಅನುಸರಿಸದೇ, ಸರಿಯಾದ ದಾಖಲೆಗಳನ್ನು ನೀಡದೆ ಲಕ್ಷಾಂತರ ಮಹಿಳೆಯರು ಇನ್ನೂ ತಮ್ಮ ಖಾತೆಗೆ ಹಣ ಬಂದಿಲ್ಲ (Money Transfer) ಎಂದು ಹಲವತ್ತುಕೊಳ್ಳುತ್ತಿದ್ದಾರೆ.
ಮಹಿಳೆಯರು ರೇಷನ್ ಕಾರ್ಡ್ (Ration Card) ನಲ್ಲಿ ತಮ್ಮ ಹೆಸರನ್ನು ಮೊದಲಿಗೆ ಸೇರಿಸಬೇಕು ಅಂದರೆ ರೇಷನ್ ಕಾರ್ಡ್ ಮನೆಯ ಯಜಮಾನಿಯ ಹೆಸರಿನಲ್ಲಿಯೇ ಇರಬೇಕು. ಅದೇ ರೀತಿ ಯಜಮಾನಿ ಬ್ಯಾಂಕ್ ಖಾತೆಗೆ ಅವರ ಆಧಾರ್ ಸಂಖ್ಯೆ ಲಿಂಕ್ (Aadhaar link) ಆಗಿರಬೇಕು. ಕೆವೈಸಿ (KYC) ಆಗಿರುವುದು ಕಡ್ಡಾಯವಾಗಿದೆ ಈ ಯಾವ ಕೆಲಸವು ಆಗದೇ ಇದ್ದರೆ ಅಂತವರ ಖಾತೆಗೆ ಹಣ ಜಮಾ ಆಗುವುದಿಲ್ಲ.
ಅನ್ನಭಾಗ್ಯ ಹಣ ಇನ್ನು ಜಮಾ ಆಗಿಲ್ವ, ತಕ್ಷಣ ಈ ಕೆಲಸ ಮಾಡಿ ಎಲ್ಲಾ ಕಂತಿನ ಹಣ ಬರುತ್ತೆ
ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವವರೆಗೂ ಹಣ ವರ್ಗಾವಣೆ!
ಸರ್ಕಾರ ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು ಪ್ರತಿಯೊಬ್ಬರಿಗೂ ಹಣ ಜಮಾ ಆಗಬೇಕು ಎನ್ನುವ ಕಾರಣಕ್ಕೆ ಯಾವ ಮಹಿಳೆಯರ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲವೋ ಅಂತವರ ಖಾತೆಗೂ ಕೂಡ ಹಣ ಜಮಾ ಮಾಡಲು ನಿರ್ಧರಿಸಿದೆ.
ಹೌದು ರಾಜ್ಯದಲ್ಲಿ ಸುಮಾರು 12 ಲಕ್ಷ ಮಹಿಳೆಯರ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಆದರೆ ಇಷ್ಟೊಂದು ಜನರಿಗೆ 2000 ಪ್ರತಿ ತಿಂಗಳು ಜಮಾ ಆಗದೇ ಇದ್ದರೆ ಸರ್ಕಾರದ ಯೋಜನೆ ಪೂರ್ಣಗೊಳ್ಳುವುದಿಲ್ಲ.
ಶೀಘ್ರದಲ್ಲೇ ಸಿಗಲಿದೆ ಹೊಸ ಪಡಿತರ ಚೀಟಿ; ರೇಷನ್ ಕಾರ್ಡ್ ಅರ್ಜಿದಾರರು ಫುಲ್ ಖುಷ್
ಹೀಗಾಗಿ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗದೆ ಇದ್ದರೂ ಕೂಡ ಅಂತ ಮಹಿಳೆಯರ ಖಾತೆಗೆ (Bank Account) ಹಣ ವರ್ಗಾವಣೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಈಗಾಗಲೇ ಹಲವರಿಗೆ ಹಣ ವರ್ಗಾವಣೆ ಆಗಿದೆ
ಅದರಲ್ಲೂ ನಿನ್ನೆ ಅಂದರೆ ನವೆಂಬರ್ 7.2023 ರಂದು ಸಾಕಷ್ಟು ಮಹಿಳೆಯರಿಗೆ ಎರಡು ಕಂತಿನ ಹಣ ಒಟ್ಟಿಗೆ ಜಮಾ ಆಗಿರುವುದು ಸಂತಸ ತಂದಿದೆ. ಅಂದರೆ ಇಷ್ಟು ದಿನ ಹಣ ಬಂದಿಲ್ಲ ಎನ್ನುತ್ತಿದ್ದ ಬಹುತೇಕ ಮಹಿಳೆಯರಿಗೆ ಇತ್ತೀಚಿಗೆ ಹಣ ಜಮಾ ಆಗಿದೆ, ನಮಗೆ ಬಂದಿರಬಹುದು, ಯಾವುದಕ್ಕೂ ಒಮ್ಮೆ ಚೆಕ್ ಮಾಡಿ.
ಒಟ್ಟಿನಲ್ಲಿ ಬಹುತೇಕ ಮುಂದಿನ ತಿಂಗಳಿನಿಂದ ಬಿಡುಗಡೆಯಾಗುವ ಗೃಹಲಕ್ಷ್ಮಿ ಹಣ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ ತಲುಪುವುದು ಖಚಿತವಾಗಿದೆ.
Gruha Lakshmi money has been transferred to those who have not received for so long, check immediately