Karnataka NewsBangalore News

ನಿಮ್ಮ ಮನೆ, ಜಮೀನು ನಿಮ್ಮ ಹೆಸರಿನಲ್ಲೇ ಇದ್ಯಾ? ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಿ!

ನೀವು ಕೃಷಿ ಮಾಡುತ್ತಿದ್ದರೆ ಅಥವಾ ಕೃಷಿ ಭೂಮಿಯನ್ನು ಖರೀದಿ (agriculture land) ಮಾಡಲು ಬಯಸಿದರೆ ಆ ಭೂಮಿಯ (Land) ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಯಾರ ಹೆಸರಿನಲ್ಲಿ ಜಮೀನು (Property) ಇದೆ ಈ ಹಿಂದೆ ಯಾರ ಹೆಸರಿನಲ್ಲಿ ಇತ್ತು ಎನ್ನುವ ಬಗ್ಗೆ ತಿಳಿದುಕೊಂಡರೆ ನಿಮಗೆ ಹೆಚ್ಚಿನ ಅನುಕೂಲವಾಗುತ್ತದೆ

ನಿಮ್ಮ ಅಕ್ಕ ಪಕ್ಕದ ಜಮೀನು ಯಾರ ಹೆಸರಿನಲ್ಲಿ ಇದೆ ಅಥವಾ ನಿಮ್ಮ ಬಳಿ ಇರುವ ಜಮೀನು ಯಾರ ಹೆಸರಿನಲ್ಲಿ ಇತ್ತು, ಅದನ್ನ ಯಾರ ಹೆಸರಿಗೆ ವರ್ಗಾಯಿಸಲಾಗಿದೆ ಎನ್ನುವ ಮಾಹಿತಿಯನ್ನು ನೀವು ಈಗ ಮೊಬೈಲ್ ಮೂಲಕವೇ ತಿಳಿದುಕೊಳ್ಳಬಹುದು. ನಿಮ್ಮ ಜಮೀನಿಗೆ ಮ್ಯುಟೇಷನ್ (land mutation) ಆಗಿದೆಯಾ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ

How much is your Property land, house or site currently worth

ಗೃಹಲಕ್ಷ್ಮಿ ಯೋಜನೆ ಅಪ್ಡೇಟ್; 8ನೇ ಕಂತಿನ ಹಣ ಬಿಡುಗಡೆ ಬಗ್ಗೆ ಇಲ್ಲಿದೆ ಮಾಹಿತಿ

ಜಮೀನಿನ ಮ್ಯುಟೇಷನ್ ವಿವರವನ್ನು ಮೊಬೈಲ್ ಮೂಲಕವೇ ತಿಳಿಯಬಹುದು ಗೊತ್ತಾ?

ಈ ಹಿಂದೆ ಜಮೀನಿಗೆ ಸಂಬಂಧಪಟ್ಟ ಯಾವುದೇ ದಾಖಲೆಗಳನ್ನು (Property Documents) ಪಡೆದುಕೊಳ್ಳುವುದಕ್ಕೆ ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಿತ್ತು. ಎಷ್ಟೋ ಸಲ ರೈತರು ತಮ್ಮದೇ ಜಮೀನಿನ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಬೆಳಿಗ್ಗೆಯಿಂದ ಸಂಜೆಯವರೆಗೂ ಕಚೇರಿಯಲ್ಲಿ ಕುಳಿತು ಸಮಯ ವ್ಯರ್ಥ ಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು.

ಆದರೆ ಇನ್ನೂ ಮುಂದೆ ಆಗಿಲ್ಲ, ನಿಮ್ಮ ಜಮೀನು ಯಾರ ಹೆಸರಿನಲ್ಲಿ ಇದೆ? ಯಾರ ಹೆಸರಿಗೆ ವರ್ಗಾವಣೆ ಆಗಿದೆ? ಮೊದಲಾದ ಮ್ಯುಟೇಶನ್ ಮಾಹಿತಿಗಳನ್ನು ಆನ್ಲೈನ್ ಮೂಲಕವೇ ತಿಳಿದುಕೊಳ್ಳಬಹುದು. ನೀವು ಯಾವುದೇ ಸರ್ಕಾರಿ ಕಚೇರಿಯ ಮುಂದೆ ಹೋಗಿ ನಿಮ್ಮ ಹಣ ಮತ್ತು ಸಮಯ ಎರಡನ್ನು ವ್ಯರ್ಥ ಮಾಡಿಕೊಳ್ಳುವ ಅಗತ್ಯ ಇಲ್ಲ ಎಂದು ಕಂದಾಯ ಇಲಾಖೆಯ ಸಚಿವ ಕೃಷ್ಣಭೈರೇಗೌಡ (revenue minister Krishna bairagowda) ತಿಳಿಸಿದ್ದಾರೆ.

ರೇಷನ್ ಕಾರ್ಡ್ ಅರ್ಜಿಗೆ ಈ ದಾಖಲೆಗಳು ಕಡ್ಡಾಯ; ಕೆಲವೇ ದಿನಗಳು ಮಾತ್ರ ಅವಕಾಶ

property documentsಆನ್ಲೈನಲ್ಲಿ ಭೂಮಿ ಹೆಸರು ವರ್ಗಾವಣೆ ಬಗ್ಗೆ ತಿಳಿದುಕೊಳ್ಳುವುದು ಹೇಗೆ? (Check your land details in online)

https://landrecords.karnataka.gov.in/Service11/MR_MutationExtract.aspx ಆನ್ಲೈನ್ ನಲ್ಲಿ ಭೂಮಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇದು ಸರ್ಕಾರದ ಅಧಿಕೃತ ಭೂಮಿ ವೆಬ್ಸೈಟ್ ಆಗಿದ್ದು ಇರಲಿ ಮ್ಯುಟೇಷನ್ ವಿವರ ಎಂದು ಆಯ್ಕೆ ಮಾಡಿ. ನಂತರ ನಿಮ್ಮ ಜಿಲ್ಲೆ, ಹಳ್ಳಿ ಮೊದಲಾದ ವಿಷಯಗಳನ್ನು ಭರ್ತಿ ಮಾಡಿದ್ರೆ ಸರ್ವೇ ನಂಬರ್ ಹಾಕಿ ಜಮೀನಿನ ಬಗ್ಗೆ ಮಾಹಿತಿ ಪಡೆಯಬಹುದು.

ಇದರಲ್ಲಿ ಮ್ಯೂಟೇಷನ್ ಬಗ್ಗೆ ಮಾತ್ರವಲ್ಲದೆ, ಯಾರ ಹೆಸರಿನಲ್ಲಿ ಯಾವಾಗ ಜಮೀನು ವರ್ಗಾವಣೆ ಆಗಿದೆ ತಹಶೀಲ್ದಾರರು ಯಾವಾಗ ಅನುಮೋದನೆಯ ನೀಡಿದ್ದಾರೆ ಎನ್ನುವ ವಿವರಗಳು ಕೂಡ ನಿಮಗೆ ಸಿಗುತ್ತದೆ.

ಆರ್‌ಟಿಇ ಅಡಿ ನಿಮ್ಮ ಮಕ್ಕಳನ್ನು ಉಚಿತವಾಗಿ ಖಾಸಗಿ ಶಾಲೆಗೆ ಸೇರಿಸಿ! ಇಲ್ಲಿದೆ ಮಾಹಿತಿ

ಎಷ್ಟೋ ಬಾರಿ ಬಹಳ ವಿಸ್ತಾರವಾದ ಜಮೀನು ಹೊಂದಿರುವ ರೈತರಿಗೆ ಅವರ ಜಮೀನಿನ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಯಾಕೆಂದರೆ ಬಹಳ ಹಳೆಯದಾಗಿರುವ ಅಥವಾ ಪಿತ್ರಾರ್ಜಿತ ಆಸ್ತಿ ಆಗಿದ್ದರೆ ಅದಕ್ಕೆ ಸಂಬಂಧಪಟ್ಟ ದಾಖಲಾತಿಗಳಾಗಲಿ ಕಾಗದಪತ್ರಗಳಾಗಲಿ ಇರುವುದಿಲ್ಲ.

ಇಂತಹ ಸಂದರ್ಭದಲ್ಲಿ ಯಾರಾದರೂ ನಿಮ್ಮ ಜಮೀನನ್ನು ದುರುಪಯೋಗಪಡಿಸಿಕೊಂಡಿರಬಹುದು ಅಥವಾ ನಿಮಗೆ ಗೊತ್ತಿಲ್ಲದೆ ನಿಮ್ಮ ಜಮೀನು ಬೇರೆಯವರ ಹೆಸರಿಗೆ ವರ್ಗಾವಣೆ ಆಗಿರಬಹುದು. ಇಂತಹ ವಂಚನೆ ನಿಮ್ಮ ಜಮೀನಿಗೆ ಸಂಬಂಧಪಟ್ಟ ಹಾಗೆ ನಡೆದಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಭೂಮಿ ದಾಖಲೆಗಳನ್ನು ಪಡೆದುಕೊಳ್ಳುವುದು ಬಹಳ ಮುಖ್ಯ.

ಅಂತೂ ಆನ್ಲೈನ್ ನಲ್ಲಿ ಈ ಸೇವೆ ಲಭ್ಯವಿದ್ದು ಇನ್ನು ಮುಂದೆ ಕ್ಷಣಮಾತ್ರದಲ್ಲಿ ನಿಮ್ಮ ಹಾಗೂ ನಿಮ್ಮ ಅಕ್ಕಪಕ್ಕದ ಜಮೀನಿನ ಬಗ್ಗೆಯೂ ಕೂಡ ಮೊಬೈಲ್ ಒಂದೇ ಒಂದು ಕ್ಲಿಕ್ ಮೂಲಕ ತಿಳಿಯಬಹುದು.

ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್! ಇಂತಹವರಿಗೆ ಉಚಿತ ಕರೆಂಟ್ ಸೌಲಭ್ಯ ಸಿಗೋದಿಲ್ಲ

Is your land or Property in your name, Check on mobile online

Our Whatsapp Channel is Live Now 👇

Whatsapp Channel

Related Stories