Karnataka News

ಕನ್ನಡ ಬರೆಯಲು ತಡಕಾಡಿದ ಸಚಿವರು! ವೈರಲ್ ಆದ ವಿಡಿಯೋ

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಯಡವಟ್ಟು – ಸುತ್ತಲಿರುವವರು ಚಪ್ಪಾಳೆ ತಟ್ಟಿದ ದೃಶ್ಯ ವೈರಲ್

  • ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಬರೆಯಲು ಸಚಿವರು ಪರದಾಟ
  • ‘‘ಶುಭವಾಗಲಿ’’ ಬರೆಯುವಲ್ಲಿ ಮಾಡಿದ ತಪ್ಪು (Mistake)
  • ವೈರಲ್ (Viral) ವಿಡಿಯೋ, ಕನ್ನಡ ಪ್ರೀತಿ ಬಗ್ಗೆ ಚರ್ಚೆ

ಕೊಪ್ಪಳ: ಕರ್ನಾಟಕ ಸರ್ಕಾರದ ಸಚಿವರೊಬ್ಬರು ಕನ್ನಡ ಬರೆಯಲು ತಡಕಾಡಿದ ಪ್ರಸಂಗದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social Media) ಈಗ ಜೋರಾಗಿ ಹರಿದಾಡುತ್ತಿದೆ. ಕೊಪ್ಪಳ (Koppal) ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆಗೆ ಆಗಮಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ (Shivaraj Tangadagi), ಬರಹದ ಯಡವಟ್ಟಿನಿಂದ ಟ್ರೋಲಿಗರ ಟಾರ್ಗೆಟ್ ಆಗಿದ್ದಾರೆ.

ಮಂಡ್ಯದಲ್ಲಿ 8 ವರ್ಷದ ಬಾಲಕಿಗೆ ಕೇಕ್ ಆಮಿಷ, ಶಾಲಾ ಆವರಣದಲ್ಲೇ ಅತ್ಯಾಚಾರ

ಕನ್ನಡ ಬರೆಯಲು ತಡಕಾಡಿದ ಸಚಿವರು! ವೈರಲ್ ಆದ ವಿಡಿಯೋ

ಸಮಾರಂಭದಲ್ಲಿ “ಶುಭವಾಗಲಿ” ಎಂದು ಬೋರ್ಡ್ ಮೇಲೆ ಬರೆಯಲು ಸಚಿವರು ಮುಂದಾದಾಗ, ಅವರು ಸರಿಯಾಗಿ ಬರೆಯಲು ವಿಫಲರಾದರು. ಸಚಿವರು ತಪ್ಪಾಗಿ ಬರೆಯುತ್ತಿದ್ದರೂ ಸುತ್ತಲಿನವರು ಅದನ್ನು ತಿದ್ದದೆ, ಚಪ್ಪಾಳೆ ಹೊಡೆಯುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಈ ದೃಶ್ಯ ಈಗ ವ್ಯಾಪಕವಾಗಿ ವೈರಲ್ ಆಗಿದ್ದು, ಕನ್ನಡ ಪ್ರೀತಿಯ ಬಗ್ಗೆ ಮತ್ತೆ ಚರ್ಚೆ ಹುಟ್ಟಿಸಿದೆ.

ಈ ಮೊದಲು ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರ ಭಾಷಣದ ಪ್ರಸಂಗ ವೈರಲ್ ಆಗಿದ್ದರೆ, ಈಗ ಶಿವರಾಜ್ ತಂಗಡಗಿ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಬಗ್ಗೆ ಸಕ್ರಿಯವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

Karnataka Minister Struggles to Write Kannada, Video Goes Viral

Our Whatsapp Channel is Live Now 👇

Whatsapp Channel

Related Stories