ಲೇಬರ್ ಕಾರ್ಡ್ ನೋಂದಣಿ ಪ್ರಕ್ರಿಯೆ ಶುರು; ಈ ಕಾರ್ಡ್ ಇದ್ರೆ ಏನೆಲ್ಲಾ ಬೆನಿಫಿಟ್ಸ್ ಇದೆ ಗೊತ್ತಾ?

Story Highlights

ಸಾಲ ಸೌಲಭ್ಯದಿಂದ (Loan) ಹಿಡಿದು ಪಿಂಚಣಿವರೆಗೆ (Pension) ಹಾಗೂ ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸದ ವರೆಗೆ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ.

ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಗೂ ಕೂಡ ಅನುಕೂಲವಾಗಲು, ರಾಜ್ಯ ಸರ್ಕಾರ (state government) ಬೇರೆ ಬೇರೆ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದರಲ್ಲೂ ಮುಖ್ಯವಾಗಿ ಈ ಬಾರಿ ಘೋಷಿಸಿದ ಗ್ಯಾರಂಟಿ ಯೋಜನೆಗಳು (guarantee schemes) ಹಾಗೂ ಇನ್ನಿತರ ಯೋಜನೆಗಳ ಮೂಲಕ ಮಹಿಳೆಯರಿಗೆ, ಯುವಕರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರಿಗೆ ಹೆಚ್ಚು ಅನುಕೂಲವಾಗಿದೆ ಎನ್ನಬಹುದು.

ಅಸಂಘಟಿತ ವಲಯ (non organised sector) ದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ (labours) ಕೂಡ ಸರ್ಕಾರ ಇದೀಗ ಗುಡ್ ನ್ಯೂಸ್ ನೀಡಿದೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ಲೇಬರ್ ಕಾರ್ಡ್ (labour card) ಹೊಂದಿರುವುದು ಉಚಿತ.

ಸರ್ಕಾರಿ ಜಾಗದಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಸಿಹಿ ಸುದ್ದಿ! ಹಕ್ಕುಪತ್ರ ವಿತರಣೆ

ಯಾಕೆಂದರೆ ಈ ಕಾರ್ಡ್ ಮೂಲಕವೇ ಸರ್ಕಾರದಿಂದ ಸಾಕಷ್ಟು ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಸಾಲ ಸೌಲಭ್ಯದಿಂದ (Loan) ಹಿಡಿದು ಪಿಂಚಣಿವರೆಗೆ (Pension) ಹಾಗೂ ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸದ ವರೆಗೆ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ. ಆದರೆ ಇದರ ಪ್ರಯೋಜನ ಪಡೆದುಕೊಳ್ಳಲು ಲೇಬರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ.

ಲೇಬರ್ ಕಾರ್ಡ್ ಪಡೆಯಲು ನೋಂದಣಿ ಪ್ರಕ್ರಿಯೆ ಆರಂಭ! (Labour card registration process started)

ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅನುಕೂಲವಾಗಲು ಲೇಬರ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ, ಈ ಒಂದು ಕಾರ್ಡ್ ನಿಮ್ಮ ಬಳಿ ಇದ್ದರೆ ಸಾಕಷ್ಟು ಯೋಜನೆಯ ಪ್ರಯೋಜನಗಳನ್ನು ಉಚಿತವಾಗಿಯೇ ಪಡೆದುಕೊಳ್ಳಬಹುದು.

ಲೇಬರ್ ಕಾರ್ಡ್ ಪಡೆದುಕೊಳ್ಳಲು (to get labour card benefits) ಹಾಗೂ ನೋಂದಣಿ ಮಾಡಿಕೊಳ್ಳಲು ಸರ್ಕಾರ ಅರ್ಜಿ ಆಹ್ವಾನಿಸಿದೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ತಕ್ಷಣವೇ ಲೇಬರ್ ಕಾರ್ಡ್ ನೋಂದಣಿ ಮಾಡಿಸಿಕೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ. ಯಾವ ಸ್ಥಳದಲ್ಲಿ ಯಾವ ಸಮಯಕ್ಕೆ ಲೇಬರ್ ಕಾರ್ಡ್ ನೋಂದಣಿ ಆರಂಭವಾಗುತ್ತದೆ ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.

ಗೃಹಲಕ್ಷ್ಮಿ ಯೋಜನೆಯಲ್ಲಿ ರಾತ್ರೋರಾತ್ರಿ ಹೊಸ ಬದಲಾವಣೆ! ಇನ್ಮುಂದೆ ಹೊಸ ರೂಲ್ಸ್

Labour Cardಲೇಬರ್ ಕಾರ್ಡ್ ನೋಂದಣಿ ಬಗ್ಗೆ ಮಾಹಿತಿ!

ಲೇಬರ್ ಕಾರ್ಡ್ ನೋಂದಣಿ ಮಾಡಿಕೊಳ್ಳಲು ಸರ್ಕಾರ ಈಗಾಗಲೇ ಅವಕಾಶ ನೀಡಿದ್ದು, ಗಡುವು ವಿಸ್ತರಣೆ ಮಾಡಿದೆ. ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಭೇಟಿ ನೀಡಿ ನೀವು ನೋಂದಣಿ ಮಾಡಿಸಿಕೊಳ್ಳಬಹುದು.

ಯಾರಿಗೆ ಸಿಗಲಿದೆ ಲೇಬರ್ ಕಾರ್ಡ್? (Who can get labour card)

ವಲಯದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ಈ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಒಂದು ವರ್ಷದ ಅವಧಿಯಲ್ಲಿ ಕನಿಷ್ಠ 90 ದಿನಗಳ ಕಾಲ ಯಾವುದೇ ಕಟ್ಟಡ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಕಾರ್ಮಿಕರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. 18 ರಿಂದ 60 ವರ್ಷ ವಯಸ್ಸಿನ ಯಾವುದೇ ಕಾರ್ಮಿಕರು ಅರ್ಜಿ ಸಲ್ಲಿಸಬಹುದು.

ರೇಷನ್ ಕಾರ್ಡ್ ಇಲ್ಲದವರಿಗೆ ಹೊಸ ವರ್ಷಕ್ಕೆ ಬಂಪರ್ ಗಿಫ್ಟ್ ಕೊಟ್ಟ ರಾಜ್ಯ ಸರ್ಕಾರ

ಕಾರ್ಡ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು! (Needed documents)

ದೃಢೀಕರಣ ಪ್ರಮಾಣ ಪತ್ರ ಸಲ್ಲಿಸಬೇಕು. ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರ (ಅಂಕ ಖಾತೆಗೆ ಈ ಕೆ ವೈ ಸಿ ಆಗಿರುವುದು ಕಡ್ಡಾಯ), ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ. ಇವಿಷ್ಟು ಪ್ರಮುಖ ದಾಖಲೆಗಳನ್ನು ಅರ್ಜಿ ಸಲ್ಲಿಸುವ ಸಮಯದಲ್ಲಿ ನೀಡಬೇಕು.

https://karbwwb.karnataka.gov.in/ ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗೆ ಭೇಟಿ ನೀಡಿ. ಅಥವಾ ಸಹಾಯವಾಣಿ ಸಂಖ್ಯೆ155214 ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ.

ಲೇಬರ್ ಕಾರ್ಡ್ ಇರುವವರಿಗೆ ಸಿಗುವ ಸೌಲಭ್ಯಗಳು ಇಂತಿವೆ! (Get these benefits if you have labour card)

ವೈದ್ಯಕೀಯ ವೆಚ್ಚ
ಪಿಂಚಣಿ (Pension)
ತಾಯಿ ಮಗು ಸಹಾಯ ಹಸ್ತ
ಸಾಲ ಸೌಲಭ್ಯ (Loan)
ಶೈಕ್ಷಣಿಕ ಸಹಾಯಧನ
ಉಚಿತ ಬಸ್ ಪಾಸ್
ಮದುವೆಗೆ ಸಹಾಯಧನ
ಹೆರಿಗೆ ಸೌಲಭ್ಯ
ಅಂತ್ಯಕ್ರಿಯೆಗೆ ಸಹಾಯಧನ. ಈ ಮೊದಲಾದ ಸೌಲಭ್ಯಗಳನ್ನು ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರು ಪಡೆದುಕೊಳ್ಳಬಹುದಾಗಿದೆ.

Labor Card Registration Process Begins, Know the benefits

Related Stories