ಪ್ರೀತಿಸಿ ಮದುವೆಯಾದ ಜೋಡಿಯ ಹತ್ಯೆ ಮಾಡಿದ್ದ ಹಂತಕರಿಗೆ ಗಲ್ಲು ಶಿಕ್ಷೆ
ತನಿಖೆಯಲ್ಲಿ ಈ ನಾಲ್ವರ ಅಪರಾಧ ಸಾಬೀತಾಗಿದ್ದರಿಂದ ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಆರೋಪ ಸಾಬೀತಾಗದ ಕಾರಣ ಕೆಲವರನ್ನು ಖುಲಾಸೆಗೊಳಿಸಲಾಗಿದೆ.
ಪ್ರೀತಿಸಿ ಮದುವೆಯಾದ ಪಾಪಕ್ಕೆ ಯುವ ಜೋಡಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಗದಗ ಜಿಲ್ಲಾ ನ್ಯಾಯಾಲಯ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಿದೆ.
ವಿವರ : ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕು ಲಕ್ಕಲಕಟ್ಟೆ ಗ್ರಾಮದ ರಮೇಶ ಮಾದರ (29) ಮತ್ತು ಗಂಗಮ್ಮ (23) ಎಂಬ ದಂಪತಿಯನ್ನು 2019ರಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು.
ಮೈಕ್ರೋ ಫೈನಾನ್ಸ್ ಹಾವಳಿ, ಕಿರುಕುಳ ನೀಡಿದರೆ 3 ವರ್ಷಗಳ ಜೈಲು ಶಿಕ್ಷೆ
ಈ ರಕ್ತಪಾತಕ್ಕೆ ಗಂಗಮ್ಮನ ಸಂಬಂಧಿಕರೇ ಕಾರಣ ಎಂದು ತಿಳಿದು ಬಂದಿತ್ತು. ಅವರಿಗೆ ಅಂತರ್ಜಾತಿ ವಿವಾಹ ಇಷ್ಟವಿರಲಿಲ್ಲ ಎನ್ನಲಾಗಿದೆ.
ಗಜೇಂದ್ರಗಡ ಪೊಲೀಸರು ಗಂಗಮ್ಮ ಅವರ ಸಂಬಂಧಿಕರಾದ ಶಿವಪ್ಪ ರಾಠೋಡ್, ರವಿಕುಮಾರ ರಾಠೋಡ್, ರಮೇಶ ರಾಠೋಡ್, ಪರಶುರಾಮ ರಾಠೋಡ್ ಮತ್ತಿತರರನ್ನು ಬಂಧಿಸಿ ಜಿಲ್ಲಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ರೈಲಿನಿಂದ ನದಿಗೆ ಬಿದ್ದ ಯುವಕ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು
ತನಿಖೆಯಲ್ಲಿ ಈ ನಾಲ್ವರ ಅಪರಾಧ ಸಾಬೀತಾಗಿದ್ದರಿಂದ ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಆರೋಪ ಸಾಬೀತಾಗದ ಕಾರಣ ಕೆಲವರನ್ನು ಖುಲಾಸೆಗೊಳಿಸಲಾಗಿದೆ.
Murderers of Love-Married Couple Sentenced to Death