ನವವಿವಾಹಿತ ದಂಪತಿಗೆ ಅಪಘಾತ: ವರ ದುರ್ಮರಣ, ವಧುಗೆ ಗಂಭೀರ ಗಾಯ
ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ, ಅಪಘಾತದಲ್ಲಿ ನವವಿವಾಹಿತ ವರ ಸಾವನ್ನಪ್ಪಿದ್ದು, ವಧು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ (Mandya District) ನಡೆದ ರಸ್ತೆ ಅಪಘಾತದಲ್ಲಿ (Bike Accident) ನವವಿವಾಹಿತ ವರ ಸಾವನ್ನಪ್ಪಿದ್ದು, ವಧು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾಳೇಗೌಡ ಅವರ ಪುತ್ರ ವಿಜಯ್ (28) ಹಾಗೂ ಅಶ್ವತ್ ಅವರ ಪುತ್ರಿ ರಕ್ಷಿತ (20) ಮಧ್ಯೆ ಈ ತಿಂಗಳ 1ನೇ ತಾರೀಖು (May 1st wedding) ವಿವಾಹ ನೆರವೇರಿತ್ತು. ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ, ಬೈಕ್‌ನಲ್ಲಿ ಸುತ್ತಾಡಲು ತೆರಳಿದ್ದರು.
ಈ ವೇಳೆ ಅವರ ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ವಿಜಯ್ ತಲೆ, ಕಾಲು ಮತ್ತು ಮೆದಳಿಗೆ ತೀವ್ರವಾಗಿ ಗಾಯವಾಗಿದ್ದು, ಆಸ್ಪತ್ರೆಗೂ ಮುನ್ನವೇ ದಾರುಣ ಸಾವನ್ನಪ್ಪಿದ್ದಾರೆ.
ರಕ್ಷಿತ ಕೂಡ ಗಂಭೀರ ಗಾಯಗೊಂಡಿದ್ದು, ತಕ್ಷಣ ಮೈಸೂರಿನ (Mysore hospital) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಪೊಲೀಸರು ಬನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ವಿಜಯ್ ಅವರ ಪಾರ್ಥಿವ ಶರೀರವನ್ನು ಸೋಮವಾರ ಮಧ್ಯಾಹ್ನ ಅವರ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು. ವರನ ಆಕಸ್ಮಿಕ ಸಾವಿಗೆ ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದು, ಮದುವೆ ಮನೆ ಒಂದೇ ಕ್ಷಣದಲ್ಲಿ ಶೋಕದ ಮನೆಯಾಗಿ ಪರಿವರ್ತನೆಗೊಂಡಿದೆ.
Newlywed Husband Dies in Tragic Road Accident







