ಪ್ರಧಾನಿ ಮೋದಿ ಬೆಳಗಾವಿ ಭೇಟಿ, 11 ಕಿಮೀ ರೋಡ್ ಶೋ.. ಬಿಜೆಪಿ ಕಾರ್ಯಕರ್ತರಿಂದ ಜಯ ಘೋಷಣೆ
ಬೆಳಗಾವಿ (Belagavi): ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಬೆಳಗಾವಿಯಲ್ಲಿ 11 ಕಿಮೀ ರೋಡ್ ಶೋ ನಡೆಸಿದರು. ಮಾರ್ಗಮದ್ಯ ಜನರು ಹಾಗೂ ಬಿಜೆಪಿ ಕಾರ್ಯಕರ್ತರು ಜಯ ಘೋಷಣೆಯೊಂದಿಗೆ ಸಂಭ್ರಮದಿಂದ ಸ್ವಾಗತಿಸಿದರು.
ನಿನ್ನೆ ಶಿವಮೊಗ್ಗದಲ್ಲಿ ನೂತನ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಅವರು ಅಲ್ಲಿ ರೂ.3,600 ಕೋಟಿಗಳ ಯೋಜನೆಗಳನ್ನು ಪ್ರಾರಂಭಿಸಿದರು. ಬಳಿಕ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಮಾನದ ಮೂಲಕ ಬೆಳಗಾವಿಗೆ ತೆರಳಿದರು.
ಖಾಸಗಿ ಹೆಲಿಕಾಪ್ಟರ್ ಮೂಲಕ ಬೆಳಗಾವಿ ಕರ್ನಾಟಕ ಸಶಸ್ತ್ರ ಪಡೆ ಮೈದಾನಕ್ಕೆ ತೆರಳಿದರು. ಅಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ತೆರೆದ ಕಾರಿನಲ್ಲಿ ಮೋದಿ ‘ರೋಡ್ ಶೋ’ ನಡೆಸಿದರು.
ಜನರು ಹಾಗೂ ಕಾರ್ಯಕರ್ತರು ಉತ್ಸಾಹದಿಂದ ಹೂವುಗಳನ್ನು ಸಿಂಪಡಿಸಿ ಅವರನ್ನು ಸ್ವಾಗತಿಸಿದರು, ಮೋದಿ ಕಾರಿನ ಬಾಗಿಲು ತೆರೆದು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರತ್ತ ಕೈ ಬೀಸಿದರು. ಮಾರ್ಗಮಧ್ಯೆ ಜನರು ಅವರ ಮೇಲೆ ಹೂ ಸಿಂಪಡಿಸಿ ಸ್ವಾಗತಿಸಿದರು.
ಈ “ರೋಡ್ ಶೋ” ಮೂಲಕ ಅವರು ಬೆಳಗಾವಿಯ ಜನರ ಬೆಂಬಲವನ್ನು ಕ್ರೋಢೀಕರಿಸಿದರು. ಈ “ರೋಡ್ ಶೋ” ಮಧ್ಯಾಹ್ನ 2.45 ಕ್ಕೆ ಪ್ರಾರಂಭವಾಯಿತು ಮತ್ತು 4.20 ಕ್ಕೆ ಕೊನೆಗೊಂಡಿತು. ಅಂದರೆ ಈ “ರೋಡ್ ಶೋ” 1.35 ಗಂಟೆಗಳ ಕಾಲ ನಡೆಯಿತು.
ಈ ಒಂದೂವರೆ ಗಂಟೆಗಳ ಕಾಲ ಬಿಡುವಿಲ್ಲದೇ ಮೋದಿ ಕೈಬೀಸುತ್ತ ಕಾರಿನ ಪಕ್ಕದಲ್ಲಿ ನಿಂತರು. ರಾಷ್ಟ್ರೀಯ ಕಾವಲುಗಾರರು ಬಂದೂಕುಗಳನ್ನು ಇಡಿದು ಅವರ ಕಾರಿನ ಸುತ್ತಲೂ ನಡೆಯುತ್ತಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಬ್ಯಾರಿಕೇಡ್‌ಗಳ ಆಚೆ ಬಿಜೆಪಿ ಕಾರ್ಯಕರ್ತರು ನಿಂತಿದ್ದರು. ದಾರಿಯುದ್ದಕ್ಕೂ ಸ್ವಯಂಸೇವಕರು ಮೋದಿಗೆ ಜಯವಾಗಲಿ ಎಂದು ಘೋಷಣೆಗಳನ್ನು ಕೂಗಿದರು.
ಅವರು ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿದಾಗ ಯಾವಾಗಲೂ “ರೋಡ್ ಶೋ” ನಡೆಸುತ್ತಾರೆ. ಈ ಮೂಲಕ ಜನಬೆಂಬಲ ಗಳಿಸಿ ಬಿಜೆಪಿಯ ಬಲವನ್ನು ತೋರಿಸುತ್ತಿದ್ದಾರೆ.
Prime Minister Narendra Modi road show in Karnataka Belagavi