ಎಲ್ಲಾ ದಾಖಲೆ ಕೊಟ್ಟು ಆಸ್ತಿ ರಿಜಿಸ್ಟರ್ ಮಾಡಿಸಿದ್ರು ಕ್ಯಾನ್ಸಲ್! ರಿಜಿಸ್ಟ್ರೇಶನ್ ನಿಯಮ ಬದಲಿಸಿದ ರಾಜ್ಯ ಸರ್ಕಾರ
ಸುಳ್ಳು ಮಾಹಿತಿಗಳನ್ನು ನೀಡಿ, ಮೋಸ ಮಾಡಿ ತಮ್ಮ ಪರ್ಸನಲ್ ಆಸ್ತಿ ಅಥವಾ ಸರ್ಕಾರದ ಆಸ್ತಿಯನ್ನು ರಿಜಿಸ್ಟರ್ ಮಾಡಿಸಿಕೊಂಡಿರುತ್ತಾರೋ ಅಂಥ ಪ್ರಕರಣ ಕಂಡುಬಂದರೆ, ಆ ಕೂಡಲೇ ರಿಜಿಸ್ಟ್ರೇಶನ್ ಅನ್ನು ರದ್ದು ಮಾಡಲಾಗುತ್ತದೆ
ನಮ್ಮಲ್ಲಿ ಹಲವು ಜನರು ಸುಳ್ಳು ದಾಖಕೆ ಕೊಟ್ಟು, ಫ್ರಾಡ್ ಮಾಡಿ ಆಸ್ತಿ ರಿಜಿಸ್ಟರ್ (Property Registration) ಮಾಡಿಸಿಕೊಂಡಿರುತ್ತಾರೆ. ಅಂಥವರಿಗೆಲ್ಲಾ ಈಗ ಒಂದು ಶಾಕಿಂಗ್ ನ್ಯೂಸ್ ಸರ್ಕಾರದ ಕಡೆಯಿಂದ ಸಿಕ್ಕಿದೆ. ಕಂದಾಯ ಇಲಾಖೆ ಸಚಿವರಾದ ಕೃಷ್ಣ ಭೈರೇಗೌಡ ಅವರು ಮುಖ್ಯವಾದ ಅಂಶವನ್ನು ತಿಳಿಸಿದ್ದಾರೆ.
ನಿನ್ನೆಯ ದಿನ ಕಲಬುರ್ಗಿಯಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಲಾಯಿತು. ಆಗ ಕೃಷ್ಣ ಭೈರೇಗೌಡ ಅವರು ಮಾತನಾಡಿದ್ದಾರೆ. ಸರ್ಕಾರ ಈಗ ಆಸ್ತಿ ರಿಜಿಸ್ಟ್ರೇಶನ್ ವಿಚಾರದಲ್ಲಿ ಹೊಸ ನಿಯಮ ತರಲಾಗಿದೆ.
ಅದೇನು ಎಂದರೆ, ಇನ್ನುಮುಂದೆ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಸುಳ್ಳು ಮಾಹಿತಿಗಳನ್ನು ನೀಡಿ, ಮೋಸ ಮಾಡಿ ತಮ್ಮ ಪರ್ಸನಲ್ ಆಸ್ತಿ ಅಥವಾ ಸರ್ಕಾರದ ಆಸ್ತಿಯನ್ನು ರಿಜಿಸ್ಟರ್ ಮಾಡಿಸಿಕೊಂಡಿರುತ್ತಾರೋ (Lad Registration) ಅಂಥ ಪ್ರಕರಣ ಕಂಡುಬಂದರೆ, ಆ ಕೂಡಲೇ ರಿಜಿಸ್ಟ್ರೇಶನ್ ಅನ್ನು ರದ್ದು ಮಾಡಲಾಗುತ್ತದೆ, ಈ ಅಧಿಕಾರವನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಕೊಡಲಾಗಿರುತ್ತದೆ..ಎಂದು ತಿಳಿಸಿದ್ದಾರೆ. ಕಲಬುರ್ಗಿಯಲ್ಲಿ ಈ ವಿಚಾರದ ಬಗ್ಗೆ ಮಾತನಾಡಿ..
ನಿಮ್ಮ ಕೃಷಿ ಭೂಮಿಗೆ ವಿದ್ಯುತ್ ಸಂಪರ್ಕ ಇಲ್ವಾ? ಹಾಗಾದ್ರೆ ಸರ್ಕಾರದಿಂದ ಉಚಿತ ವಿದ್ಯುತ್ ಪಡೆಯಲು ಈ ರೀತಿ ಮಾಡಿ!
“ಈ ಹಿಂದಿನ ಅಧಿವೇಶನದಲ್ಲಿ ಆಸ್ತಿ ವಿಚಾರದ ಕಾಯ್ದೆಯ ತಿದ್ದುಪಡಿ ಮಾಡಲಾಗಿದೆ. ಇದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಕೂಡ ಸಿಕ್ಕಿದೆ. ಮುಂದಿನ 4 ತಿಂಗಳುಗಳ ಒಳಗೆ ಅಧಿಕೃತ ಆದೇಶ ಬರಲಿದೆ. ಯಾರದ್ದೋ ಆಸ್ತಿ ವಶಪಡಿಸಿಕೊಳ್ಳುವವರಿಗೆ, ಮಧ್ಯ ನಿಂತು ಮೋಸ ಮಾಡುವ ದಲ್ಲಾಳಿಗಳ ಆಟ ಇನ್ನುಮುಂದೆ ನಡೆಯುವುದಿಲ್ಲ. ಇದು ಮೊದಲಲ್ಲ ಈ ಹಿಂದೆ ಕೂಡ ಮೋಸ ಮಾಡಿ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ರಿಜಿಸ್ಟರ್ ಮಾಡಿಸಿಕೊಂಡು, ಜನರಿಗೆ ತೊಂದರೆ ಕೊಡುವ ಸಾಕಷ್ಟು ಜನರಿಗೆ ತೊಂದರೆ ಕೊಟ್ಟಿದ್ದಾರೆ.
ಆದರೆ ಇನ್ಮೇಲೆ ಈ ರೀತಿ ಆಗೋದಿಲ್ಲ. ಸುಳ್ಳು ದಾಖಲೆಗಳನ್ನು ರದ್ದು ಮಾಡುವ ಅಧಿಕಾರವನ್ನು ನೋಂದಣಿ ಅಧಿಕಾರಿಗೆ ಕೊಡಲಾಗಿದೆ. ಮೋಸ ಆದ ತಕ್ಷಣವೇ ಮೋಸ ಆಗದ ಹಾಗೆ ತಡೆದು ನ್ಯಾಯ ಕೊಡಿಸಲಾಗುತ್ತದೆ..” ಎಂದು ಸ್ಪಷ್ಟನೆ ನೀಡಿದ್ದಾರೆ ಕೃಷ್ಣ ಭೈರೇಗೌಡ.
ಆಸ್ತಿ ಪ್ರಕರಣಗಳ ಬಗ್ಗೆ ಮಾತನಾಡಿ, ತಹಸೀಲ್ದಾರ್ ಮತ್ತು ಸಹಾಯಕ ಆಯುಕ್ತರಿಗೆ ಸಚಿವರ ಕಡೆಯಿಂದ ಮುಖ್ಯವಾದ ಸೂಚನೆ ನೀಡಲಾಗಿದೆ. ಇನ್ನು ಉಳಿದಿರುವ ಆಸ್ತಿ ಪ್ರಕರಣಗಳನ್ನು 15 ದಿನಗಳಲ್ಲಿ ಮುಗಿಸಬೇಕು ಎಂದು ಹೇಳಿದ್ದಾರೆ. ಇನ್ನುಮುಂದೆ ಆಸ್ತಿ ವಿಚಾರಕ್ಕೆ ದಲ್ಲಾಳಿಗಳಿಂದ ಅಥವಾ ಇನ್ಯಾರಿಂದಲು ಮೋಸ ಆಗುವುದಿಲ್ಲ.. ಎಂದು ತಿಳಿಸಿದ್ದಾರೆ.
Property Registration will cancelled if Found Fake Register or Cheating
Follow us On
Google News |