ಜುಲೈ ತಿಂಗಳ ಕರೆಂಟ್ ಬಿಲ್ ಕಟ್ಟಿರುವವರಿಗೆ ಗುಡ್ ನ್ಯೂಸ್, ವಾಪಸ್ ಬರಲಿದೆ ನಿಮ್ಮ ಹಣ! ಸರ್ಕಾರದ ನಿರ್ಧಾರಕ್ಕೆ ಜನ ಫುಲ್ ಖುಷ್

ನಮ್ಮ ರಾಜ್ಯದ ಜನರಿಗೆ ಉಚಿತ ವಿದ್ಯುತ್ (Free Electricity) ನೀಡುವ ಸಲುವಾಗಿ ಗೃಹಜ್ಯೋತಿ ಯೋಜನೆಯನ್ನು (Gruha Jyothi Scheme) ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ ರಾಜ್ಯದ (Karnataka) ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡುವುದಾಗಿ ಸರ್ಕಾರ ಭರವಸೆ ನೀಡಿತ್ತು.
ಆದರೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಪ್ರಕ್ರಿಯೆ ಶುರುವಾಗಿದ್ದರು ಕೂಡ ಸಾಕಷ್ಟು ಗೊಂದಲಗಳು ಜನರಲ್ಲಿದೆ. ಇದೀಗ ಸಚಿವರಾದ ಕೆಜೆ ಜಾರ್ಜ್ ಅವರು ಗೃಹಜ್ಯೋತಿ ಯೋಜನೆಯ ಬಗ್ಗೆ ಇರುವ ಎಲ್ಲಾ ಗೊಂದಲಗಳಿಗೆ ಪರಿಹಾರ ನೀಡಿದ್ದಾರೆ.
ಮಾಧ್ಯಮದ ಎದುರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಕೆಜೆ ಜಾರ್ಜ್ ಅವರು ವಿದ್ಯುತ್ ಇಲಾಖೆಯ ಸಚಿವರಾಗಿದ್ದು, ಇವರು ಸುದ್ದಿಗೋಷ್ಠಿಯಲ್ಲಿ ಪ್ರಮುಖವಾದ ವಿಚಾರವನ್ನು ಮಾತನಾಡಿದ್ದಾರೆ. ಅದೇನು ಎಂದರೆ, ಆಗಸ್ಟ್ 5ರಂದು ಗೃಹಜ್ಯೋತಿ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಗುತ್ತದೆ ಎನ್ನುವ ವಿಷಯುವನ್ನು ರಿವೀಲ್ ಮಾಡಿದ್ದಾರೆ.
ಜೊತೆಗೆ ಯಾರೆಲ್ಲಾ ಜುಲೈ ತಿಂಗಳ ವಿದ್ಯುತ್ ಬಿಲ್ (July Electricity Bill) ಕಟ್ಟಿದ್ದಾರೋ ಅವರಿಗೆಲ್ಲಾ ಕಟ್ಟಿರುವ ಹಣವನ್ನು ವಾಪಸ್ ಕೊಡಲಾಗುತ್ತದೆ, ಸರ್ಕಾರವೇ ಕೊಡುತ್ತದೆ ಎಂದು ತಿಳಿಸಿದ್ದಾರೆ.
ಜೂನ್ ತಿಂಗಳ ವಿದ್ಯುತ್ ಬಿಲ್ ಜುಲೈ ನಲ್ಲಿ ಬಂದಿದೆ, ಆದರೆ ಜುಲೈ ತಿಂಗಳ ಬಿಲ್ ನಲ್ಲಿ ಜೂನ್ ತಿಂಗಳ ಜೊತೆಗೆ ಜುಲೈ ಕೆಲವು ದಿನಗಳು ಕೂಡ ಸೇರಿಕೊಂಡಿದ್ದು, ಈ ಕಾರಣದಿಂದ ಎಲೆಕ್ಟ್ರಿಸಿಟಿ ಬಿಲ್ ಮೊತ್ತ ಜಾಸ್ತಿ ಬಂದಿದೆ. ಇದನ್ನು ಪರಿಶೀಲಿಸಿ, ಕಳೆದ ನಾಲ್ಕು ತಿಂಗಳುಗಳಿಂದ ಯಾರು ಬಾಕಿ ಉಳಿಸಿಕೊಂಡಿಲ್ಲ, ಅವರಿಗೆಲ್ಲಾ ಜುಲೈ ತಿಂಗಳಿನಲ್ಲಿ ಕಟ್ಟಿರುವ ಹೆಚ್ಚುವರಿ ಹಣವನ್ನು 4 ತಿಂಗಳ ಒಳಗೆ ವಾಪಸ್ ಕೊಡಲಾಗುತ್ತದೆ ಎಂದು ಕೆಜೆ ಜಾರ್ಜ್ ಅವರು ತಿಳಿಸಿದ್ದಾರೆ..

ನಿಮ್ಮ ಮನೆಯ ಕರೆಂಟ್ ಬಿಲ್ 210 ಯೂನಿಟ್ ಗಿಂತ ಹೆಚ್ಚು ಬಂದಿದ್ದರೆ ನೀವು ಕಟ್ಟಬೇಕಿರುವ ಕರೆಂಟ್ ಬಿಲ್ ಎಷ್ಟು ಗೊತ್ತಾ?
ಹಾಗೆಯೇ ಗೃಹಜ್ಯೋತಿ ಯೋಜನೆ ಬಗ್ಗೆ, ಅಪ್ಲಿಕೇಶನ್ ಸಲ್ಲಿಸುವ ಬಗ್ಗೆ ಮತ್ತು ಇನ್ನಿತರ ಯಾವುದೇ ಮಾಹಿತಿ ಬೇಕಿದ್ದರು ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು.
ಈಗ ಸರ್ಕಾರವು ಗೃಹಜ್ಯೋತಿ ಯೋಜನೆಗೆ ಅಪ್ಲಿಕೇಶನ್ ಹಾಕಿ ರಿಜಿಸ್ಟರ್ ಮಾಡಿಕೊಳ್ಳುವುದಕ್ಕೆ ಯಾವುದೇ ಕೊನೆಯ ದಿನಾಂಕವನ್ನು ನಿಗದಿಪಡಿಸಿಲ್ಲ. ಜನರು ಯಾವಾಗಲಾದರೂ ಅರ್ಜಿ ಸಲ್ಲಿಸಬಹುದು. ಆದರೆ ಜುಲೈ ತಿಂಗಳ ಒಳಗೆ ಅರ್ಜಿ ಸಲ್ಲಿಸಿದ್ದರೆ, ಅಂಥವರಿಗೆ ಆಗಸ್ಟ್ ಇಂದ ಉಚಿತ ವಿದ್ಯುತ್ ಸಿಗುತ್ತದೆ.
ಇವರೆಗು ಅರ್ಜಿ ಸಲ್ಲಿಸದೆ ಇರುವವರು ಜುಲೈ ತಿಂಗಳ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ. ಜನರಿಗೆ ಅನುಕೂಲ ಆಗಲಿ ಎಂದು ಆಗಸ್ಟ್ 5ಕ್ಕೆ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತರುವ ಪ್ಲಾನ್ ಮಾಡಲಾಗಿದೆ..ಅರ್ಜಿ ಹಾಕದೆ ಇರುವವರಿಗೆ ಯಾವುದೇ ಕಾರಣಕ್ಕೂ ಉಚಿತ ವಿದ್ಯುತ್ ಸಿಗುವುದಿಲ್ಲ ಎಂದು ಸಚಿವ ಕೆಜೆ ಜಾರ್ಜ್ ಅವರು ಸ್ಪಷ್ಟನೆ ನೀಡಿದ್ದಾರೆ.
ಬಿಪಿಎಲ್ ಕಾರ್ಡ್ ಇರುವ ಇಂಥಹವರಿಗೆ ಆಗಸ್ಟ್ 1ರಿಂದ ಇಲ್ಲ ರೇಷನ್! ಸರ್ಕಾರದಿಂದ ಮಹತ್ವದ ಆದೇಶ
Good news for those who have paid current bill for the month of July, your money will come back



