ನಿಮ್ಮ ಮನೆಯ ಕರೆಂಟ್ ಬಿಲ್ 210 ಯೂನಿಟ್ ಗಿಂತ ಹೆಚ್ಚು ಬಂದಿದ್ದರೆ ನೀವು ಕಟ್ಟಬೇಕಿರುವ ಕರೆಂಟ್ ಬಿಲ್ ಎಷ್ಟು ಗೊತ್ತಾ?

ಕಾಂಗ್ರೆಸ್ ಸರ್ಕಾರ (Karnataka Government) ಭರವಸೆ ನೀಡಿರುವ ಗ್ಯಾರಂಟಿ ಯೋಜನೆಗಳ ಪೈಕಿ, ಗೃಹಜ್ಯೋತಿ ಯೋಜನೆ (Gruha Jyothi) ಕೂಡ ಒಂದು. ಈ ಯೋಜನೆಯ ಮೂಲಕ ಸರ್ಕಾರವು ರಾಜ್ಯದ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಭರವಸೆ ಕೊಟ್ಟಿತ್ತು.
ಅಧಿಕಾರಕ್ಕೆ ಬಂದ ನಂತರ ಗೃಹಜ್ಯೋತಿ ಯೋಜನೆಯ ಸೌಲಭ್ಯದ ವಿಚಾರದಲ್ಲಿ, ತಿಂಗಳಿಗೆ ಎಷ್ಟು ಯೂನಿಟ್ ವಿದ್ಯುತ್ ಫ್ರೀ ಎನ್ನುವ ಬಗ್ಗೆ ಪರಿಷ್ಕರಣೆ ಮಾಡಲಾಯಿತು.
ಒಂದು ವೇಳೆ ನೀವು ಗೃಹಜ್ಯೋತಿ ಯೋಜನೆಯ ಮೂಲಕ ಉಚಿತ ವಿದ್ಯುತ್ (Free Electricity) ಪಡೆಯಬೇಕು ಎಂದರೆ, ಮೊದಲು ನೀವು ಆನ್ಲೈನ್ ಮೂಲಕ ಗೃಹಜ್ಯೋತಿ ಯೋಜನೆಗೆ ರಿಜಿಸ್ಟರ್ ಮಾಡಿಕೊಳ್ಳಬೇಕು.
ಮಹಿಳೆಯರ ಫ್ರೀ ಬಸ್ ಹೊರೆ ಗಂಡಸರ ಮೇಲೆ! ಬಸ್ ನಲ್ಲಿ ಓಡಾಡೋ ಪುರುಷರಿಗೆ ಮತ್ತೊಂದು ಬ್ಯಾಡ್ ನ್ಯೂಸ್
ಸೇವಾಸಿಂಧು ಪೋರ್ಟಲ್ (Seva Sindhu Portal) ಮೂಲಕ ನೀವು ಗೃಹಜ್ಯೋತಿ ಯೋಜನೆಗೆ ರಿಜಿಸ್ಟರ್ ಮಾಡಿಕೊಳ್ಳಬಹುದು. ರಿಜಿಸ್ಟರ್ ಆದ ನಂತರವಷ್ಟೇ ನಿಮಗೆ ಉಚಿತ ವಿದ್ಯುತ್ ಸಿಗುತ್ತದೆ. ಇಲ್ಲದೆ ಹೋದರೆ ನಿಮಗೆ ನಿಮಗೆ ಗೃಹಜ್ಯೋತಿ ಯೋಜನೆಯ ಪ್ರಯೋಜನ ಸಿಗುವುದಿಲ್ಲ..
ಒಂದು ವೇಳೆ ಗೃಹಜ್ಯೋತಿ ಯೋಜನೆಗೆ (Gruha Jyothi Scheme) ನೀವು ರಿಜಿಸ್ಟರ್ ಮಾಡಿಕೊಂಡಿಲ್ಲ ಎಂದರೆ ನಿಮಗೆ ಈ ಯೋಜನೆಯ ಭಾಗ್ಯ ಸಿಗುವುದಿಲ್ಲ ಎಂದು ಸರ್ಕಾರ ಹೇಳಿದೆ. ಸಚಿವ ಕೆಜೆ ಜಾರ್ಜ್ ಅವರು ಸಹ ಈ ಬಗ್ಗೆ ಅಧಿಕೃತವಾಗಿಯೇ ಹೇಳಿಕೆ ನೀಡಿದ್ದಾರೆ.
ಇದರ ಜೊತೆಗೆ ಜನರಲ್ಲಿ ಒಂದು ಪ್ರಶ್ನೆ ಕೂಡ ಕೇಳಿಬಂದಿದೆ. ಅದೇನು ಎಂದರೆ, ಒಂದು ವೇಳೆ ಜುಲೈ ತಿಂಗಳಿನಲ್ಲಿ 210 ಯೂನಿಟ್ ಕರೆಂಟ್ ಬಿಲ್ ಬಂದರೆ, ನೀವು ಎಷ್ಟು ಹಣ ವಿದ್ಯುತ್ ಬಿಲ್ ಕಟ್ಟಬೇಕು ಎನ್ನುವ ಪ್ರಶ್ನೆ ಇದೆ. ಇನ್ನುಮುಂದೆ ಎಲೆಕ್ಟ್ರಿಸಿಟಿ ಬಿಲ್ ಅನ್ನು ಗೃಹಜ್ಯೋತಿ ಯೋಜನೆಯ ರೀತಿಯಲ್ಲೇ ಕಟ್ಟಬೇಕು ಎನ್ನಲಾಗಿದೆ.
ಬಿಪಿಎಲ್ ಕಾರ್ಡ್ ಇರುವ ಇಂಥಹವರಿಗೆ ಆಗಸ್ಟ್ 1ರಿಂದ ಇಲ್ಲ ರೇಷನ್! ಸರ್ಕಾರದಿಂದ ಮಹತ್ವದ ಆದೇಶ

ಒಂದು ವೇಳೆ ಆವರೇಜ್ ನಲ್ಲಿ 100 ಯೂನಿಟ್ ಬಂದರೆ, ಅದಕ್ಕೆ ಹೆಚ್ಚುವರಿಯಾಗಿ 10% ವಿದ್ಯುತ್ ಸಿಗುತ್ತದೆ. ಒಟ್ಟು ನೀವು 110 ಯೂನಿಟ್ ವಿದ್ಯುತ್ ಫ್ರೀಯಾಗಿ ಬಳಸಬಹುದು. ಅಕಸ್ಮಾತ್ 210 ಯೂನಿಟ್ ಬಳಸಿದ್ದರೆ ಆಗ ಎಷ್ಟು ಹಣ ಕಟ್ಟಬೇಕು ಎಂದರೆ..
ಈ ದಿನದಂದು ಮಹಿಳೆಯರ ಖಾತೆಗೆ ಬರುತ್ತೆ ಗೃಹಲಕ್ಷ್ಮಿ ಯೋಜನೆಯ ₹2000 ಹಣ! ಅಕೌಂಟ್ ಚೆಕ್ ಮಾಡಿಕೊಳ್ಳಿ
ನಿಮಗೆ ಉಚಿತ ಇರುವುದು 110 ಯೂನಿಟ್, ಅದರ ಜೊತೆಗೆ ಎಕ್ಸ್ಟ್ರಾ 100 ಯೂನಿಟ್ ಬಳಸಿದ್ದರೆ, ಅದಕ್ಕೆ ಹಣ ಕಟ್ಟಬೇಕು. ಇಲ್ಲಿ ನೀವು ಮೊದಲ 100 ಯುನಿಟ್ಸ್ ಗೆ ಒಂದು ಯೂನಿಟ್ ಗೆ 4.75 ರೂಪಾಯಿ ಆಗುತ್ತದೆ. ನಂತರದ 100 ಯೂನಿಟ್ ಗೆ ಒಂದು ಯೂನಿಟ್ ಗೆ 7 ರೂಪಾಯಿ ಬೆಲೆ ಆಗಿರುತ್ತದೆ.
ಇದನ್ನು ಕಾಲ್ಕ್ಯುಲೇಟ್ ಮಾಡಿ ಕಟ್ಟಬೇಕಾಗುತ್ತದೆ. ಜೊತೆಗೆ ನೀವು ಹಿಂದಿನ ಮೂರು ತಿಂಗಳು ವಿದ್ಯುತ್ ಬಿಲ್ ಕಟ್ಟಿಲ್ಲ ಎಂದರೆ ಮೊದಲು ಅದನ್ನು ಕಟ್ಟಬೇಕು. ಕಟ್ಟದೆ ಹೋದರೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ನಿಮಗೆ ಸಿಗುವುದಿಲ್ಲ. ಈ ರೀತಿ ಮಾಡಿ ಫ್ರೀ ವಿದ್ಯುತ್ ಸೌಲಭ್ಯವನ್ನು ಕಳೆದುಕೊಳ್ಳಬೇಡಿ.
ಸೇವಾಸಿಂಧು ಪೋರ್ಟಲ್ ವೆಬ್ ಸೈಟ್ ಲಿಂಕ್: https://sevasindhugs.karnataka.gov.in/
ಗ್ರಹಜ್ಯೋತಿ ಯೋಜನೆಯ ನೇರ ಲಿಂಕ್: https://sevasindhugs.karnataka.gov.in/gsdn/
If the current bill is more than 210 units then how much current bill you have to pay



