ನಿಮ್ಮ ಕೃಷಿ ಭೂಮಿಗೆ ವಿದ್ಯುತ್ ಸಂಪರ್ಕ ಇಲ್ವಾ? ಹಾಗಾದ್ರೆ ಸರ್ಕಾರದಿಂದ ಉಚಿತ ವಿದ್ಯುತ್ ಪಡೆಯಲು ಈ ರೀತಿ ಮಾಡಿ!

ನೀವು ಕೃಷಿಕರಾಗಿದ್ದು, ನಿಮ್ಮ ಜಮೀನಿನಲ್ಲಿ ವಿದ್ಯುತ್ ಸಂಪರ್ಕ (Electricity) ಇಲ್ಲದೆ ಹೋದರೆ, ಸರ್ಕಾರವೇ ನಿಮಗೆ ಉಚಿತ ವಿದ್ಯುತ್ (Free Electricity) ಕೊಡುತ್ತದೆ. ಅದನ್ನು ಹೇಗೆ ಪಡೆಯುವುದು? ಅರ್ಜಿ ಹೇಗೆ ಸಲ್ಲಿಸುವುದು? ಇಂದು ಪೂರ್ತಿ ತಿಳಿಸಿಕೊಡುತ್ತೇವೆ.
ಮನೆಗಳು ಮತ್ತು ಕಂಪನಿಗಳಲ್ಲಿ ವಿದ್ಯುತ್ ಕೊಡುವ ಹಾಗೆ, ಕೃಷಿ ಭೂಮಿಗೂ (Agriculture) ಕೂಡ ವಿದ್ಯುತ್ ಕನೆಕ್ಷನ್ ಕೊಡಲಾಗುತ್ತದೆ. ಸರ್ಕಾರವು ಕೃಷಿ ಭೂಮಿಗೆ ನೀರು ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ವಿದ್ಯುತ್ ಯೋಜನೆಯನ್ನು ಕೂಡ ನೀಡಲಾಗುತ್ತಿದೆ.
ರೈತರು (Farmers) ಹಣಕಾಸಿನ ವಿಚಾರದಲ್ಲಿ ತೊಂದರೆ ಅನುಭವಿಸಬಾರದು, ಅವರಿಗೆ ಸಹಾಯ ಆಗಬೇಕು ಎಂದು ಸರ್ಕಾರವು ರೈತರಿಗಾಗಿ ಯೋಜನೆಗಳನ್ನು ಜಾರಿಗೆ ತರುತ್ತಿದೆ.
ಅದರಲ್ಲಿ ಒಂದು ಉಚಿತ ವಿದ್ಯುತ್ ಯೋಜನೆ ಕೂಡ ಆಗಿದೆ. ಕೃಷಿ ನೆಲದಲ್ಲಿ ರೈತರಿಗಾಗಿ ವಿದ್ಯುತ್ ಸಂಪರ್ಕ ಕೊಡಲು ವಿಶೇಷ ಪ್ರಯೋಜನ ಕೊಡಲಾಗುತ್ತಿದ್ದು, ಇದರ ಮೂಲಕ ರೈತರಿಗೆ ವಿದ್ಯುತ್ ಗಾಗಿ ವಿಶೇಷ ಡಿಸ್ಕೌಂಟ್ ಕೂಡ ಕೊಡಲಾಗುತ್ತದೆ.
ಕೃಷಿ ನೆಲದಲ್ಲಿ ವಿದ್ಯುತ್ ಪಡೆಯುವುದಕ್ಕೆ ನೀವು ಸರ್ಕಾರಕ್ಕೆ ಅರ್ಜಿ ಸಲ್ಲಿಸಬೇಕು. ಆಗ ಮಾತ್ರ ನಿಮಗೆ ಸರ್ಕಾರದಿಂದ ಉಚಿತ ವಿದ್ಯುತ್ ಸಿಗುತ್ತದೆ. ಸರ್ಕಾರಕ್ಕೆ ಅರ್ಜಿ ಸಲ್ಲಿಸಿ, ಉಚಿತ ವಿದ್ಯುತ್ ಪಡೆಯುವ ಪ್ರಕ್ರಿಯೆಯನ್ನು ಪೂರ್ತಿಯಾಗಿ ತಿಳಿಸಿಕೊಡುತ್ತೇವೆ. ಈ ಕ್ರಮಗಳನ್ನು ಅನುಸರಿಸಿ.
ಕೃಷಿ ನೆಲದಲ್ಲಿ ಉಚಿತ ವಿದ್ಯುತ್ ಪಡೆಯುವುದಕ್ಕೆ ಅರ್ಜಿದಾರರು ಕಡ್ಡಾಯವಾಗಿ ರಾಜ್ಯಕ್ಕೆ ಸೇರಿದ ಪ್ರಜೆಯೇ ಆಗಿರಬೇಕು. ಕೃಷಿ ಮಾಡುವವರಿಗೆ ಮಾತ್ರ ಉಚಿತ ವಿದ್ಯುತ್ ಕೊಡಲಾಗುತ್ತದೆ. ಹಣಕಾಸಿನ ವಿಷಯದಲ್ಲಿ ಕಷ್ಟದಲ್ಲಿ ಇರುವವರಿಗೆ ಮಾತ್ರ ಈ ಸಹಾಯ ಆಗುತ್ತದೆ.
ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಹೀಗಿವೆ.. ಫಿಲ್ ಮಾಡಿದ ಅಪ್ಲಿಕೇಶನ್ ಫಾರ್ಮ್, ಪ್ರಮಾಣ ಪತ್ರ, ಬಾಡಿಗೆ ಇರುವವರಿಗೆ ಬಾಡಿಗೆ ಅಥವಾ ಗುತ್ತಿಗೆ ಒಪ್ಪಂದ ಪತ್ರ, ಅಸಲಿ ಓನರ್ ಇಂದ NOC..
ಗೃಹಜ್ಯೋತಿ ಯೋಜನೆಯಲ್ಲಿ ದೊಡ್ಡ ಟ್ವಿಸ್ಟ್! ಧಿಡೀರ್ ಹೊಸ ರೂಲ್ಸ್ ಜಾರಿಗೆ ತಂದ ರಾಜ್ಯ ಸರ್ಕಾರ
ಬಾಡಿಗೆ ಅಥವಾ ಗುತ್ತಿಗೆ ಸಮಯದ NOC, ಬುಡಕಟ್ಟು ಕೌನ್ಸಿಲ್ ಇಂದ ಪ್ರಮಾಣ ಪತ್ರ, ಮೂರು ತಿಂಗಳ ಹಂಚಿಕೆ ಆದೇಶ, ಐಡೆಂಟಿಟಿ ಪ್ರೂಫ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್ ಪೋರ್ಟ್, ಡಿಎಲ್, ನಗರದ ತೆರಿಗೆ ರಶೀದಿ, ಗ್ರಾಮದ ಅಧಿಕಾರಿಗಳು ನೀಡಿರುವ ಮಾಲೀಕತ್ವ ಪತ್ರ, ಜಾಗ ತೋರಿಸುವ ರೇಖಾ ಚಿತ್ರ, ಗುತ್ತಿಗೆ ಮತ್ತು ಮಾರಾಟದ ವಿವರ, ಮೊಬೈಲ್ ನಂಬರ್, ಇಮೇಲ್ ಐಡಿ, ಇಷ್ಟು ಬೇಕಾಗುತ್ತದೆ.
ಈ ಯೋಜನೆಯನ್ನು ಪಡೆಯಲು ನೀವು ಈ ಕ್ರಮಗಳನ್ನು ಅನುಸರಿಸಬೇಕು
*ಮೊದಲು ನಿಮ್ಮ ಊರಿನ ವಿದ್ಯುತ್ ಕಚೇರಿಗೆ ಹೋಗಿ ಅಪ್ಲಿಕೇಶನ್ ಪಡೆಯಿರಿ.
*ಬಳಿಕ ಅಪ್ಲಿಕೇಶನ್ ನಲ್ಲಿ ಎಲ್ಲಾ ಪ್ರಶ್ನೆಗಳಿಗೂ ಸರಿಯಾಗಿ ಉತ್ತರ ನೀಡಿ.
*ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದ ಬಳಿಕ, ಕೊನೆಯಲ್ಲಿ ನಿಮ್ಮ ಸಹಿ ಹಾಕಿ..
*ಭರ್ತಿಯಾದ ನಂತರ ಅಗತ್ಯವಿರುವ ದಾಖಲೆಗಳ ಜೆರಾಕ್ಸ್ ಕಾಪಿಯನ್ನು ಅಟ್ಯಾಚ್ ಮಾಡಿ
*ನಂತರ ಅಧಿಕಾರಿಗಳು ತಿಳಿಸುವ ಆಫೀಸ್ ಗೆ ಹೋಗಿ, ಹಣ ಪಾವತಿಸಿ ಅರ್ಜಿ ಸಲ್ಲಿಸಿ
*ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತಾರೆ
*ನೀವು ಸಲ್ಲಿಸಿರುವ ಅಪ್ಲಿಕೇಶನ್ ಮತ್ತು ಎಲ್ಲಾ ದಾಖಲೆಗಳು ಸರಿಯಾಗಿದ್ದರೆ, ನಿಮ್ಮ ಕೃಷಿ ಭೂಮಿಗೆ ಉಚಿತ ವಿದ್ಯುತ್ (free electricity for agricultural land) ಸಂಪರ್ಕ ಸಿಗುತ್ತದೆ.
*ನಿಮಗೆ ಒಂದು ರಿಜಿಸ್ಟ್ರೇಶನ್ ನಂಬರ್ ಮತ್ತು ರಿಜಿಸ್ಟ್ರೇಶನ್ ಡೇಟ್ ಕೊಡಲಾಗುತ್ತದೆ.
*ಅಧಿಕಾರಿಗಳಿಂದ ಆದೇಶ ಬಂದ ಬಳಿಕ ನಿಮ್ಮ ಕೃಷಿ ಭೂಮಿಗೆ ವಿದ್ಯುತ್ ಸಂಪರ್ಕ ಸಿಗುತ್ತದೆ.
Do this to get free electricity for agricultural land




