ಹೊಸ ಅಪ್ಡೇಟ್! ಗೃಹಜ್ಯೋತಿ ಯೋಜನೆಯ ಅರ್ಜಿ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಡೈರೆಕ್ಟ್ ಲಿಂಕ್ ಬಿಡುಗಡೆ, ನಿಮ್ಮ ಫೋನ್ ನಲ್ಲೆ ನೋಡಿಕೊಳ್ಳಿ

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ! ಅರ್ಜಿಯ ಸ್ಟೇಟಸ್ ಅನ್ನು ಸುಲಭವಾಗಿ ನಿಮ್ಮ ಫೋನ್ ನಲ್ಲಿಯೇ ತಿಳಿಯಿರಿ

ಗೃಹಜ್ಯೋತಿ ಯೋಜನೆಯ (Gruha Jyothi Scheme) ಲಾಭವನ್ನು ಪಡೆಯಲು ಈಗಾಗಲೇ ಸಾಕಷ್ಟು ಮಂದಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ ಅನೇಕ ಜನರಿಗೆ ತಮ್ಮ ಅರ್ಜಿ ಆಯ್ಕೆಯಾಗಿದೆಯಾ ಇಲ್ಲವಾ ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಇನ್ನು ನೀವು ಸಹ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ಇಂದು ನಾವು ನಿಮ್ಮ ಅರ್ಜಿಯ ಸ್ಟೇಟಸ್ (Application Status) ನೋಡುವುದು ಹೇಗೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಬನ್ನಿ.

ನೀವು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ಅದರ ಅರ್ಜಿಯ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ಫೋನ್ ನಲ್ಲಿ (By Smartphone) ಸುಲಭವಾಗಿ ಒಂದೇ ನಿಮಿಷದಲ್ಲಿ ನೋಡಬಹುದು.

ಹೊಸ ಅಪ್ಡೇಟ್! ಗೃಹಜ್ಯೋತಿ ಯೋಜನೆಯ ಅರ್ಜಿ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಡೈರೆಕ್ಟ್ ಲಿಂಕ್ ಬಿಡುಗಡೆ, ನಿಮ್ಮ ಫೋನ್ ನಲ್ಲೆ ನೋಡಿಕೊಳ್ಳಿ - Kannada News

BPL ಕಾರ್ಡ್ ಇದ್ದವರು ಈ ರೂಲ್ಸ್ ಫಾಲೋ ಮಾಡಲೇಬೇಕು, ಇಲ್ಲದಿದ್ದರೆ ನಿಮ್ಮ ಕಾರ್ಡ್ ಕ್ಯಾನ್ಸಲ್! ವಾರ್ನಿಂಗ್ ಕೊಟ್ಟ ಸರ್ಕಾರ

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳು ನೀವು ಸಲ್ಲಿಸಿದ ಅರ್ಜಿಯ ಸ್ಟೇಟಸ್ ನೋಡಲು ಈ ಕೆಳಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.

https://sevasindhu.karnataka.gov.in/StatucTrack/Track_Status

ನೀವು ಈ ಮೇಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿದ ಕೂಡಲೇ; ಗೃಹಜ್ಯೋತಿ ಯೋಜನೆಯ ಅರ್ಜಿಯ ಸ್ಟೇಟಸ್ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಇನ್ನು ಈ ಪೇಜ್ ನಲ್ಲಿ ನೀವು Track your application status ಎನ್ನುವ ಆಯ್ಕೆಯನ್ನು ಕಾಣುತ್ತೀರಿ.

ಈ ಆಯ್ಕೆಯಲ್ಲಿ ನೀವು ESCOM ಎನ್ನುವ ಆಯ್ಕೆ ಕಂಡರೆ ಕ್ಲಿಕ್ ಮಾಡಿ. ನೀವು ಈ ಆಯ್ಕೆಯನ್ನು ಕ್ಲಿಕ್ ಮಾಡಿದ ಮೇಲೆ ನಿಮಗೆ BESCOM, MESCOM, HESCOM, GESCOM ಎನ್ನುವ ಆಪ್ಷನ್ ಗಳು ಕಾಣುತ್ತದೆ. ಇದರಲ್ಲಿ ನಿಮ್ಮ ವ್ಯಾಪ್ತಿಗೆ ಸಂಬಂಧ ಪಟ್ಟ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

Gruha Jyothi Schemeನಂತರ ನಿಮ್ಮ ವಿದ್ಯುತ್ ಬಿಲ್ (Electricity Bill) ತೆಗೆದುಕೊಂಡು, ಅದರಲ್ಲಿ ನೀಡಲಾಗಿರುವ ನಿಮ್ಮ ಅಕೌಂಟ್ ನಂಬರ್ ಅನ್ನು (Account Number) ನಮೂದಿಸಿ. ನೀವು ಅಕೌಂಟ್ ನಂಬರ್ ನಮೂಧಿಸಿದ ನಂತರ ನೀವು ಕ್ಲಿಕ್ ಸ್ಟೇಟಸ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿದರೆ, ನಿಮಗೆ ನಿಮ್ಮ ಅರ್ಜಿ ಸಲ್ಲಿಕೆಯಾಗಿದೆಯೋ ಇಲ್ಲವೋ ಎನ್ನುವ ಸ್ಟೇಟಸ್ ಕಾಣಿಸುತ್ತದೆ.

ನಿಮ್ಮ ಸ್ಕ್ರೀನ್ ಮೇಲೆ your application for Gruhajyoti yojana has been sent to ESCOM for processing ಎನ್ನುವ ಮಾಹಿತಿ ಕಂಡರೆ, ನಿಮ್ಮ ಅರ್ಜಿ ಸಲ್ಲಿಕೆಯಾಗಿದೆ ಎಂದರ್ಥ. ಇನ್ನು ಆಗಸ್ಟ್ ತಿಂಗಳಿನಿಂದ ನಿಮ್ಮ ವಿದ್ಯುತ್ ಬಿಲ್ ನಲ್ಲಿ  200 ವೋಲ್ಟ್ ಗಿಂತ ಕಡಿಮೆ ವಿದ್ಯುತ್ ಬಳಸಿದರೆ ಝೀರೋ ವಿದ್ಯುತ್ ಬಿಲ್ ಪಡೆಯುತ್ತೀರಿ.

ನಿಮ್ಮ ಮನೆಯ ಕರೆಂಟ್ ಬಿಲ್ 210 ಯೂನಿಟ್ ಗಿಂತ ಹೆಚ್ಚು ಬಂದಿದ್ದರೆ ನೀವು ಕಟ್ಟಬೇಕಿರುವ ಕರೆಂಟ್ ಬಿಲ್ ಎಷ್ಟು ಗೊತ್ತಾ?

ಒಂದು ವೇಳೆ ನೀವು 200 ವೋಲ್ಟ್ ಗಿಂತ ಹೆಚ್ಚು ವಿದ್ಯುತ್ ಬಳಸಿದರೆ, ನೀವು ಉಪಯೋಗಿಸಿದ ವಿದ್ಯುತ್ ಗೆ ತಕ್ಕಂತೆ ಬಿಲ್ ಅನ್ನು ಪಾವತಿಸಬೇಕಾಗುತ್ತದೆ. ವಿದ್ಯುತ್ ಅನ್ನು ಮಿತಿಯಾಗಿ 200 ವೋಲ್ಟ್ ಒಳಗೆ ಬಳಸಲು ಆದಷ್ಟು ಪ್ರಯತ್ನಿಸಿ.

Gruha Jyothi Scheme Application Status Check Online

Follow us On

FaceBook Google News

Gruha Jyothi Scheme Application Status Check Online