ಮಹಿಳೆಯರ ಸ್ವಂತ ವ್ಯಾಪಾರಕ್ಕೆ ಸರ್ಕಾರದಿಂದ ಉಚಿತವಾಗಿ ಸಿಗುತ್ತೆ 25,000 ರೂಪಾಯಿಗಳು! ಇಂದೇ ಅರ್ಜಿ ಸಲ್ಲಿಸಿ

ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ (Shrama Shakti vishesha mahila Scheme) ಲಾಭವನ್ನು 18 ರಿಂದ 35 ವರ್ಷ ವಯಸ್ಸಿನ ಮಹಿಳೆಯರು ಪಡೆದುಕೊಳ್ಳಬಹುದು.

ರಾಜ್ಯ ಸರ್ಕಾರ ತಮ್ಮ ಗ್ಯಾರಂಟಿ ಯೋಜನೆಗಲ್ಲಿ ಒಂದಾಗಿರುವ ಗೃಹಲಕ್ಷ್ಮಿ (Gruha Lakshmi) ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಕೋಟ್ಯಾಂತರ ರಾಜ್ಯದ ಗೃಹಿಣಿಯರು ಪ್ರತಿ ತಿಂಗಳು 2,000ರೂ. ಗಳನ್ನು ಉಚಿತವಾಗಿ ಸರಕಾರದಿಂದಲೇ ಪಡೆಯಬಹುದಾಗಿದೆ.

ಈ ಯೋಜನೆ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಮಹತ್ವವನ್ನು ಕೊಡುತ್ತದೆ, ಇದೇ ರೀತಿಯಾಗಿ ಮಹಿಳೆಯರಿಗೆ ತಮ್ಮದೇ ಆಗಿರುವ ವೃತ್ತಿ ಅಥವಾ ಉದ್ಯಮ (Own Business) ಆರಂಭಿಸುವುದಾದರೆ ಸರ್ಕಾರದಿಂದ ಸಾಲ ಸೌಲಭ್ಯ ಕೂಡ ಸಿಗುತ್ತದೆ.

ಅದರಲ್ಲೂ ತೆಗೆದುಕೊಂಡ ಸಾಲದಲ್ಲಿ (Business Loan) ಅರ್ಧದಷ್ಟು ಮಾತ್ರ ಪಾವತಿ ಮಾಡಿದ್ರೆ ಸಾಕು, ಇನ್ನು ಅರ್ಧದಷ್ಟು ಸಾಲವನ್ನು ಸರ್ಕಾರವೇ ಪಾವತಿ ಮಾಡುತ್ತದೆ.

ಮಹಿಳೆಯರ ಸ್ವಂತ ವ್ಯಾಪಾರಕ್ಕೆ ಸರ್ಕಾರದಿಂದ ಉಚಿತವಾಗಿ ಸಿಗುತ್ತೆ 25,000 ರೂಪಾಯಿಗಳು! ಇಂದೇ ಅರ್ಜಿ ಸಲ್ಲಿಸಿ - Kannada News

ಬಡಜನರಿಗಾಗಿ ಹೊಸ ಭಾಗ್ಯ ಜಾರಿಗೆ ತರಲು ನಿರ್ಧರಿಸಿದ ಸರ್ಕಾರ! ಸಿಎಂ ಸಿದ್ದರಾಮಯ್ಯ ಘೋಷಣೆ

ಮಹಿಳೆಯರು ಕಲಾತ್ಮಕ ಹಾಗೂ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸಿಕೊಂಡು ಅದನ್ನೇ ಕಸುಬಾಗಿ ಮುಂದುವರಿಸಿದರೆ ಅಥವಾ ಯಾವುದೇ ಸಣ್ಣ ವ್ಯಾಪಾರವನ್ನು(Small Business) ಆರಂಭಿಸುವುದಾದರೆ ಕೇವಲ ನಾಲ್ಕು ಪರ್ಸೆಂಟ್ ಬಡ್ಡಿ ದರದಲ್ಲಿ 50,000 ವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.

36 ತಿಂಗಳಲ್ಲಿ ಸಾಲ ತೆಗೆದುಕೊಂಡ ಮಹಿಳೆಯರು 50% ನಷ್ಟು ಪಾವತಿ ಮಾಡಬೇಕು. ಇನ್ನು ಉಳಿದ 50 ಪರ್ಸೆಂಟ್ ನಷ್ಟು ಹಣವನ್ನು ಸಹಾಯಧನವಾಗಿ ಸರ್ಕಾರ ನೀಡುತ್ತದೆ. ಅಂದರೆ 50,000 ರೂ. ತೆಗೆದುಕೊಂಡರೆ ಮಹಿಳೆ ಕೇವಲ 25000ಗಳನ್ನು ಪಾವತಿ ಮಾಡಿದರೆ ಸಾಕು. ಇನ್ನೂ 25,000ರೂ. ಸರ್ಕಾರದಿಂದ ಸಹಾಯಧನವಾಗಿ ಸಿಗುತ್ತದೆ.

ಫ್ರೀ ಬಸ್! ಶಕ್ತಿ ಯೋಜನೆ ಕುರಿತು ಮಹತ್ವದ ನಿರ್ಧಾರ, ಹಣ ಕಟ್ಟಿ ಪ್ರಯಾಣ ಮಾಡುವಂತೆ ಆದೇಶ

ಈ ಯೋಜನೆಯ ಪ್ರಯೋಜನವನ್ನು ಯಾರು ಪಡೆದುಕೊಳ್ಳಬಹುದು

Shrama Shakti vishesha mahila Schemeಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ (Shrama Shakti vishesha mahila Scheme) ಲಾಭವನ್ನು 18 ರಿಂದ 35 ವರ್ಷ ವಯಸ್ಸಿನ ಮಹಿಳೆಯರು ಪಡೆದುಕೊಳ್ಳಬಹುದು. ಅರ್ಜಿ ಹಾಕುವ ಮಹಿಳೆಯ ಕುಟುಂಬದ ವಾರ್ಷಿಕ ಆದಾಯ ನಗರ ಪ್ರದೇಶಗಳಲ್ಲಿ (Urban) ಒಂದು ಲಕ್ಷದ 3000 ಹಾಗೂ ಗ್ರಾಮೀಣ (Village) ಪ್ರದೇಶದಲ್ಲಿ 81,000ಗಳನ್ನು ಮೀರಿರಬಾರದು.

ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆಯ ಅಡಿಯಲ್ಲಿ ಅತಿ ಕಡಿಮೆ ಬಡ್ಡಿ ದರದಲ್ಲಿ ಅರ್ಧದಷ್ಟು ಸಾಲವನ್ನು ಮಾತ್ರ ಪಾವತಿ ಮಾಡಬಹುದಾದ ಸಾಲ ಸೌಲಭ್ಯವನ್ನು ತೆಗೆದುಕೊಂಡು ಮಹಿಳೆಯರು ತಮ್ಮದೇ ಆಗಿರುವ ವೃತ್ತಿ ಆರಂಭಿಸಬಹುದು.

ಹಳೆ ಬಾಡಿಗೆದಾರ 200 ಯೂನಿಟ್ ಗಿಂತ ಹೆಚ್ಚಿಗೆ ವಿದ್ಯುತ್ ಬಳಸಿದ್ದರೆ ಹೊಸ ಬಾಡಿಗೆದಾರನಿಗೆ ಫ್ರೀ ವಿದ್ಯುತ್ ಸಿಗುತ್ತಾ?

ಉದಾಹರಣೆಗೆ ಹಣ್ಣು, ತರಕಾರಿ, ಮೀನು, ಮಾಂಸಗಳ ಮಾರಾಟ, ಟೈಲರಿಂಗ್ ಅಥವಾ ಸಣ್ಣ ಪ್ರಮಾಣದ ಇತರ ಉದ್ದಿಮೆ ಮಾಡಬಹುದು.

ಇನ್ನು ಶಮಶಕ್ತಿ ವಿಶೇಷ ಮಹಿಳಾ ಯೋಜನೆ ಅಲ್ಪಸಂಖ್ಯಾತ (Minorities) ಸಮುದಾಯದ ವಿಧವೆಯರಿಗೆ, ವಿಚ್ಛೇದಿತ ಮಹಿಳೆಗೆ ಹಾಗೂ ಸವಿವಾಹಿತ ಮಹಿಳೆಯರಿಗೆ ಲಭ್ಯವಿದೆ. (ಮುಸ್ಲಿಂ, ಕ್ರಿಶ್ಚಿಯನ್ನರು, ಸಿಖ್, ಬೌದ್ಧ, ಜೈನ, ಪಾರ್ಸಿ ಸಮುದಾಯದವರು) ಈ ಮೇಲಿನ ಅರ್ಹತೆಗಳು ನಿಮ್ಮಲ್ಲಿ ಇದ್ದರೆ ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ kmdconline.karnataka.gov.in.ನಲ್ಲಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ 08539225008 ಈ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25 ಸಪ್ಟೆಂಬರ್ 2023.

Shrama Shakti vishesha mahila Scheme Benefit Details

Follow us On

FaceBook Google News

Shrama Shakti vishesha mahila Scheme Benefit Details