ರಾಜ್ಯ ಕಾಂಗ್ರೆಸ್ ಸರ್ಕಾರ (Karnataka Congress Government) ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಹುತೇಕ ಸಕ್ಸಸ್ ಆಗಿದೆ ಎನ್ನಬಹುದು, ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ (Gruha lakshmi Yojana) ಹಾಗೂ ಶಕ್ತಿ ಯೋಜನೆಯ (Shakti Scheme) ಮೂಲಕ ಹೆಚ್ಚಿನ ಪ್ರಯೋಜನವಾದರೆ, ಸಾಕಷ್ಟು ಪುರುಷರು ವಿದ್ಯುತ್ ಬಿಲ್ ಪಾವತಿ ಮಾಡುವುದನ್ನು ತಪ್ಪಿಸಿಕೊಂಡಿದ್ದು ತುಸು ನಿರಾಳರಾಗಿದ್ದಾರೆ ಎನ್ನಬಹುದು.
ಇತ್ತೀಚೆಗೆ ವಿದ್ಯುತ್ ನ ಯೂನಿಟ್ ಬಿಲ್ (Unit Bill) ಕೂಡ ಜಾಸ್ತಿಯಾಗಿದೆ. ಇದೇ ಕಾರಣಕ್ಕೆ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿತ್ತು ಪ್ರತಿ ತಿಂಗಳು 1,000, 2000ರೂ. ಪಾವತಿ ಮಾಡಬೇಕಾಗಿತ್ತು.
ಆದರೆ ಈಗ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವವರಿಗೆ ಒಂದೇ ಒಂದು ರೂಪಾಯಿ ಕೂಡ ಪಾವತಿ ಮಾಡಬೇಕಾಗಿಲ್ಲ, ಸಂಪೂರ್ಣ ಉಚಿತವಾಗಿ ಪ್ರತಿ ತಿಂಗಳು ವಿದ್ಯುತ್ (Free Electricity) ಬಳಸಿಕೊಳ್ಳಬಹುದು.
ಇದರಿಂದ ಲಕ್ಷಾಂತರ ಜನರಿಗೆ ಸಹಾಯವಾಗಿದ್ದಂತೂ ಸುಳ್ಳಲ್ಲ. ಆದರೆ ಗೃಹ ಜ್ಯೋತಿ ಯೋಜನೆಗೆ ಸಂಬಂಧಪಟ್ಟ ಹಾಗೆ ಇನ್ನು ಸಾಕಷ್ಟು ಜನರಲ್ಲಿ ಗೊಂದಲ ಇದೆ ಯಾಕೆಂದರೆ ಹಲವರು ತಮಗೂ ಫ್ರೀ ವಿದ್ಯುತ್ (Free Current) ಬರಬಹುದು ಎಂದು ಊಹಿಸಿದರೆ ಆ ಊಹೆ ತಪ್ಪಾಗಿದೆ, ಈಗಲೂ ಕೂಡ ವಿದ್ಯುತ್ ಬಿಲ್ (Electricity Bill) ಕಟ್ಟುವಂತೆ ಆಗಿದೆ.
ಆವರೇಜ್ ಲೆಕ್ಕಾಚಾರ (Average Bill)
ಒಂದು ವರ್ಷದಲ್ಲಿ ಆವರೇಜ್ ಎಷ್ಟು ಯೂನಿಟ್ ವಿದ್ಯುತ್ತನ್ನು ಬಳಸಲಾಗಿದೆ ಎಂಬುದರ ಆಧಾರದ ಮೇಲೆ ಫ್ರೀ ವಿದ್ಯುತ್ ಸಿಗುತ್ತದೆಯೋ ಇಲ್ಲವೋ ಎಂಬುದನ್ನು ತೀರ್ಮಾನಿಸಲಾಗುತ್ತದೆ. ನೀವು ವರ್ಷದಲ್ಲಿ ಮೂರು ನಾಲ್ಕು ಬಾರಿ ಇನ್ನೂರು ಯೂನಿಟ್ ಮೀರಿದ್ದು ಉಳಿದ ತಿಂಗಳುಗಳಲ್ಲಿ 190 ಯೂನಿಟ್ ನಷ್ಟು ಬಳಸಿದರೆ ಆಗ ಆವರೇಜ್ 200 ಯೂನಿಟ್ ಬಂದರೆ ನೀವು ಪ್ರತಿ ತಿಂಗಳು ಬಿಲ್ ಪಾವತಿ ಮಾಡಲೇಬೇಕು.
ಆದ್ರೆ ನಿಮ್ಮ ಆವರೇಜ್ ಲೆಕ್ಕಾಚಾರ 200 ಯುನಿಟ್ ಒಳಗೆ ಇದ್ದರೆ, ಒಂದೇ ಒಂದು ರೂಪಾಯಿಗಳನ್ನು ಕೂಡ ಕಟ್ಟಬೇಕಾಗಿಲ್ಲ.
ಗೃಹಜ್ಯೋತಿ ಯೋಜನೆಯ (Gruha Jyothi Scheme) ಮುಖ್ಯವಾಗಿರುವ ಪ್ರಯೋಜನ ಅಂದರೆ, ಬಾಡಿಗೆದಾರರು (Rent House) ಕೂಡ ಈ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ ಪಡೆದುಕೊಳ್ಳಬಹುದು. ಮನೆಯ ಓನರ್ ನ ಆರ್ ಆರ್ ನಂಬರ್ (RR Number) ಆಧಾರದ ಮೇಲೆ ಬಾಡಿಗೆದಾರರು ಕೂಡ ಉಚಿತ ವಿದ್ಯುತ್ ಪಡೆಯಲು ಅರ್ಜಿ ಹಾಕಬಹುದು ಎಂದು ಸರ್ಕಾರ ತಿಳಿಸಿತ್ತು. ಅದರಂತೆ ಹಲವು ಬಾಡಿಗೆದಾರರು ಉಚಿತ ವಿದ್ಯುತ್ ಪಡೆದುಕೊಳ್ಳುತ್ತಿದ್ದಾರೆ.
ಇದು ಹಲವರಲ್ಲಿ ಇರುವ ಗೊಂದಲ. ನೀವು ಒಂದು ಬಾಡಿಗೆ ಮನೆಯಲ್ಲಿ (Rent House) ಇರುತ್ತೀರಿ ಎಂದು ಭಾವಿಸಿ. ಆಗ ನೀವು 200 ಯೂನಿಟ್ ಗಿಂತಲೂ ಹೆಚ್ಚಿಗೆ ವಿದ್ಯುತ್ ಬಳಸಿರುತ್ತೀರಿ ಹಾಗಾಗಿ ನಿಮಗೆ ಫ್ರೀ ವಿದ್ಯುತ್ ಸಿಗುವುದಿಲ್ಲ.
ಈಗ ನೀವು ಆ ಮನೆಯನ್ನು ಬಿಟ್ಟು ಬೇರೆ ಕಡೆಗೆ ಹೋಗಿದ್ದೀರಿ ಹಾಗೂ ನೀವು ಇರುವ ಬಾಡಿಗೆ ಮನೆಗೆ ಮತ್ತೋಬ್ಬ ವ್ಯಕ್ತಿ ಬಂದಿದ್ದಾನೆ. ಆತ ಹಿಂದಿನ ಮನೆಯಲ್ಲಿಯೂ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುತ್ತಿದ್ದ ಹಾಗೂ ಈ ಮನೆಗೆ ಬಂದ ಮೇಲೆಯೂ ಕೂಡ ಕಡಿಮೆ ವಿದ್ಯುತ್ ಬಳಸುತ್ತಿದ್ದಾನೆ. ಹಾಗಾದ್ರೆ ಆತನಿಗೆ ಉಚಿತ ವಿದ್ಯುತ್ ಸಿಗುತ್ತದೆಯೇ? ಉತ್ತರ ಇಲ್ಲ.
ಮೊದಲ ಬಾಡಿಗೆದಾರ 200 ಯೂನಿಟ್ ಗಿಂತಲೂ ಹೆಚ್ಚಿಗೆ ವಿದ್ಯುತ್ ಬಳಸುತ್ತಿದ್ದು ಆತನ ಆವರೇಜ್ 200 ಯೂನಿಟ್ ದಾಟಿದ್ದರೆ ಆ ಆರ್ ಆರ್ ನಂಬರ್ಗೆ ಗೃಹಜೋತಿ ಯೋಜನೆಯ ಪ್ರಯೋಜನ ಸಿಗುವುದಿಲ್ಲ ಹಾಗಾಗಿ ಅದೇ ಆರ್ ಆರ್ ನಂಬರ್ ಗೆ ಇನ್ನೊಬ್ಬ ಬಾಡಿಗೆದಾರ ಅರ್ಜಿ ಸಲ್ಲಿಸುವಂತಿಲ್ಲ.
ಅದರಲ್ಲೂ ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಗಿದು ಹೋಗಿರುವುದರಿಂದ ಹೊಸ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
ಮುಂದಿನ ದಿನಗಳಲ್ಲಿ ಸರ್ಕಾರ ಪ್ರತಿ ವರ್ಷ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಅನುಮತಿ ನೀಡಿದರೆ ಅಥವಾ ಹಳೆಯ ಅರ್ಜಿಗಳನ್ನು ಪರಿಷ್ಕರಣೆ ಮಾಡಿದರೆ ಹೊಸದಾಗಿ ಬಾಡಿಗೆಗೆ ಬಂದಿರುವವರು ಕೂಡ ಅದೇ ಆರ್ ಆರ್ ನಂಬರ್ ನಲ್ಲಿ ಅರ್ಜಿ ಸಲ್ಲಿಸಲು ಅನುಮತಿ ಸಿಕ್ಕರು ಸಿಗಬಹುದು. ಆದರೆ ಇದರ ಬಗ್ಗೆ ಯಾವುದೇ ಮಾಹಿತಿಯನ್ನು ಸರ್ಕಾರ ನೀಡಿಲ್ಲ.
Gruha Jyothi Scheme Free Electricity Update for Rent House
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
Gruha Jyothi Scheme Free Electricity Update for Rent House