ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ವಿಶೇಷವಾಗಿ ಎಲ್ಲಾ ಮಹಿಳೆಯರಿಗೋಸ್ಕರ ತಂದಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಆಗಿದೆ. ಮನೆಯನ್ನು ನಡೆಸಿಕೊಂಡು ಹೋಗುವ ಗೃಹಿಣಿಯರಿಗೆ ಆರ್ಥಿಕವಾಗಿ ಸಹಾಯ ಆಗಬೇಕು ಎಂದು ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಆಗಸ್ಟ್ 30ರಂದು ಈ ಯೋಜನ ಮೈಸೂರಿನಲ್ಲಿ (Mysore) ಅದ್ಧೂರಿಯಾಗಿ ಲಾಂಚ್ ಆಯಿತು.

ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಜನರ ಸಮ್ಮುಖದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಯಿತು.

Gruha Lakshmi balance Money deposit, money transferred only for such People

ಒಂದು ತಿಂಗಳ ಹಿಂದಿನಿಂದಲೇ ಈ ಯೋಜನೆಗೆ ಅರ್ಜಿ ಹಾಕುವುದಕ್ಕೆ ಸಮಯ ನೀಡಲಾಗಿತ್ತು. ಈಗಲೂ ಕೂಡ ಜನರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು, ಆದರೆ ತಾತ್ಕಾಲಿಕವಾಗಿ ಸ್ಥಗಿತವಾಗಿರುವ ಬಗ್ಗೆಯೂ ಮಾಹಿತಿ ಸಿಕ್ಕಿದೆ.

ಅನ್ನಭಾಗ್ಯ ಯೋಜನೆಗಾಗಿ ಹೊಸ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ ಮಾಡಿದ ಸರ್ಕಾರ! ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ

ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಜಾರಿಯಾದ ನಂತರ ಕೆಲವು ಹೆಣ್ಣುಮಕ್ಕಳಿಗೆ ಯೋಜನೆಯ ಹಣ ತಲುಪಿದೆ, ಇನ್ನು ಕೆಲವು ಹೆಣ್ಣುಮಕ್ಕಳಿಗೆ ತಲುಪಿಲ್ಲ. ಒಂದೊಂದು ಹಂತದಲ್ಲಿ ಮಹಿಳೆಯರಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಮಾಹಿತಿ ಸಿಕ್ಕಿದೆ.

ಹಲವು ಹೆಣ್ಣುಮಕ್ಕಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಬಂದಿಲ್ಲ. ಕೆಲವರಿಗೆ ಮಾತ್ರ ಹಣ ಜಮಾ (Money Deposit) ಆಗಿದೆ. ಹಾಗಾಗಿ ಮಹಿಳೆಯರು ತಮಗೆ ಯಾಕೆ ಹಣ ಬಂದಿಲ್ಲ ಎಂದು ತಲೆಕೆಡಿಸಿಕೊಂಡಿದ್ದಾರೆ. ಹಣ ಬರದೆ ಇರುವುದಕ್ಕೆ ಕೆಲವರಿಗೆ ಬ್ಯಾಂಕ್ ಸಮಸ್ಯೆ ಕಾರಣ ಎಂದು ಹೇಳಿದರೆ, ಇನ್ನು ಕೆಲವರಿಗೆ ರೇಶನ್ ಕಾರ್ಡ್ ಸಮಸ್ಯೆ ಇಂದ ಇನ್ನು ಹಣ ಬಂದಿಲ್ಲ ಎಂದು ಹೇಳಲಾಗಿದೆ.

ಈ ವಿಚಾರ ಗೊಂದಲ ಸೃಷ್ಟಿಸಿದ್ದ ಕಾರಣ ಇದೀಗ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಈ ವಿಚಾರದ ಬಗ್ಗೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ. ಅವರು ಹೇಳಿದ್ದೇನು ಎಂದು ತಿಳಿಸುತ್ತೇವೆ ನೋಡಿ..

ಹೆಣ್ಣುಮಕ್ಕಳ ತಂದೆ ತಾಯಿಗೆ ಬಿಗ್ ಆಫರ್ ನೀಡಿದ ಸರ್ಕಾರ! 2 ಲಕ್ಷ ಗ್ಯಾರಂಟಿ, ಇಂದೇ ಅರ್ಜಿ ಸಲ್ಲಿಸಿ

Gruha Lakshmi Yojaneಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಗ್ಗೆ ಮಾತನಾಡಿ, “ರಾಜ್ಯದ ಹಲವು ಮಹಿಳೆಯರ ಬ್ಯಾಂಕ್ ಖಾತೆಗೆ ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎನ್ನುವ ಕಾರಣಕ್ಕೆ ಹಲವು ಮಹಿಳೆಯರು ದೂರು ನೀಡುತ್ತಿದ್ದಾರೆ.. ಇದಕ್ಕೆ ಕಾರಣ ಬೆರೆಯೇ ಇರಬಹುದು. ಈಗಾಗಲೇ ಸರ್ಕಾರದಿಂದ ಗೃಹಲಕ್ಷ್ಮೀ ಯೋಜನೆಯ ಹಣ ಬ್ಯಾಂಕ್ ಗೆ ರವಾನೆ ಆಗಿದೆ. ಅವುಗಳ ಪೈಕಿ ಕೆಲವು ಬ್ಯಾಂಕ್ ಗಳಿಗೆ (Banks) ಹಣಕಾಸಿನ ವಿಚಾರದಲ್ಲಿ ಕೆಲವು ಮಿತಿ ಇದ್ದು, ಇದು ಬ್ಯಾಂಕ್ ಗೆ ಸಂಬಂಧಪಟ್ಟ ಸಮಸ್ಯೆ ಆಗಿರುತ್ತದೆ.

ಅರ್ಜಿ ಸಲ್ಲಿಸಿರುವವರಲ್ಲಿ 59 ಲಕ್ಷ ಮಹಿಳೆಯರು ಹಣ ಪಡೆದಿದ್ದಾರೆ. 8 ಲಕ್ಷ ಮಹಿಳೆಯರ ಬ್ಯಾಂಕ್ ಅಕೌಂಟ್ ಸಮಸ್ಯೆ ಆಗಿದೆ. ಅವರದ್ದು ಡೆಡ್ ಅಕೌಂಟ್ ಆಗಿದ್ದು ಅಂಥವರ ಹೆಸರು ಲಿಸ್ಟ್ ಮಾಡಲು ಅಂಗನವಾಡಿ ಕಾರ್ಯಾಕರ್ತೆಯರಿಗೆ ತಿಳಿಸಲಾಗಿದೆ.

ಹಸು ಖರೀದಿಗೆ 50 ರಿಂದ 75% ಸಬ್ಸಿಡಿ ಕೊಡುತ್ತಿದೆ ರಾಜ್ಯ ಸರ್ಕಾರ! ಈ ರೀತಿ ಇಂದೇ ಅಪ್ಲೈ ಮಾಡಿ

ಅಕೌಂಟ್ ಲ್ಯಾಪ್ಸ್ ಆಗಿರುವವರ ವಿಚಾರನ್ನು ಶೀಘ್ರದಲ್ಲೇ ಸರಿ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದೇವೆ, ಅವರಿಗೆಲ್ಲಾ ಶನಿವಾರದ ಒಳಗೆ ಹಣ ಸಿಗಲಿದೆ ಎಂದು ಹೇಳಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರ ಮಾತು ಕೇಳಿದರೆ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿರುವವರಿಗೆ ಖಂಡಿತವಾಗಿ ಹಣ ಬರುತ್ತದೆ ಎಂದು ಹೇಳಲಾಗಿದೆ. ಒಂದು ವೇಳೆ ಬಂದಿಲ್ಲ ಎಂದರೆ ಅವರು ಅರ್ಜಿ ಹಾಕಿಲ್ಲ ಅಥವಾ ಬ್ಯಾಂಕ್ ಅಕೌಂಟ್ (Bank Account) ತೊಂದರೆ ಆಗಿದೆ ಎಂದು ಅರ್ಥ. ಇದು ಜನರ ಸಮಸ್ಯೆ ಎಂದು ಹೇಳಲಾಗುತ್ತಿದೆ. ಹಣ ಬಂದಿಲ್ಲ ಎಂದರೆ ನಿಮ್ಮ ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ನಲ್ಲಿ ಯಾವುದೇ ಸಮಸ್ಯೆ ಇಲ್ಲ ಎನ್ನುವುದನ್ನು ಪರಿಶೀಲಿಸಿಕೊಳ್ಳಿ.

Reason for the Not Deposit of the Gruha Lakshmi Yojana Money Even Message was Received