Karnataka NewsBangalore News

ಇನ್ಮುಂದೆ ಜಮೀನು, ಆಸ್ತಿ ದಾಖಲೆ, ಮಾರಾಟದ ವಿಚಾರದಲ್ಲಿ ಕಠಿಣ ನಿಯಮ ಜಾರಿ

ಇಂದಿನ ದಿನದಲ್ಲಿ ಪ್ರತಿಯೊಬ್ಬರು ದುಡಿಯುತ್ತಾರೆ. ಕೆಲವರು ಖಾಸಗಿ ಕಂಪನಿ (private company) ಗಳಲ್ಲಿ, ಕೆಲವರು ಸರ್ಕಾರಿ ನೌಕರಿ (government job) ಯಲ್ಲಿ ದುಡಿದರೆ ಇನ್ನು ಕೆಲವರು ವ್ಯಾಪಾರ ವ್ಯವಹಾರ (own business) ಮಾಡಿ ಹಣ ಸಂಪಾದಿಸುತ್ತಾರೆ.

ಹೀಗೆ ದುಡಿದು ಉಳಿತಾಯ ಮಾಡಿದ ಹಣವನ್ನು ಜಮೀನು ಇಲ್ಲವೇ ಸೈಟ್ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ ಈ ಸೈಟ್ ಅಥವಾ ಜಮೀನನ್ನು ಫೋರ್ಜರಿ ಮಾಡಿ ಮಾರಾಟ ಮಾಡುವವರು ಇರುತ್ತಾರೆ. ಇದರಿಂದ ಕೊಂಡುಕೊಂಡವರು ಮೋಸ ಹೋಗುತ್ತಾರೆ. ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.

Big update for those who have a house in government land

ಗೃಹಲಕ್ಷ್ಮಿ ಯೋಜನೆ ಹಣ ಸಿಗದವರಿಗೆ ರಾತ್ರೋ-ರಾತ್ರಿ ಬಿಗ್ ಅಪ್ಡೇಟ್! ಹೊಸ ಆದೇಶ

ಡಿಜಟಲಿಕರಣ ಪ್ರಕ್ರಿಯೆ: (digitalisation)

ಇನ್ಮುಂದೆ ಆಸ್ತಿ ದಾಖಲೆಯ (property documents) ಮೋಸ ಹಾಗೂ ವಂಚನೆಯನ್ನು ತಪ್ಪಿಸಲು ರಾಜ್ಯ ಸರ್ಕಾರವು ಕಠಿಣ ನಿಯಮಗಳನ್ನು ರೂಪಿಸಿದೆ. ಇನ್ಮುಂದೆ ಭೂ ದಾಖಲೆಗಳ ಎಲ್ಲ ವಿವರಗಳನ್ನು ಡಿಜಿಟಲಿಕರಣ ಮಾಡಲಾಗುತ್ತಿದೆ.

ಇದರಿಂದ ಸಾರ್ವಜನಿಕ, ರೈತರಿಗೆ ಬಹಳ ಅನುಕೂಲವಾಗುತ್ತದೆ. ತಾಲೂಕು ಕಚೇರಿ (district office), ಕಂದಾಯ ಇಲಾಖೆ (revenue department) ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ. ಮನೆಯಲ್ಲಿಯೇ ಕುಳಿತು ತಮಗೆ ಬೇಕಾದ ದಾಖಲಾತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಇಂತಹವರು ಕೂಡಲೇ ರೇಷನ್ ಕಾರ್ಡ್ ಸರೆಂಡರ್ ಮಾಡಬೇಕು! ಇಲ್ಲದೆ ಇದ್ರೆ ಕಠಿಣ ಕ್ರಮ

ಯಾವಾಗ ಆರಂಭ:

ಈ ಡಿಜಟಲಿಕರಣ ಪ್ರಕ್ರಿಯೆಗೆ ಜನವರಿ ಮೊದಲ ವಾರದಲ್ಲಿ ಚಾಲನೆ ನೀಡಲಾಗುತ್ತದೆ. ಜಮೀನಿನ ದಾಖಲೆಗಳನ್ನು ಡಿಜಿಟಲೈಸ್ (digitalise of land documents) ಮಾಡಿ ಜಮೀನಿನ ದಾಖಲೆಗಳ ವಿವರಗಳೊಂದಿಗೆ ಮಾಲೀಕರ ಆಧಾರ್ ಕಾರ್ಡ್ ಸಹ ಲಿಂಕ್ (Aadhaar Card link) ಮಾಡಲಾಗುತ್ತದೆ.

Property Documentsಪ್ರಯೋಜನ ಏನು?:

ಈ ಡಿಜಿಟಲ್ ಭೂ ದಾಖಲೆಯಿಂದ (Property Documents) ರೈತರಿಗೆ, ಜನಸಾಮಾನ್ಯರಿಗೆ ಬಹಳಷ್ಟು ಪ್ರಯೋಜನಗಳಿವೆ. ಇದರಿಂದಾಗಿ ಬೇಕಾದ ಸಮಯಕ್ಕೆ ದಾಖಲೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಜೊತೆಗೆ ಸರಿಯಾದ ರೀತಿಯಲ್ಲಿ ಜಮೀನನ್ನು ಹಂಚಿಕೆ ಮಾಡಬಹುದಾಗಿದೆ.

ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್! 4ನೇ ಕಂತಿನ ಹಣ ಬಿಡುಗಡೆ ಆಗೋಲ್ವಾ?

ಡಿಜಿಟಲ್ ದಾಖಲೆ ಇದ್ದರೆ ಜಮೀನನ್ನು ಸುಲಭವಾಗಿ ನೋಡಬಹುದು. ಇನ್ಮುಂದೆ ಸಾಮಾನ್ಯ ಸೇವಾ ಕೇಂದ್ರದಲ್ಲೂ ವ್ಯಕ್ತಿ ತನ್ನ ಜಮೀನಿಗೆ ಕುರಿತಾದ ಮಾಹಿತಿ ಪಡೆಯಬಹುದಾಗಿದೆ. ಅಲ್ಲದೆ ಜಮೀನಿನ ಫೋರ್ಜರಿ ದಾಖಲೆ ಸೃಷ್ಟಿ ಮಾಡಿ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಇದರ ಜೊತೆ ಜಮೀನಿನ ವಹಿವಾಟನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ.

strict rules will be enforced in the matter of land, property records and sales

Our Whatsapp Channel is Live Now 👇

Whatsapp Channel

Related Stories